ತಮಿಳು ಚಿತ್ರರಂಗದಲ್ಲಿ ನಟಿಸಬೇಕು ಎಂದರೆ ಏನು ಮಾಡಬೇಕು ಗೊತ್ತಾ? ಕನ್ನಡ ನಟಿ ಬಿಚ್ಚಿಟ್ಟ ಸತ್ಯ !

in ಮನರಂಜನೆ 197 views

ಚಿತ್ರರಂಗದಲ್ಲಿ ಕಾಂಪ್ರೋಮೈಸ್ ಎಂಬ ಪದವು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅನೇಕ ಕನಸುಗಳನ್ನು ಹೊತ್ತು ಸಿನಿಮಾ ರಂಗದಲ್ಲಿ ದೊಡ್ಡ ಕಲಾವಿದೆಯಾಗಬೇಕು ಎಂಬ ನಿರೀಕ್ಷೆಯನ್ನಿಟ್ಟುಕೊಂಡು ಬಂದ ಹೆಣ್ಣು ಮಕ್ಕಳನ್ನು ಕೆಲವು ನಿರ್ದೇಶಕ, ನಿರ್ಮಾಪಕರು ತಮ್ಮ ಕಾಮದಾಸೆಗೆ ಬಳಸಿಕೊಳ್ಳುತ್ತಾರೆ. ಕೆಲವರು ಇದಕ್ಕೆ ಖಾರವಾಗಿ ಉತ್ತರ ನೀಡಿ ಗುಡ್ ಬೈ ಹೇಳಿದರೆ ಮತ್ತೆ ಕೆಲವರು ಸ್ಟಾರ್ ಆಗುತ್ತೇನೆ ಎಂಬ ಆಸೆಗೆ ಮಂಚ ಹತ್ತಿ ಬಿಡುತ್ತಾರೆ.ಈ ಹಿಂದೆ ಶ್ರುತಿ ಹರಿಹರನ್ ಸೇರಿದಂತೆ ಹಲವು ನಟಿಯರ ಮೀಟೂ ರಾಮಾಯಣ ಹೇಗೆ ತಾರಕಕ್ಕೇರಿತ್ತು ಎಂಬುದು ತಮಗೆ ತಿಳಿದಿದೆ. ಈ ಅಡ್ಜೆಸ್ಟ್ ಮೆಂಟ್, ಕಾಂಪ್ರೋಮೈಸ್ ಎಂದು ಎಲ್ಲಾ ಚಿತ್ರರಂಗದಲ್ಲೂ ಸಾಮಾನ್ಯವಾಗಿ ಬಿಟ್ಟಿದೆ. ಈ ಮಂಚದಾಟ ಯಾವಾಗ ಚಿತ್ರರಂಗ ಬಿಟ್ಟು ತೊಲಗುತ್ತದೋ ದೇವರೆ ಬಲ್ಲ. ಇದೀಗ ಈ ಅಡ್ಜೆಸ್ಟ್ ಮೆಂಟ್, ಅಗ್ರಿಮೆಂಟ್ ಎನ್ನುವ ಪದ್ದತಿ ವಿರುದ್ದ ಮತ್ತೊಬ್ಬ ಕನ್ನಡ ನಟಿ ಕಿಡಿ ಕಾರಿದ್ದಾರೆ.

Advertisement

Advertisement

ನಿರ್ಮಾಪಕರೊಬ್ಬರು ಕನ್ನಡ ನಟಿ ಕೃಷಿ ಶೆಟ್ಟಿ ಅವರಿಗೆ ನಿನಗೆ ಸಿನಿಮಾದಲ್ಲಿ ಅವಕಾಶ ನಿಡುತ್ತೇನೆ ಅದಕ್ಕೂ ಮುಂಚೆ ನನ್ನ ಜೊತೆ ಅಡ್ಜೆಸ್ಟ್ ಮಾಡಿಕೋ ಎಂದು ಕೇಳಿದ್ದಾನೆ.ಚ್ಯಾನ್ಸ್ ಗಾಗಿ ಈ ರೀತಿ ಮಾಡಬೇಕ ಎಂದು ಕೋಪಗೊಂಡ ಶೆಟ್ಟಿ, ನಿರ್ಮಾಪಕನಿಗೆ ಸರಿಯಾಗಿ ಮರ್ಯಾದೆ ಮಾಡಿದ್ದಾರೆ. ತಮಗಾದ ಅನುಭವವನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಕೃಷಿ ಶೆಟ್ಟಿ,  ತಮಿಳು ಸಿನಿಮಾರಂಗದಲ್ಲಿ ಆಫರ್ ಬೇಕು ಅಂದರೆ ಅಡ್ಜೆಸ್ಟ್ ಮಾಡಿಕೊಳ್ಳಬೇಕೆಂತೆ ಎಂದು ಬರೆದುಕೊಂಡಿದ್ದಾರೆ.

Advertisement

Advertisement

ನಿರ್ಮಾಪಕನೂ ವಾಯ್ಸ್ ಮೆಸೆಜ್ ನಲ್ಲಿ ಅಸಭ್ಯವಾಗಿ ಕೇಳಿದ್ದಾನೆ, ಇದ್ದಕ್ಕೆ ಉತ್ತರಿಸಿರುವ ಶೆಟ್ಟಿ ‘ಇನೊಂದು ಸಲ ಅಡ್ಜೆಸ್ಟ್ ಮೆಂಟ್, ಕಮಿಟ್ ಮೆಂಟ್, ಪ್ರೊಡ್ಯೂಸರ್ ಕೇಳ್ತಾರೆ, ಇನ್ನೊಬ್ರು ಕೇಳ್ತಾರೆ ಅನ್ಕೊಂಡು ನನಗೇನಾದರು ಮೆಸೆಜ್ ಮಾಡುದ್ರೆ, ಮೆಟ್ ಮೆಟ್ಟಲಿ ಕರ್ನಾಟಕ ಬಿಟ್ಟು ತಮಿಳುನಾಡು ಸೇರಿಕೊಬೇಕು ಹಂಗೆ ಬಾರ್ಸಿತ್ತೀನಿ.ಕಂತ್ರಿಗಳ ನಿಮಗೆ ಯಾರು ಅಕ್ಕತಂಗಿರು ಇಲ್ವಾ? ನಿಮ್ ಇಂದಾನೆ ಚಿತ್ರರಂಗದ ಹೆಸರು ಹಾಳಾಗುತ್ತಿರುವುದು’ ಹೀಗೆ ಇನ್ನೂ ಅವಾಚ್ಯ ಪದಗಳಿಂದ ಕಾಮುಕರನ್ನು ಹಿಗ್ಗಾಮುಗ್ಗಾ ಮಾತಿನಿಂದಲೆ ತಣಿಸಿದ್ದಾರೆ. ಹೀಗೆ ಕಾಮಾದಾಸೆಗೆ ಬೀಳುವ ಪ್ರತಿಯೊಬ್ಬರಿಗು ಹೆಣ್ಣು ಮಕ್ಕಳು ಜನುಮ ಜಾಲಾಡಿದರೆ, ಚಿತ್ರರಂಗ ಸ್ವಚ್ಛವಾಗುತ್ತದೆ.. ಅಲ್ಲವೇ?

Advertisement
Share this on...