ಯಶ್ ಜೊತೆ ನಟಿಸಿದ ನಟಿಯ ಸಾಂಪ್ರದಾಯಿಕ ಲುಕ್ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ ! ಫೋಟೋಗಳನ್ನು ನೀವೂ ನೋಡಿ.

in ಮನರಂಜನೆ 84 views

ಹಿಂದಿ ಚಿತ್ರಗಳಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ ನಟಿ ಕೃತಿ ಖರಬಂಧ, ಅಕ್ಷಯ್ ಕುಮಾರ್ ನಟನೆಯ ಹೌಸ್ ಫುಲ್ 4 ಚಿತ್ರದಲ್ಲಿ ಕಾಣಿಸಿಕೊಂಡ ನಂತರ, ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ತಮ್ಮ ಸ್ಟೈಲೀಶ್ ಫೋಟೋಗಳನ್ನು ಪೋಸ್ಟ್ ಮಾಡುವ ಕೃತಿಯ ಸ್ಟೈಲ್ ಸೆನ್ಸ್ ಕೂಡ ಅದ್ಭುತವಾಗಿದೆ. ಲಾಕ್ ಡೌನ್ ಮಾಡುವ ಮೊದಲು ಕೃತಿ ಪೋಸ್ಟ್ ಮಾಡಿದ ಕೆಲವು ಫೋಟೋಗಳು ಈಗಲೂ ಶೇರ್ ಆಗುತ್ತಿದ್ದು, ಈ ಫೋಟೋಗಳನ್ನು ನೋಡಿದ ಪ್ರತಿಯೊಬ್ಬರೂ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಕೃತಿ ವೆಡ್ಡಿಂಗ್ ನಿಯತಕಾಲಿಕೆಗಾಗಿ ವಧುವಾಗಿ ಅದ್ಭುತ ಫೋಟೋಶೂಟ್ ಕೂಡ ಮಾಡಿಸಿದ್ದು, ಇದರಲ್ಲಿಯೂ ಅವರ ಲುಕ್ ನೋಡಿದವರು ಮನಸೋತಿದ್ದಾರೆ. ಇಲ್ಲಿ ಮುಂದಿನ ಸ್ಲೈಡ್ನಲ್ಲಿ ಕೃತಿಯ ಇನ್ನಷ್ಟು ಫೋಟೋಗಳನ್ನು ನೀವೂ ನೋಡಿ.

Advertisement

 

Advertisement

Advertisement

ಕೃತಿ ಲಾಕ್ ಡೌನ್’ಗಿಂತ ಮುಂಚೆ ತೆಗೆಸಿದ ಈ ಫೋಟೋದಲ್ಲಿ ಹೂವಿನ ಡಿಸೈನ್ ಇರುವ ಅನಾರ್ಕಲಿ ದಿರಿಸು ಧರಿಸಿದ್ದು, ನೆಟ್ ದುಪ್ಪಟ್ಟಾ ಮತ್ತು ಚೋಕರ್ ನೆಕ್ಲೇಸ್ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಇದೇ ಸಮಯದಲ್ಲಿ, ವೆಡ್ಡಿಂಗ್ ನಿಯತಕಾಲಿಕೆಯ ಕವರ್ ಫೋಟೋಗಾಗಿ ಮಾಡಿಸಿದ ಫೋಟೋಶೂಟ್ ನಲ್ಲಿ ಸಹ ಕೃತಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಅವರ ಆಯ್ಕೆ ಕೂಡ ಅದ್ಭುತವಾಗಿದೆ. ಈ ಫೋಟೋದಲ್ಲಿ ತರೂನ್ ತಾಹಿಲಿಯಾನಿಯ ಅವರ ಮರೂನ್ ಬಣ್ಣದ ಮಬ್ಬಾದ ಲೆಹೆಂಗಾ ಮತ್ತು ಕುಪ್ಪಸದ ವಿನ್ಯಾಸವು ಬಹಳ ವಿಶಿಷ್ಟವಾಗಿದೆ.

Advertisement

 

ಈ ಫೋಟೋಗಳು ಮಾತ್ರವಲ್ಲ, ಕೃತಿಯ ಪ್ರತಿಯೊಂದು ಫೋಟೋಗಳು ಅದ್ಭುತವಾಗಿವೆ. ಅವರ ಫೋಟೋವನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ಕೃತಿ. ಹಾಗೆಯೇ ಕೃತಿ ನೀಲಿ ಮತ್ತು ಗುಲಾಬಿ ಬಣ್ಣದ ಲೆಹೆಂಗಾ ಜೊತೆಗೆ ಅತ್ಯಂತ ಭಾರವಾದ ಆಭರಣಗಳನ್ನು ಧರಿಸಿದ್ದು, ಇದರಲ್ಲಿ ಥೇಟ್ ವಧುವಿನ ತರಹ ಕಾಣಿಸಿಕೊಂಡಿದ್ದಾರೆ.

 

ಮತ್ತೊಂದು ಫೋಟೋದಲ್ಲಿ ಡೀಪ್ ವಿ ನೆಕ್ಲೈನ್ ಬ್ಲೌಸ್ ಮತ್ತು ಅದಕ್ಕೆ ತಕ್ಕಂತೆ ಆಭರಣಗಳು, ಭಾರವಾದಂತೆ ತೋರುವ ಕುಪ್ಪಸ ಬಹಳ ವಿಶೇಷವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾಂಗ್ ಟಿಕ್ಕಾ ಮೇಕಪ್’ನಲ್ಲಿ ಕೃತಿ ಯಾವುದೇ ವಧುವಿಗಿಂತ ತಾನು ಕಡಿಮೆಯಿಲ್ಲ ಎಂಬಂತೆ ಮೇಕಪ್ ಮಾಡಿಕೊಂಡಿದ್ದಾರೆ.

Advertisement
Share this on...