ಕನ್ನಡತಿಯ ಜೊತೆ ಕಿರಣ್ ರಾಜ್…..

in ಮನರಂಜನೆ/ಸಿನಿಮಾ 203 views

ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಕನ್ನಡತಿ ಧಾರವಾಹಿಯಲ್ಲಿ ಶ್ರೀಮಂತ ಮತ್ತು ಸುಂದರ ಮೋಹಕ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನಸೆಳೆಯುತ್ತಿರುವವರು, ಹರ್ಷ ಎಂದೆ ಧಾರವಾಹಿಯಲ್ಲಿ ಖ್ಯಾತಿಯಾದ ಕಿರಣ್ ರಾಜ್ ರವರು. ಇವರ ನಟನೆ ಹಾಗೂ ಭಾಷೆಯು ಕೂಡ ನೈಜ ರೀತಿಯಲ್ಲಿದೆ. ತಮ್ಮದೇ ಆದ ತುಂಟ ನಗುವಿನೊಂದಿಗೆ ಹಾಗೂ ಹುಸಿ ಕೋಪದೊಂದಿಗೆ ಮಾಡುವ ಪಾತ್ರವಂತು ಸುಮಧುರವಾಗಿದೆ. ಈ ಪಾತ್ರದ ಬಗ್ಗೆ ಅವರೆ ಮಾದ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಪಾತ್ರ ಉತ್ತಮವಾಗಿದ್ದು ತಮ್ಮ ದಿನನಿತ್ಯದ ಜೀವನದಂತೆ ಇದೆ ಎಂದು ಹೇಳಿದ್ದಾರೆ. ಹಿಂದಿ ಧಾರವಾಹಿಗಳಲ್ಲಿ ನಟಿಸಿದರೆ ಹೆಚ್ಚಿನ ಸಂಪಾದನೆ ಸಿಗಬಹುದು ಆದರೆ ಕನ್ನಡದಲ್ಲಿ ಅದಕ್ಕಿಂತ ಹೆಚ್ಚು ಅಭಿಮಾನ, ಗೌರವ, ಜನರ ಪ್ರೀತಿ ಸಿಗುತ್ತದೆ. ಅದರಿಂದ ನಾನು ಕನ್ನಡದಲ್ಲಿ ಹೆಚ್ಚು ಕೆಲಸಮಾಡಲು ಇಷ್ಟಪಡುತ್ತೇನೆ ಎಂದು ಕೂಡ ಹೇಳಿದ್ದಾರೆ. ಇತ್ತೀಚಿನ ಕಥೆಗಳಲ್ಲಿಒಂದೆ ರೀತಿಯ ಧಾರವಾಹಿಗಳ ವೀಕ್ಷಣೆಯಿಂದ ಜನರು ಹೊಸ ಹೊಸ ಕಥೆಗಳ ಮೇಲೆ ಒಲವು ತೋರಿಸುತ್ತಾರೆ.

Advertisement

Advertisement

ಬರು ಬರುತ್ತಾ ಈ ಧಾರವಾಹಿ ನೋಡಲು ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಸರಳ ಸಹಜ ಸುಂದರ ರೀತಿಯಲ್ಲಿ ಮೂಡಿಬರುತ್ತಿರುವ ಈ ಕಥೆ ಎಲ್ಲಾ‌ ಕಥೆಗಳಿಗಿಂತ ವಿಭಿನ್ನರೀತಿಯಲ್ಲಿದೆ. ಸಂಬಂಧಗಳ ಗಟ್ಟಿತನದ ಪ್ರೀತಿ, ಕೋಪದ ಪ್ರೀತಿ,ಸ್ನೇಹ, ಕೊಲ್ಲುವ ಕ್ರೂರತನ, ಜೀವ ಉಳಿಸುವ ಗೆಳೆತನದ ಬಂಧನ ಇವೆಲ್ಲದರ ಸಾರಾಂಶ ಅದ್ಭುತವಾಗಿ ಮೂಡಿಬಂದಿದೆ ಹಾಗೂ ಬರುತ್ತಲಿದೆ. ಇಡೀ ಪರಿವಾರವೆ ಕುಳಿತು ನೋಡಬಹುದಾದಂತಹ ಉತ್ತಮ ಕಥೆಯಾಗಿದೆ.ಈಗಿನ ದಿನಗಳಲ್ಲಿ ಕಿರಣ್ ರಾಜ್ ಅನೇಕ ಹುಡುಗಿಯರ ಕ್ರಶ್ ಕೂಡ ಆಗಿದ್ದಾರೆ. ಇವರು ಜನಿಸಿದ್ದು 1994 ರ ಜುಲೈ 5 ರಂದು. ಇವರು ಬೆಳೆದಿದ್ದು ನ್ಯೂ ಡೆಲ್ಲಿಯಲ್ಲಿ. ಇವರ ತಂದೆ ಆರ್ಮಿಯಲ್ಲಿ ವರ್ಕ್ ಮಾಡ್ತಿದ್ದರಿಂದ ಇವರು ತಮ್ಮ ಪಿಯುಸಿ ತನಕ ಡೆಲ್ಲಿಯಲ್ಲೆ ವಿದ್ಯಾಭ್ಯಾಸ ಮಾಡಿದರು.

Advertisement

ಮೂಡುಬಿದ್ರೆಯಲ್ಲಿರುವ ಆಳ್ವಾಸ್ ಇನ್ಸ್ಟಿಟ್ಯೂಟ್ ನಲ್ಲಿ ತಮ್ಮ ಡಿಗ್ರಿಯನ್ನು ಪೂರ್ಣಗೊಳಿಸುತ್ತಾರೆ. ಮುಂದೆ ಮುಂಬೈಯಲ್ಲಿ ಸಿನಿಮಾಗೆ ಸಂಬಂದಪಟ್ಟ ಕೋರ್ಸ್ ಮಾಡ್ತಿರ್ತಾರೆ. ಅದೇ ಸಮಯದಲ್ಲಿ ಹಿಂದಿಯಲ್ಲಿ ನಿರೂಪಕ ಆಗಿ ವರ್ಕ್ ಮಾಡ್ತಾರೆ. ಆ ಸಮಯದಲ್ಲಿ ಹಿಂದಿ ಧಾರವಾಹಿಗೆ ಅವಕಾಶ ಸಿಕ್ಕಿ ಅದರಲ್ಲಿ ನಟನೆ ಮಾಡ್ತಾರೆ. ಹೀಗೆ ಲೈಫ್ ಸೂಪರ್ ಗುರೂ ಅನ್ನೊ ರಿಯಾಲಿಟಿ ಶೋ ನಲ್ಲಿ ಅವಕಾಶ ಸಿಗತ್ತೆ. ಕನ್ನಡಕ್ಕೆ ವಾಪಾಸ್ ಬಂದು ಶೋ ನಲ್ಲಿ ಚೆನ್ನಾಗಿ ಭಾಗವಹಿಸುತ್ತಾರೆ. ಸುವರ್ಣ ಚಾನೆಲ್ ನಲ್ಲಿ ಡ್ಯಾನ್ಸ್ ಡ್ಯಾನ್ಸ್ ಅನ್ನೊ ಕಾರ್ಯಕ್ರಮದಲ್ಲೂ ಚೆನ್ನಾಗಿ ಭಾಗವಹಿಸಿ ನಿಧಾನವಾಗಿ ತಮ್ಮ ಫೇಮ್ ಹೆಚ್ಚಿಸಿಕೊಳ್ತಾರೆ.

Advertisement

ಈ ಶೋ ನಂತರ ಕಲರ್ಸ್ ಕನ್ನಡದಲ್ಲಿ ಇಷ್ಟ ದೇವತೆ ಅನ್ನೊ ಧಾರವಾಹಿಗೆ ಮುಖ್ಯ ಪಾತ್ರಕ್ಕೆ ಅವಕಾಶ ಸಿಕ್ಕು ನಟಿಸುತ್ತಾರೆ. ಹೀಗೆ ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ ಧಾರವಾಹಿಗಳಲ್ಲಿ ಕೂಡ ಪಾತ್ರ ನಿರ್ವಹಿಸುತ್ತ ಹಿಂದಿ ಧಾರವಾಹಿಗಳಲ್ಲೂ ನಟಿಸುತ್ತಾ ಬರ್ತಾರೆ. ಇವರಿಗೆ ತುಂಬ ಹೆಸರು ತಂದುಕೊಟ್ಟಂತಹ ಧಾರವಾಹಿ ಕಿನ್ನರಿ. ಇವರು ಡಿಜೆ ಆಗಿ ಕೂಡ ವರ್ಕ್ ಮಾಡಿದ್ದಾರೆ. ಇವರ ಮೊದಲ ಸಿನಿಮಾ ಅಸತೋಮ ಸದ್ಗಮಯ. ನಟನೆ ಅಷ್ಟೆ ಅಲ್ಲದೆ ಬೇರೆಯ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರದೆ ಆದ ಪೌಂಡೇಷನ್ ಇದೆ. ಅದರಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕೋರೋನ ಹರಡುತ್ತಿರುವ ಸಮಯದಲ್ಲಿ ಅನೇಕರಿಗೆ ಅಗತ್ಯಕ್ಕೆ ಬೇಕಾದ ಊಟದ ಸಹಾಯ ಮಾಡಿದ್ದಾರೆ.

ಇತ್ತೀಚೆಗೆ ತೆಲುಗಿನ ಸಿನಿಮಾದ ಡೆಬ್ಯೂಟ್ ಕೂಡ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿಯಲ್ಲಿ ಪಾತ್ರ ನಿರ್ವಹಿಸುತ್ತಿರುವ ಹರ್ಷ ಎಲ್ಲರ ಮನೆ ಮಗನೆನಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಇವರು ಹರ್ಷ ಎಂದೇ ಖ್ಯಾತಿಯಾಗಿದ್ದಾರೆ. ನಾಯಕ ನಾಯಕಿಯ ಪಾತ್ರ ವಿಭಿನ್ನವಾದರು ಇಬ್ಬರ ಜೋಡಿಯ ಬಗ್ಗೆ ಎಲ್ಲರ ಮೆಚ್ಚುಗೆ ಇದೆ. ಕಥೆಯ ಹೆಸರಲ್ಲೇ ಕನ್ನಡ ತುಂಬಿಕೊಂಡಿರುವ ಈ ಧಾರವಾಹಿ ಕಲರ್ಸ್ ಕನ್ನಡದಲ್ಲಿ ಅತ್ಯುತ್ತಮವಾಗಿ ಮೂಡಿಬರುತ್ತಿದೆ. ಎಲ್ಲರಂತೆ ನಾವೂ ಹರ್ಷೊಲ್ಲಾಸದಿಂದ ಕನ್ನಡತಿಯ ಕಥೆ ಮತ್ತು ಹರ್ಷನನ್ನು ನೋಡುತ್ತ ಧಾರವಾಹಿಯ ಸೊಬಗನ್ನು
ಸವಿಯೋಣ.

Advertisement
Share this on...