ಕೋಟಿಗೊಬ್ಬ-3 ಚಿತ್ರ ತಂಡ ಕೊಟ್ಟ ಹೊಸ ಸುದ್ದಿ …!

in ಸಿನಿಮಾ 110 views

ಲಾಕ್ ಡೌನ್ ಸಮಯದಲ್ಲೂ ಕೋಟಿಗೊಬ್ಬ-3 ಚಿತ್ರತಂಡದಿಂದ ಹೊಸ ಸುದ್ದಿಗಳು ಹೊರ ಬರುತ್ತಿದ್ದು ಇದೀಗ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಕೊಡೋಕೆ ಮುಂದಾಗಿದೆ. ಟೀಸರ್ ಮೂಲಕ ಹುಚ್ಚು ಹಿಡಿಸಿದ ಚಿತ್ರತಂಡ ಇದೀಗ ಅಭಿಮಾನಿಗಳ ನಿರೀಕ್ಷೆಯಂತೆ ಹೊಸ ಸುದ್ದಿಯನ್ನ ಕೊಟ್ಟಿದ್ದು ಸಂತಸ ಮೂಡಿಸಿದೆ. ಅದೇನಪ್ಪ ಹೊಸ ಸುದ್ದಿ ಅಂತೀರಾ..?.

Advertisement

 

Advertisement

Advertisement

 

Advertisement

ಲಾಕ್ ಡೌನ್ ಹೊತಲ್ಲಿ ಕೋಟಿಗೊಬ್ಬ-3 ಚಿತ್ರತಂಡ ಕೀಕ್ ಏರಿಸುತ್ತಿದ್ದು ಚಿತ್ರದ ಟೈಟಲ್ ಟ್ರ್ಯಾಕ್ ನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್ ಮುಗಿದು ಹಲವು ದಿನಗಳೇ ಕಳೆದಿದೆ. ಚಿತ್ರ ಬಿಡುಗಡೆಯ ಹಂತ ತಲುಪಿದೆ. ಆದರೂ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ತಡವಾಗಿದೆ. ಈ ಹಿಂದೆ ಟೀಜ಼ರ್ ಮಾತ್ರ ಬಿಡುಗಡೆಯಾಗಿದ್ದು ಇದಾದ ಬಳಿಕ ಚಿತ್ರದ ಕುರಿತು ಯಾವುದೇ ಅಪ್ಡೇಟ್ ನೀಡಿಲ್ಲ. ಹೀಗಾಗಿ ಅಭಿಮಾನಿಗಳು ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಯಾವಾಗ ಅಂತ ಪ್ರಶ್ನಿಸುತ್ತಿದ್ದರು. ಅಭಿಮಾನಿಗಳು ಪ್ರಶ್ನಿಸುತ್ತಿರುವುದನ್ನ ಮನಗಂಡ ಚಿತ್ರತಂಡ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಗೆ ಮುಂದಾಗಿದೆ. ಈ ಕುರಿತು ಸ್ವತಃ ಕಿಚ್ಚ ಸುದೀಪ್ ತಿಳಿಸಿದ್ದಾರೆ.

 

ಟ್ವೀಟ್ ಮಾಡುವ ಮೂಲಕ ಮಾಹಿತಿ ಕೊಟ್ಟಿರುವ ಅವರು ಕೋಟಿಗೊಬ್ಬ-3 ಟೈಟಲ್ ಟ್ರಾಕ್ ನ ಲಿರಿಕಲ್ ವಿಡಿಯೋ ಏಪ್ರಿಲ್ 27ರಂದು ಬೆಳಿಗ್ಗೆ 10 ಗಂಟೆಗೆ ಬಂದಿದೆ. ಅಲ್ಲದೆ ಹ್ಯಾಶ್ ಟ್ರಾಗ್ ಮೂಲಕ ಆಕಾಶನೆ ಆಧಾರಿಸುವ ಅಂತ ಬರೆದಿದ್ದಾರೆ. ಅಂದಹಾಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗುತ್ತಿದೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು ಅರ್ಜುನ್ ಜನ್ಯ ರವರ ಸಂಗೀತ ನಿರ್ದೇಶನ ಇದೆ. ವ್ಯಾಸರಾಜ ಕಂಠದಲ್ಲಿ ಈ ಹಾಡು ಮೂಡಿ ಬಂದಿದೆ. ಬಹುನಿರೀಕ್ಷಿತ ಟೈಟಲ್ ಟ್ರ್ಯಾಕ್ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದೆ. ಅಂದಹಾಗೆ ಚಿತ್ರದಲ್ಲಿ ಬಹುತಾರಾಗಣವೇ ಇದ್ದು ವಿಲನ್ ಪಾತ್ರದಲ್ಲಿ ರವಿಶಂಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಮಲೆಯಾಳಂ ಹಾಗೂ ತಮಿಳು ನಟಿ ಮಡೋನಾ ಸಾಬಾಸ್ಟಿಯನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶ್ರದ್ಧಾ ದಾಸ್ ಇಂಟರ್ಪೋಲ್ ಅಧಿಕಾರಿಯ ಪಾತ್ರವನ್ನ ನಿಭಾಯಿಸುತ್ತಿದ್ದಾರೆ.

– ಸುಷ್ಮಿತಾ

Advertisement
Share this on...