ಕೊರೊನಾ ರೋಗಿಗಳ ಸೇವೆಗೆ ನಿಂತ ಸ್ಯಾಂಡಲ್​ವುಡ್​ ಸಂಗೀತ ನಿರ್ದೇಶಕ…!

in ಕನ್ನಡ ಆರೋಗ್ಯ/ಸಿನಿಮಾ 63 views

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 25 ಸಾವಿರ ಗಡಿ ದಾಟಿದೆ. ಬೆಂಗಳೂರಿನಲ್ಲಂತೂ ಎಲ್ಲೆಂದರಲ್ಲಿ ಕೊರೊನಾ ಎಂಬಂತಾಗಿದೆ. ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಕೊರೊನಾ ಬಂದವರಿಗೆ ಆಸ್ಪತ್ರೆಯಲ್ಲಿ ಬೆಡ್ ಕೂಡಾ ಇಲ್ಲದಂತಾಗಿದೆ. ಇನ್ನು ನಮಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಕೆಲವರು ದೂರುತ್ತಿದ್ದಾರೆ.ಈ ಸಮಯದಲ್ಲಿ ಕೆಲವೊಂದು ವೈದ್ಯರು ಹಾಗೂ ನರ್ಸ್​ಗಳು ಕೂಡಾ ತಮಗೂ ಕೊರೊನಾ ಬರಬಹುದು ಎಂಬ ಕಾರಣಕ್ಕೆ ಸೇವೆಗೆ ಹಾಜರಾಗುತ್ತಿಲ್ಲ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಈ ನಡುವೆ ಸ್ಯಾಂಡಲ್​ವುಡ್​​ ಸಂಗೀತ ನಿರ್ದೇಶಕರೊಬ್ಬರು ಸ್ಟೆತಸ್ಕೋಪ್ ಹಿಡಿದು ಪಿಪಿಇ ಕಿಟ್ ಧರಿಸಿ ಕೊರೊನಾ ರೋಗಿಗಳ ಸೇವೆಗೆ ನಿಂತಿದ್ಧಾರೆ. ಅವರೇ ಡಾ. ಕಿರಣ್ ತೋಟಂಬೈಲು.

Advertisement

Advertisement

ಡಾ. ಕಿರಣ್ ತೋಟಂಬೈಲು ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ ‘ಐ ಲವ್ ಯು’ ಚಿತ್ರದ ಸಂಗೀತ ನಿರ್ದೇಶಕ. ಕಿರಣ್ ಅವರು ಮೂಲತ: ವೈದ್ಯರು. ವೈದ್ಯ ವೃತ್ತಿಯಷ್ಟೇ ಅವರು ಸಂಗೀತವನ್ನು ಬಹಳ ಪ್ರೀತಿಸುತ್ತಾರೆ. ‘ಐ ಲವ್ ಯು’ ಚಿತ್ರದ ಸಕ್ಸಸ್ ನಂತರ ಕಿರಣ್ ಅವರು ಸಂಗೀತ ನಿರ್ದೇಶನದಲ್ಲಿ ಬಹಳ ಬ್ಯುಸಿಯಾಗಿದ್ದರು. ಆದರೆ ಈಗ ಕೊರೊನಾ ವೈರಸ್ ಎಲ್ಲೆಡೆ ಹಬ್ಬುತ್ತಿರುವುದರಿಂದ ಕಿರಣ್ ಸದ್ಯಕ್ಕೆ ಸಂಗೀತಕ್ಕೆ ಬ್ರೇಕ್ ನೀಡಿ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿದ್ಧಾರೆ.

Advertisement

 

Advertisement

ಬೆಂಗಳೂರಿನ ಫೀವರ್ ಕ್ಲಿನಿಕ್​​ನಲ್ಲಿ ಕೆಲಸ ಮಾಡುತ್ತಿರುವ ಡಾ. ಕಿರಣ್, ‘ರೋಗಿಗಳ ಸೇವೆಗೆ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಸದ್ಯಕ್ಕೆ ಆಸ್ಪತ್ರೆಗೆ ನನ್ನ ಸೇವೆ ಬಹಳ ಅವಶ್ಯಕತೆ ಇದ್ದಿದ್ದರಿಂದ ಕಳೆದ 15 ದಿನಗಳಿಂದ ನಾನು ಇಲ್ಲೇ ನೆಲೆಸಿದ್ದೇನೆ’ ಎನ್ನುತ್ತಾರೆ. ಇಬ್ಬರು ಮುದ್ದಾದ ಮಕ್ಕಳು, ಪತ್ನಿ, ಮನೆಯಿಂದ ದೂರವಿದ್ದು ರೋಗಿಗಳ ಸೇವೆ ಸಲ್ಲಿಸುತ್ತಿರುವ ಕಿರಣ್ ನಿಜಕ್ಕೂ ಗ್ರೇಟ್. ಅವರ ವೈದ್ಯ ವೃತ್ತಿ, ಕಲಾಸೇವೆ ಎರಡೂ ಇದೇ ರೀತಿ ಮುಂದುವರೆಯಲಿ ಎಂಬುದೇ ನಮ್ಮ ಆಶಯ ಕೂಡಾ.

Advertisement
Share this on...