ಕುಜ ದೋಷವೇನಾದರೂ ನಿಮ್ಮ ಜಾತಕದಲ್ಲಿದ್ದರೆ…..!?

in ಜ್ಯೋತಿಷ್ಯ 2,016 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ನವಮಿ ತಿಥಿ,  ಪುಷ್ಯ ನಕ್ಷತ್ರ, ಸಿದ್ದ ಯೋಗ,  ಗರಜ ಕರಣ  ಅಕ್ಟೋಬರ್11 ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಇಳಿ ಸಂಜೆ ಬರುವುದರಿಂದ ಅದನ್ನು ಉಲ್ಲೇಖ ಮಾಡಿಲ್ಲ.

Advertisement

ವ್ಯಾಪಾರ ಚಿಂತನಂ ದ್ರೋಹ ಚಿಂತನಂ

Advertisement

ಯಾವುದೇ ಒಂದು ವ್ಯಾಪಾರವನ್ನು ಮಾಡಲು ಜಾತಕದಲ್ಲಿ ಬುಧ ಮತ್ತು ಗುರು ಚೆನ್ನಾಗಿರಬೇಕು. ರಿಯಲ್ ಎಸ್ಟೇಟ್,  ಇಂಜಿನಿಯರಿಂಗ್,  ಭೂಮಿ ಕನ್ಸ್ಟ್ರಕ್ಷನ್, ಈ ರೀತಿ ವ್ಯವಹಾರಗಳನ್ನು ಮಾಡಲು ನಿಮ್ಮ ಜಾತಕದಲ್ಲಿ ಕುಜ ಚೆನ್ನಾಗಿರಬೇಕು. ಕುಜ ದೋಷವೇನಾದರೂ ನಿಮ್ಮ ಜಾತಕದಲ್ಲಿದ್ದರೆ ಕುಜರಾಹು ಸಂಧಿ ಇದ್ದರೆ ಸ್ವಂತ ಮನೆ ಸ್ವಂತ ವ್ಯವಹಾರಗಳು ಇರುವುದಿಲ್ಲ. ರಿಯಲ್ ಎಸ್ಟೇಟ್ ಸಿಮೆಂಟ್ ಸ್ಟೀಲ್ ವ್ಯಾಪಾರ ಕನ್ಸ್ಟ್ರಕ್ಷನ್,  ಬಿಲ್ಡಿಂಗ್ ಕಟ್ಟಿಸುವುದು, ಈ ವ್ಯವಹಾರಗಳಲ್ಲಿ ತುಂಬಾ ನೋವು ತಿಂದು ಬಿಡುತ್ತೀರ  ಇಲ್ಲವೇ ಅವರಿಗೆ ಮೋಸ ಮಾಡಿರುವಿರಿ ಎಂದು  ಅಪವಾದ ಬರುತ್ತದೆ. ಪದೇ ಪದೇ ಕೋರ್ಟ್ ಮೆಟ್ಟಿಲೇರುತ್ತಿದ್ದರೆ ಆದರೆ ಪದೇ ಪದೇ ಗರ್ಭಪಾತವಾಗುತ್ತಿದ್ದರೆ ಸೋದರರ ನಡುವೆ ಆಸ್ತಿಗಾಗಿ ಕಚ್ಚಾಟ ಆಗುತ್ತಿದ್ದರೆ ಅದು ಕುಜ ದೋಷ. ಮದುವೆ ನಿಂತಿದೆ,  ಗಂಡನಿಗೆ ಬಲವಿಲ್ಲ, ಮೂರ್ಖ ಗಂಡ ಸಿಕ್ಕಿದ್ದರೆ, ಸರಿಯಾದ ಉದ್ಯೋಗವಿಲ್ಲ ಎಂದಾದರೆ  ಅದು ಕುಜನ ಪ್ರಭಾವ ಕುಜ ದೋಷವೇ ಇದಕ್ಕೆ ಕಾರಣ.

Advertisement

ಪದೇ ಪದೇ ಗಾಡಿ ಮತ್ತು ಬಾಡಿ ರಿಪೇರಿಯಾಗುತ್ತದೆ ಎಂದರೆ ಅದು ಕುಜ ದೋಷದಿಂದ, ಕುಜ ದೋಷವಿದ್ದರೆ ಸ್ವಂತ ಮನೆ ಮನೆ ಮಾಡಿಕೊಳ್ಳಲು ಆಗುವುದಿಲ್ಲ. ಮನೆಯಲ್ಲಿ ಸ್ವಸ್ತಿಕ ಯಂತ್ರವನ್ನು ಇಟ್ಟು ಪೂಜೆ ಮಾಡಿ ಅದರಲ್ಲೂ ಮಂಗಳವಾರ ಶುಕ್ರವಾರ ಪೌರ್ಣಮಿ ಅಮಾವಾಸ್ಯೆ ಅಷ್ಟಮಿಯ ದಿನದಂದು ಧೂಪ ದೀಪ ನೈವೇದ್ಯ ನ್ನಿಟ್ಟು ಪೂಜಿಸಿ ಕನಿಷ್ಠ ಪಕ್ಷ ಮೂರು ತಿಂಗಳಿಗೊಮ್ಮೆಯಾದರೂ ಗಣಪತಿ ಹೋಮವನ್ನು ಮಾಡಿಸಿ ,  ಇದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.ಕುಜ ದೋಷ ಇರುವವರು ಜಾಗವನ್ನು ತೆಗೆದುಕೊಂಡು ಮನೆಯನ್ನು ಕಟ್ಟಬಾರದು ಅರ್ಧ ಕಟ್ಟಿರುವ ಮನೆಯನ್ನು ತೆಗೆದುಕೊಂಡು ಪೂರ್ಣಗೊಳಿಸಿಕೊಳ್ಳಬಹುದು. ಅಥವಾ ಕಟ್ಟಿರುವ ಮನೆ ಫ್ಲಾಟನ್ನು ತೆಗೆದುಕೊಳ್ಳಬಹುದು.  ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಸ್ವಲ್ಪ ಹುಳಿ ಪ್ರಭಾವ, ತೊಂದರೆ ಏನೂ ಇಲ್ಲ ಸಂತೋಷದ ದಿನ ಇಂದು.

ವೃಷಭ ರಾಶಿ : ಚಂದ್ರ ಶನಿ ಸಾರದಲ್ಲಿದ್ದು,  ಶನಿ ಸೂರ್ಯನ ಸಾರದಲ್ಲಿ ಇರುವುದರಿಂದ ಸ್ವಲ್ಪ ಉಪ್ಪು ಖಾರ ಹುಳಿ ಎಲ್ಲವೂ ಬೆರೆತಿರುವಂತಹ ಪ್ರಭಾವದ ದಿನ.

ಮಿಥುನ ರಾಶಿ : ನೀವು ಭೋಜನ ಪ್ರಿಯರು,  ಕೊಲೆಸ್ಟ್ರಾಲ್, ಕೋಲ್ಡ್, ಹಾರ್ಟ್ಗೆ,  ಬೀಜಿಂಗ್ ಗೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ತುಂಬಾ ಎಚ್ಚರಿಕೆಯಿಂದ ಇರಬೇಕು ಶಂಕರಾಮೃತವನ್ನು ಸೇವಿಸಿ.

ಕರ್ಕಾಟಕ ರಾಶಿ : ನೀವು ಕೂಡ ಭೋಜನ ಪ್ರಿಯರು ತಂಗಲಿ ಊಟವನ್ನು ತಿನ್ನುವುದನ್ನು ಕಡಿಮೆ ಮಾಡಿ. ಹೊಟ್ಟೆ ಖಾಲಿ ಬಿಟ್ಟು ಉಪವಾಸ ಮಾಡಿ ಆ ನಂತರ ಊಟ ಮಾಡುವ ಅಭ್ಯಾಸವಿದ್ದರೆ ಅದನ್ನು ಬಿಟ್ಟುಬಿಡಿ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ.

ಸಿಂಹ ರಾಶಿ : ಖರ್ಚು ವೆಚ್ಚಗಳ ಬಗ್ಗೆ ಸ್ವಲ್ಪ ಚಿಂತೆ, ತಲೆಗಟ್ಟಿ ಗಿದೆ ಎಂದು ಎಲ್ಲಾ ಕಡೆ ಸುತ್ತಲೂ ಹೋಗಬೇಡಿ.

ಕನ್ಯಾ ರಾಶಿ : ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲವನ್ನು ನೋಡುವಂತಹ ಪರಿಪೂರ್ಣವಾದ ದಿನ.

ತುಲಾ ರಾಶಿ : ಚೆನ್ನಾಗಿದೆ, ತಟಸ್ಥ, ಗೌರವ,  ಕಷ್ಟಪಟ್ಟಿದ್ದಕ್ಕೆ ಗೌರವ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಅದನ್ನು ಸ್ವೀಕರಿಸಿ.

ವೃಶ್ಚಿಕ ರಾಶಿ : ಇಡೀ ದಿನ ತುಂಬ ಬಿಜಿಯಾಗಿರುತ್ತೀರಿ ಉಸಿರಾಟದ ಸಮಸ್ಯೆ ಗ್ಯಾಸ್ಟಿಕ್ ಸಮಸ್ಯೆ ಎಂದು ನರಳುತ್ತಿ ಸರಿಯಾದ ಸಮಯಕ್ಕೆ ಸಮಯಕ್ಕೆ ಊಟವನ್ನು ಮಾಡಿ ಎಲ್ಲವೂ ಸರಿಹೋಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಎರಡು ಚುಂಬಿ ನಷ್ಟು ರಾಗಿ ಚೊಂಬಿನಲ್ಲಿ ನೀರು ಕುಡಿಯಿರಿ.

ಧನಸ್ಸು ರಾಶಿ : ಕೆಲವೊಂದು ಅಭ್ಯಾಸಗಳಿದ್ದರೆ ಅದೇ ದುರಭ್ಯಾಸ ವಾಗಿ ಪರಿಣಮಿಸುತ್ತದೆ. ಆದ್ದರಿಂದ ಎಲ್ಲೂ ಹೋಗದೆ  ಮನೆಯಲ್ಲಿರುವುದು ಒಳ್ಳೆಯದು ಮಿಕ್ಕಂತೆ ತೊಂದರೆ ಏನೂ ಇಲ್ಲ.

ಮಕರ ರಾಶಿ : ಹತ್ತಿರ ದವರಿಂದ ಮನಸ್ಸಿಗೆ ಸ್ವಲ್ಪ ನೋವು ಉಂಟಾಗುತ್ತದೆ. ಹತ್ತಿರದವರಿಂದಲೇ ಮನೆಯವರೇ ಆಗಿರುತ್ತಾರೆ ಆದ್ದರಿಂದ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲು ಹೋಗಬೇಡಿ.

ಕುಂಭ ರಾಶಿ : ಹತ್ತಿರ ದವರಿಂದ ಬಂಧು ಬಳಗದಿಂದ ಒಂದು ಸಣ್ಣ ನೋವು ಉಂಟಾಗುತ್ತದೆ. ಅದರ ಬಗ್ಗೆ ತಲೆ ಕೆಡಿಸಿಕೊಂಡು ಆತಂಕ ಪಡುವುದು ಬೇಡ, ತಟಸ್ಥವಾಗಿರಿ.

ಮೀನ ರಾಶಿ : ವಿಶೇಷವಾದ ದಿನ ಏನು ಕಷ್ಟ ಪಟ್ಟಿದ್ದೀರೊ ಅದಕ್ಕೆ ಅದಕ್ಕೆ ಪ್ರತಿಫಲ ದೊರೆಯುವಂತಹ ದಿನ. ಬಂಧು ಬಳಗದ  ಜೊತೆಯಲ್ಲಿ ಭೋಜನಕೂಟ,  ಸುತ್ತಾಟ ವಿರುತ್ತದೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಸುತ್ತಾಡಲು ಎಲ್ಲೂ ಹೋಗಬೇಡಿ.

All Rights reserved Namma  Kannada Entertainment.

Advertisement
Share this on...