ಕಿನ್ನರಿ ಸೀರಿಯಲ್ ನ ಮಣಿ ಈಗ ಹೇಗಿದ್ದಾಳೆ..? ಏನು ಮಾಡುತ್ತಿದ್ದಾಳೆ ಗೊತ್ತಾ..?

in ಮನರಂಜನೆ/ಸಿನಿಮಾ 488 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತ ಇದ್ದಂತಹ ಕಿನ್ನರಿ ಎಂಬ ಧಾರಾವಾಹಿಯಲ್ಲಿ ಮಣಿ ಎಂಬ ಪಾತ್ರವನ್ನು ಆರಂಭದಲ್ಲಿ ಪುಟ್ಟ ಹುಡುಗಿ ದಿಶಾ ನಿರ್ವಹಿಸುತ್ತಿದ್ದಳು. ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿನ್ನರಿ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರವಾಹಿಯಲ್ಲಿ ಮಣಿ ಪಾತ್ರದ ಬಾಲ್ಯ ಹಾಗೂ ಯೌವ್ವನವನ್ನು ತೋರಿಸಲಾಗಿತ್ತು. ಮಣಿ ಬಾಲ್ಯದ ಪಾತ್ರದಲ್ಲಿ ಪುಟ್ಟ ಹುಡುಗಿ ದಿಶಾ ನಟಿಸಿದ್ದರು. ಈಗ ಅವಳು ಹೇಗಿದ್ದಾಳೆ..? ಏನು ಮಾಡುತ್ತಿದ್ದಾಳೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ..! ಮೈಸೂರಿನಲ್ಲಿ ಒಂದನೇ ತರಗತಿ ಓದುತ್ತಿದ್ದಾಗಲೇ ಪುಟ್ಟ ಹುಡುಗಿ ದಿಶಾ ಕಿನ್ನರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಳು. ಓದಿನಲ್ಲಿಯೂ ಮುಂದಿದ್ದ ದಿಶಾಗೆ ಡಾಕ್ಟರ್ ಆಗುವ ಆಸೆ ಇತ್ತು. ಆದರೆ ದಿಶಾ ಅಮ್ಮನಿಗೆ ತನ್ನ ಮಗಳು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಅದೇ ಸಮಯಕ್ಕೆ ಕಿನ್ನರಿ ಧಾರಾವಾಹಿ ಕೂಡ ಆರಂಭವಾಗುತ್ತಿತ್ತು. ಕಿನ್ನರಿ ಸೀರಿಯಲ್ ನ ತಂಡ ಮಣಿ ಎಂಬ ಪಾತ್ರಕ್ಕೆ ಪುಟ್ಟ ಹುಡುಗಿಯನ್ನು ಹುಡುಕುತ್ತಿದ್ದರು. ಆಗ ದಿಶಾ ಆಡಿಷನ್ ಗೆ ಹೋಗಿ ಆಯ್ಕೆ ಸಹ ಆಗಿದ್ದಳು. ಬೆಂಗಳೂರಿನಲ್ಲಿ ನಡೆದ ಈ ಆಡಿಷನ್ ನಲ್ಲಿ ಸುಮಾರು ಇನ್ನೂರು ಮಂದಿ ಮಕ್ಕಳು ಭಾಗವಹಿಸಿದ್ದರು. ನಟನೆಯ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಕೂಡ ದಿಶಾ ಕಿನ್ನರಿ ಧಾರವಾಹಿಯ ಮಣಿ ಪಾತ್ರಕ್ಕೆ ಆಯ್ಕೆಯಾಗಿದ್ದಳು.

Advertisement

Advertisement

ಬಿಗ್ ಬಾಸ್ ಸೀಸನ್ – 3 ನಡೆಯುವಾಗ ದಿಶಾ ಒಂದು ದಿನದ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದಳು. ಅಷ್ಟೇ ಅಲ್ಲ ಆ ಮನೆಯಲ್ಲಿಯೇ ಇರುತ್ತಿನಿ ಅಂತ ದಿಶಾ ಹಠ ಕೂಡ ಮಾಡಿದ್ದಳಂತೆ. ಕಿಚ್ಚ ಸುದೀಪ್ ಅಂದರೆ ದಿಶಾಗೆ ತುಂಬಾ ಇಷ್ಟವಂತೆ. ಕ್ರೇಜಿ಼ಸ್ಟಾರ್ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಅವರ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿಯೂ ಸಹ ದಿಶಾ ನಟಿಸಿದ್ದಳು. ಸೃಜನ್ ಲೋಕೇಶ್ ಅವರು ನಡೆಸಿಕೊಡುತ್ತಿರುವ ಕಾಮಿಡಿ ಷೋ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿಯೂ ಸಹ ದಿಶಾ ಭಾಗವಹಿಸಿದ್ದಳು. ದಿಶಾ ವೆಸ್ಟ್ರನ್ ಡ್ಯಾನ್ಸ್ ಹಾಗೂ ಭರತನಾಟ್ಯವನ್ನು ಕಲಿಯುತ್ತಿದ್ದಾಳೆ. ಚಿತ್ರಾಲಿ ಹ್ಯಾಪಿ ಬರ್ತಡೇ ಎಂಬ ಸಿನಿಮಾದಲ್ಲಿ ಕೂಡ ದಿಶಾ ನಟಿಸುತ್ತಿದ್ದಾಳೆ. ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಕಿನ್ನರಿ ದಿಶಾ ಅನ್ನುವ ಹೆಸರಿನಲ್ಲೀ ಅವಳ ಅಕೌಂಟ್ ಇದೆ. ಇದರಲ್ಲಿ ದಿಶಾ ಬಗ್ಗೆ ಇತ್ತೀಚಿನ ಮಾಹಿತಿಗಳು ಸಿಗುತ್ತವೆ. ಪ್ರಸ್ತುತ ದಿಶಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.

Advertisement

– ಸುಷ್ಮಿತಾ.

Advertisement

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...