ನಟ ಕಿಶೋರ್ ಅವರ ಈ ಮಾಹಿತಿಗಳು ನಿಮಗೆ ಗೊತ್ತಾ…?

in ಕನ್ನಡ ಮಾಹಿತಿ/ಸಿನಿಮಾ 89 views

2004 ರಲ್ಲಿ ತೆರೆಕಂಡ ಕಂಠಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಕಿಶೋರ್. ಈ ಚಿತ್ರದಲ್ಲಿ ನಟ ಕಿಶೋರ್ ಬೀರ ಎಂಬ ಪಾತ್ರದಲ್ಲಿ ನಟಿಸಿದ್ದರು. ಕಾಲೇಜಿನ ದಿನಗಳಲ್ಲಿ ಕಿಶೋರ್ ಅವರು ನಾಟಕಗಳಲ್ಲಿ ನಟಿಸುವುದು ಹವ್ಯಾಸವಾಗಿ ಮಾಡಿಕೊಂಡಿದ್ದರು. ನಂತರ ಸಿನಿಮಾಗಳಲ್ಲಿ ನಟಿಸಲು ಪ್ರಯತ್ನಿಸಿದರು. ಕಿಶೋರ್ ಅವರಿಗೆ ಕಲೆ ಕೈ ಬಿಡಲಿಲ್ಲ. ಸಿನಿಮಾಗಳಲ್ಲಿ ಸಿಗುತ್ತಿದ್ದ ಸಣ್ಣ ಸಣ್ಣ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ದೊಡ್ಡ ದೊಡ್ಡ ಅವಕಾಶಗಳನ್ನು ಪಡೆದುಕೊಂಡರು.
ಕಿಶೋರ್ ‘ಕಂಠಿ’ ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ‘ಆಕಾಶ್’ ಚಿತ್ರದಲ್ಲಿ ನಾಯಕಿಯ ಅಣ್ಣನ ಪಾತ್ರದಲ್ಲಿ ನಟಿಸಿದ್ದರು. ನಂತರ ರವಿ ಶ್ರೀವತ್ಸ ನಿರ್ದೇಶನದ ರೌಡಿಯೊಬ್ಬನ ಜೀವನ ಆಧಾರಿತ ಆದಿತ್ಯ ನಾಯಕನಾಗಿ ನಟಿಸಿದ ‘ಡೆಡ್ಲಿ ಸೋಮ’ ಚಿತ್ರದಲ್ಲಿ ನಟಿಸಿದ್ದರು. ಇದಾದ ನಂತರದಲ್ಲಿ ಕಿಶೋರ್ ರವರಿಗೆ ಕನ್ನಡ ಸಿನಿಮಾಗಳಲ್ಲಿ ಖಳ ಪಾತ್ರಗಳಿಗೆ ಹಾಗೂ ಪೊಲೀಸ್ ಆಫೀಸರ್ ಪಾತ್ರಗಳಿಗೆ ಹೆಚ್ಚಾಗಿ ಅವಕಾಶಗಳು ಹುಡುಕಿಕೊಂಡು ಬಂದವು.

Advertisement


ಜಟ್ಟ, ಹುಲಿ ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಿಶೋರ್ ಅವರು ನಾಯಕನಾಗಿ ಸಹ ನಟಿಸಿದ್ದಾರೆ. ಇವರ ಪ್ರತಿಭೆಯನ್ನು ಕಂಡು ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ಅವಕಾಶಗಳು ಸಿಕ್ಕವು. ತೆಲುಗಿನ 14 ಚಿತ್ರಗಳಲ್ಲಿ, ತಮಿಳಿನ 19 ಚಿತ್ರಗಳಲ್ಲಿ, ಮಳೆಯಾಳಂ 4 ಚಿತ್ರಗಳಲ್ಲಿ ಹಾಗೂ ಕನ್ನಡದಲ್ಲಿ 20 ಚಿತ್ರಗಳಲ್ಲಿ ನಟಿಸಿದ್ದಾರೆ ಕಿಶೋರ್. ಕಿಶೋರ್ ರವರು ದುನಿಯಾ ಚಿತ್ರದಲ್ಲಿನ ಪೊಲೀಸ್ ಆಫೀಸರ್ ಪಾತ್ರ, ಅಟ್ಟಹಾಸ ಚಿತ್ರದಲ್ಲಿ ವೀರಪ್ಪನ್ ಪಾತ್ರಗಳು ಪ್ರೇಕ್ಷಕರ ಮನಸ್ಸಲ್ಲಿ ನಿಲ್ಲುವಂತೆ ಮಾಡಿದವು.
ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಬಾಲಿ’ ಚಿತ್ರದಲ್ಲಿ ನಟ ಕಿಶೋರ್ ನಟಿಸಿ ದೇಶಾದ್ಯಂತ ಫೇಮಸ್ ಆದರು.

Advertisement

Advertisement

 

Advertisement

ಕಿಶೋರ್ ರವರ ನಟನೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುವ ಕಿಶೋರ್ ನಿಜಜೀವನದಲ್ಲಿ ತುಂಬಾ ಮೃದು ಸ್ವಭಾವದ ವ್ಯಕ್ತಿ. ಕನ್ನಡ ಚಿತ್ರರಂಗದ ನಟನೊಬ್ಬ ಇಂದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ತುಂಬಾ ಬೇಡಿಕೆಯುಳ್ಳ ನಟನಾಗಿ ಗುರುತಿಸಿಕೊಂಡಿರುವುದು ಕನ್ನಡಿಗರಾದ ನಮಗೆ ತುಂಬಾ ಹೆಮ್ಮೆ ಎನಿಸುತ್ತದೆ.

– ಸುಷ್ಮಿತಾ

Advertisement
Share this on...