bhoomi now narrator

ನಿರೂಪಕಿಯಾಗಿ ಕಿರುತೆರೆಗೆ ಮರಳಲಿದ್ದಾರೆ ಈ ಕಿನ್ನರಿ !

in ಮನರಂಜನೆ/ಸಿನಿಮಾ 458 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯಲ್ಲಿ ನಾಯಕಿ ಮಣಿಯಾಗಿ ಅಭಿನಯಿಸಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಕುಂದಾಪುರದ ಕುವರಿ ಭೂಮಿ ಶೆಟ್ಟಿಯನ್ನು ಜನ ಗುರುತಿಸಿದ್ದು ದೊಡ್ಮನೆಗೆ ಕಾಲಿಟ್ಟ ಬಳಿಕವೇ! ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಭೂಮಿ ಶೆಟ್ಟಿ ರಾಯಲ್ ಶೆಟ್ರು ಆಗಿ ಕಿರುತೆರೆ ಪ್ರಿಯರ ಮನ ಸೆಳೆದ ಬೆಡಗಿ. ತಮ್ಮ ನಗು, ಮಾತು, ನಡವಳಿಕೆ ಲಯ ಮೂಲಕ ದೊಡ್ಮನೆಯಲ್ಲಿ ಹವಾ ಸೃಷ್ಟಿ ಮಾಡಿದ್ದ ಭೂಮಿ ಶೆಟ್ಟಿ ಟಾಪ್ 5 ಸ್ಥಾನದಲ್ಲಿದ್ದರು. ಇಂತಿಪ್ಪ ಮುದ್ದು ಮುಖದ ಚೆಲುವೆ ಭೂಮಿ ಶೆಟ್ಟಿ ಇದೀಗ ಕಿರುತೆರೆಗೆ ಮರಳಲಿದ್ದಾರೆ. ಹೌದು, ಆದರೆ ಭೂಮಿ ಶೆಟ್ಟಿ ಕಿರುತೆರೆಗೆ ಬರುತ್ತಿರುವುದು ನಟಿಯಾಗಿ ಅಲ್ಲ, ಬದಲಿಗೆ ನಿರೂಪಕಿಯಾಗಿ! ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯ ಕಾರ್ಯಕ್ರಮ ಮಜಾ ಭಾರತದ ಹೊಸ ಸೀಸನ್ ಆರಂಭವಾಗಲಿದ್ದು ಅದರ ನಿರೂಪಕಿಯಾಗಿ ರಾಯಲ್ ಶೆಟ್ರು ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನ ನಟಿಯಾಗಿ ಮೋಡಿ ಮಾಡಿದ್ದ ಭೂಮಿ ಇದೀಗ ನಿರೂಪಕಿಯಾಗಿ ಕಿರುತೆರೆ ವೀಕ್ಷಕರ ಸೆಳೆಯಲು ಬರುತ್ತಿದ್ದಾರೆ.

Advertisement

Advertisement

ಬಾಲ್ಯದಿಂದಲೂ ಭರತನಾಟ್ಯ ಮತ್ತು ಯಕ್ಷಗಾನದತ್ತ ವಿಶೇಷ ಒಲವು ಹೊಂದಿದ್ದ ಭೂಮಿ ಶೆಟ್ಟಿ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಮಹಾನಗರಿಗೆ ಹೋದರು. ಆದರೆ ಆ ಪಯಣ ಅವರ ಬದುಕನ್ನೇ ಬದಲಿಸುತ್ತದೆ ಎಂದು ಸ್ವತಃ ಆಕೆಯೇ ಅಂದುಕೊಂಡಿರಲಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೀವನಚೈತ್ರ ಧಾರಾವಾಹಿಗೆ ಆಡಿಶನ್ ನಡೆಯುತ್ತಿದ್ದಾಗ, ಸ್ನೇಹಿತರು ಭೂಮಿಗೆ ಭಾಗವಹಿಸುವಂತೆ ಒತ್ತಾಯ ಮಾಡಿದರು. ಅವರ ಒತ್ತಾಯಕ್ಕೆ ಮಣಿದು ಆಡಿಶನ್ ಗೆ ಹೋದ ಭೂಮಿ ಸೆಲೆಕ್ಟ್ ಆಗಿದ್ದು ಸಣ್ಣ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದರು.

Advertisement

ನಂತರ ಕಿನ್ನರಿ ಧಾರಾವಾಹಿಯ ಮಣಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಾಗ ಚಿಕ್ಕ ಹುಡುಗಿಯೇ ದೊಡ್ಡವಳಾದಳಾ ಹಲವರು ಧಾರಾವಾಹಿ ತಂಡದವರ ಜೊತೆ ಕೇಳಿದ್ದರು. ಅಷ್ಟರ ಮಟ್ಟಿಗೆ ಅವರ ನಡುವೆ ಸಾಮ್ಯತೆ ಇತ್ತು! ಮುಂದೆ ಕಿನ್ನರಿಯ ಮಣಿಯಾಗಿ ಬದಲಾದ ಆಕೆಯ ಮನೋಜ್ಞ ನಟನೆಗೆ ವೀಕ್ಷಕರು ಫಿದಾ ಆಗಿದ್ದರು. ನಂತರ ಬಿಗ್ ಬಾಸ್ ಮನೆಯೊಳಗೆ ಸೇರಿದ ಭೂಮಿ ತಮ್ಮ ನಡವಳಿಕೆ, ಮಾತುಗಾರಿಕೆ, ನಗುವಿನ ಮೂಲಕ ವೀಕ್ಷಕರಿಗೆ ಮಗದಷ್ಟು ಹತ್ತಿರವಾದರು.

Advertisement

ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಬ್ರೇಕ್ ದಿ ಸ್ತ್ರಿಯೋ ಟೈಪ್ ಎಂಬ ಒಂದು ನಿಮಿಷದ ಕಿರುಚಿತ್ರದಲ್ಲಿ ಭೂಮಿ ಶೆಟ್ಟಿ ಅಭಿನಯಿಸಿದ್ದರು. ಬಿ.ಎ.ಪುನೀತ್ ನಿರ್ದೇಶನದ ಈ ಚಿತ್ರ ಮಹಿಳಾ ದಿಮಾಚರಣೆಯಂದು ಬಿಡುಗಡೆಯಾಗಿದ್ದು ಈ ಚಿತ್ರ ಮಹಿಳೆ ಮತ್ತು ಮಂಗಳಮುಖಿಯರ ಬಗ್ಗೆ ಜನತೆಗಿರುವ ತಪ್ಪು ಕಲ್ಪನೆಯ ಬಗ್ಗೆ ಹೇಳಲಾಗಿದೆ. ನಂತರ ಇಕ್ಕಟ್ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲೂ ನಾಯಕಿಯಾಗಿ ಭೂಮಿ ಶೆಟ್ಟಿ ಕಮಾಲ್ ಮಾಡಿದ್ದಾರೆ. ನಟಿಇಶಾಂ ಖಾನ್‌ ಮತ್ತು ಹಸೀನ್‌ ಖಾನ್ ನಿರ್ದೇಶನದ ಕಾಮಿಡಿ ಕಥಾ ಹಂದರವನ್ನು ಒಳಗೊಂಡ ಇಕ್ಕಟ್ ಸಿನಿಮಾದಲ್ಲಿ ನಾಗಭೂಷಣ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ ನಮ್ ರಾಯಲ್ ಶೆಟ್ರು.

ನಟನೆಯ ಹೊರತಾಗಿ ಭೂಮಿ ಶೆಟ್ಟಿ ಚಿತ್ರ ಕಲಾವಿದೆಯೂ ಹೌದು. ಬಿಡುವಿನ ಸಮಯದಲ್ಲಿ ಒಂದಷ್ಟು ಚಿತ್ರಗಳನ್ನು ಬಿಡಿಸುವ ಕುಂದಾಪುರದ ಕಿನ್ನರಿ ನಿರ್ಜೀವ ವಸ್ತುಗಳಿಗೆ ಬಹಳ ಅದ್ಭುತವಾಗಿ ಜೀವ ತುಂಬುತ್ತಾರೆ. ಡ್ರಾಯಿಂಗ್ ನ ಜೊತೆಗೆ ಸ್ಕೆಚಿಂಗ್ ತಿಳಿದಿರುವ ಈಕೆ ಅನಿಮೇಶನ್ ಕೋರ್ಸ್ ಕೂಡಾ ಮಾಡಿದ್ದಾರೆ. ಇಷ್ಟು ದಿನ ನಟಿಯಾಗಿ ಮೋಡಿ ಮಾಡಿದ್ದ ಈ ಚೆಲುವೆಯ ನಿರೂಪಣೆಯನ್ನು ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
– ಅಹಲ್ಯಾ

Advertisement
Share this on...