ಫೇಕ್ ನ್ಯೂಸ್ ಹಬ್ಬಿಸುವವರಿಗೆ ವಾ’ರ್ನಿಂಗ್ ಕೊಟ್ಟ ಕಿರಣ್ ರಾಜ್ !

in ಮನರಂಜನೆ 58 views

ಇದು ಪೈಪೋಟಿಯ ಯುಗ. ಇಲ್ಲಿ ಯಾವುದೇ ಕೆಲಸಕ್ಕಾಗಲಿ, ಯಾವುದೇ ಕ್ಷೇತ್ರದಲ್ಲಿಯೇ ಆಗಲಿ ಪೈಪೋಟಿ ಇದ್ದೇ ಇದೆ. ಪೈಪೋಟಿ ಎದುರಿಸಿಯೇ ಗೆದ್ದು ನಿಲ್ಲಬೇಕು. ಆಗ ಮಾತ್ರ ಜನರು ಗುರುತಿಸುತ್ತಾರೆ. ಇದು ವಾಹಿನಿಗಳಿಗೂ ಹೊರತಾಗಿಲ್ಲ. ಹಾಗಾಗಿಯೇ ವಾಹಿನಿಗಳು ವಿಭಿನ್ನ ಕಥೆಗಳನ್ನು ಒಳಗೊಂಡಿರುವ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಧಾರಾವಾಹಿಗಳನ್ನು ಸಖತ್ ರಿಚ್ ಆಗಿ ಶೂಟಿಂಗ್ ಮಾಡಲಾಗುತ್ತಿದೆ. ಹಾಗಾಗಿ ಈಗ ಧಾರಾವಾಹಿ ನಿರ್ಮಾಣಕ್ಕೂ ಸಿನೆಮಾ ನಿರ್ಮಾಣಕ್ಕೂ ಅಷ್ಟೊಂದು ವ್ಯತ್ಯಾಸವಿಲ್ಲ. ಈ ಧಾರಾವಾಹಿಗಳಲ್ಲಿ ಕೆಲವೊಂದನನ್ನು ವೀಕ್ಷಕರು ತೀರಾ ಮನಸ್ಸಿಗೆ ಹಚ್ಚಿಕೊಂಡುಬಿಡುತ್ತಾರೆ. ಕಲಾವಿದರ ಅಭಿನಯವು ಸಹ ಅಷ್ಟೇ ಮನೋಜ್ಞವಾಗಿರುತ್ತದೆ. ಸಹಜವಾಗಿರುತ್ತದೆ. ಹಾಗಾಗಿಯೇ ವೀಕ್ಷಕರ ಮನಸ್ಸಿನ ಆಳದಲ್ಲಿ ಬೇರೂರಿಬಿಡುತ್ತಾರೆ. ಇದಕ್ಕೆ ತಾಜಾ ನಿದರ್ಶನವೆಂದರೆ ಕಿರಣ್ ರಾಜ್.

Advertisement

Advertisement

ಕಿರುತೆರೆಯಲ್ಲಿ ಮೋಡಿ ಮಾಡಿರುವ ಜೋಡಿಯಲ್ಲಿ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಜೋಡಿ ಕೂಡ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ ಧಾರಾವಾಹಿಯಲ್ಲಿ ಇವರಿಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ. ಕಿರಣ್ ರಾಜ್ ಅವರು ಹರ್ಷನ ಪಾತ್ರ ಮಾಡಿದವರೆ ರಂಜನಿ ರಾಘವನ್ ಅವರು ಭುವಿ ಪಾತ್ರಕ್ಕೆ ಜೀವತುಂಬಿದ್ದಾರೆ. ಹರ್ಷನ ಕೋವಿಡ್ ಕಾಲದಲ್ಲಿ ಅಚಾನಕ್ಕಾಗಿ ಭುವಿ ಮನೆಯಲ್ಲಿ ಉಳಿಯುವ ಸ್ಥಿತಿ ನಿರ್ಮಾವಾಗುತ್ತದೆ. ಅಲ್ಲಿ ಹರ್ಷನಿಗೆ ಹಸಿರುಪೇಟೆಯ ಬಡಮಧ್ಯಮ ವರ್ಗದ ಭುವಿ ಮೇಲೆ ಪ್ರೀತಿ ಆಗುತ್ತದೆ. ಹರ್ಷ ಬೆಂಗಳೂರಿನಲ್ಲಿ ದೊಡ್ಡ ಕಾಫಿ ಶಾಪ್ ಒನರ್. ಭುವಿ ಕನ್ನಡ ವಿಷಯ ಕಲಿಸುವ ಪ್ರಾಧ್ಯಾಪಕಿ. ಭುವಿಯ ಸ್ನೇಹಿತೆ ವರೂಧಿನಿ. ಇವಳದು ಒಂದು ಕಂಪನಿ ಇರುತ್ತದೆ. ವರೂಧಿನಿಗೆ ಮೊದಲು ಹರ್ಷನ ಮೇಲೆ ಪ್ರೀತಿ ಅಂಕುರವಾಗುತ್ತದೆ. ಅವಳು ಯಾವಾಗಲೂ ಹರ್ಷನನ್ನು ನನ್ನ ಹಿರೋ ಎಂದು ಕನವರಿಸುತ್ತಿರುತ್ತಾಳೆ. ಆದರೆ ಹರ್ಷನಿಗೆ ವರೂಧಿನಿ ಮೇಲೆ ಯಾವ ಭಾವನೆಯೂ ಇರುವುದಿಲ್ಲ.

Advertisement

/video/entertainment/kannadathi-serial-actor-kiran-raj-upcoming-movies/videoshow/89252156.cms?utm_source=slikevideo&utm_medium=referral

Advertisement

ಹರ್ಷನಿಗೆ ವರೂಧಿನಿ ನನ್ನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದು, ವರೂಧಿನಿಗೆ ತಾನು ನಿನ್ನನ್ನು ಇಷ್ಟಪಡುವುದಿಲ್ಲ. ಕೇವಲ ಸ್ನೇಹಿತೆಯಾಗಿ ಮಾತ್ರ ನೋಡಲು ಇಚ್ಚೆ ಪಡುತ್ತೇನೆ ಎಂದು ಹೇಳುತ್ತಾನೆ. ನಂತರ ಹರ್ಷನ ಗುಣಗಳು ಭುವಿಗೂ ಇಷ್ಟವಾಗತೊಡಗುತ್ತದೆ. ಇಬ್ಬರಿಗೂ ಪ್ರೀತಿ ಆಗುತ್ತದೆ. ಆದರೆ ವರೂಧಿನಿ ಹರ್ಷನನ್ನು ಪ್ರೀತಿಸುತ್ತಿರುವುದರಿಂದ ತನ್ನಿಂದ ವರೂಧಿನಿಗೆ ಮೋಸ ಆಗಬಾರದು ಎಂದು ಭುವಿ ತನ್ನ ಪ್ರೀತಿಯನ್ನು ಕೆಲ ಕಾಲ ಮುಚ್ಚಿಡುತ್ತಾಳೆ. ಆದರೆ ಒಂದು ದಿನ ಹರ್ಷ ಭುವಿಗೆ ತನ್ನ ಪ್ರೀತಿ ವಿಚಾರ ತಿಳಿಸುತ್ತಾನೆ. ಹೀಗೆ ಹಲವಾರು ಟ್ವಿಸ್ಟ್ ಪಡೆದು ಈಗ ಹರ್ಷ -ಭುವಿ ನಿಶ್ಚಿತಾರ್ಥದ ವರೆಗೆ ಬಂದಿದೆ.

ಹರ್ಷ-ಭುವಿ ಜೊಡಿ ಯಾವ ರೀತಿ ಫೇಮಸ್ ಆಗಿದೆ ಎಂದರೆ ಹರ್ಷ-ಭುವಿ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಹಾಗೂ ಫೇಸ್ ಬುಕ್‌ನಲ್ಲಿ ಹಲವಾರು ಫ್ಯಾನ್ ಪೇಜ್‌ಗಳು ಹುಟ್ಟಿಕೊಂಡಿವೆ. ಎಷ್ಟೋ ಜನರು ಹರ್ಷ-ಭುವಿ ಪಾತ್ರವನ್ನು ರಿಯಲ್ ಎಂದು ತಿಳಿದುಕೊಂಡವರು ಇದ್ದಾರೆ. ಈ ರೀತಿ ಸುಳ್ಳು ಮಾಹಿತಿ ನೀಡುತ್ತಿರುವುದು ಕಿರಣ್ ರಾಜ್ ಅವರ ಗಮನಕ್ಕೂ ಬಂದಿದೆ.

ಈ ಹಿಂದೆ ಹಲವಾರು ಬಾರಿ ರಂಜನಿರಾಘವನ್ ಅವರು ಕೂಡ ನಾವು ಕನ್ನಡತಿ ಸಿರಿಯಲ್‌ನಲ್ಲಿ ಮಾತ್ರ ಪ್ರೇಮಿಗಳು. ತೆರೆಯ ಹಿಂದೆ ಒಳ್ಳೆಯ ಸ್ನೇಹಿತರು ಅಷ್ಟೆ. ನಮ್ಮ ಪಾತ್ರ ಜನರಿಗೆ ಇಷ್ಟವಾಗಿರುವುದು ಖುಷಿಯ ವಿಚಾರವೇ. ಆದರೆ ಅವರನ್ನೇ ನೀವು ವಿವಾಹವಾಗಬೇಕು ಎನ್ನುವುದು ಸರಿಯಲ್ಲ. ಇದು ನಮ್ಮ ವೈಯಕ್ತಿಕ ವಿಚಾರ. ಸಿರಿಯಲ್‌ನ್ನು ಸಿರಿಯಲ್ ಆಗಿಯೇ ನೋಡಿ. ಅದನ್ನು ನಮ್ಮ ವೈಯಕ್ತಿಕ ಜೀವನಕ್ಕೆ ತಳುಕುಹಾಕಬೇಡಿ ಎಂದು ಮನವಿ ಮಾಡಿದ್ದರು.
ಅಭಿಮಾನಿಗಳ ಪ್ರೀತಿ ತಾರಕಕ್ಕೇರಿದ್ದು, ಹರ್ಷ-ಭುವಿ ಪಾತ್ರವನ್ನು ನಿಜವೆಂದು ಭಾವಿಸಿದ್ದಾರೆ. ಅಷ್ಟೇ ಅಲ್ಲದೆ ಜನರಿಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಕಿರಣ್ ರಾಜ್ ಅವರು ಮನವಿ ಮಾಡಿದ್ದು, ಹರ್ಷ-ಭುವಿ ಪಾತ್ರವನ್ನು ಕೇವಲ ಪಾತ್ರವಾಗಿ ನೋಡಿ. ನಮ್ಮ ನಿಜಜೀವನಕ್ಕೆ ಲಿಂಕ್ ಮಾಡಬೇಡಿ. ಈ ರೀತಿ ಸುಳ್ಳು ಸುದ್ದಿ ಹರಡಿಸುತ್ತಿರುವವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

Advertisement
Share this on...