ಸರ್ಪ ದೋಷ , ಸರ್ಪ ಸಂಸ್ಕಾರ ಗಳಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಹೆಸರುವಾಸಿ ಆಗಿರುವುದರ ಹಿಂದಿನ ರಹಸ್ಯವೇನು ಗೊತ್ತಾ ?

in ಕನ್ನಡ ಮಾಹಿತಿ 949 views

ಹಿಂದೂಗಳ ಪವಿತ್ರ ಧರ್ಮ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯವು ಕುಮಾರಧಾರ ನದಿಯ ದಂಡೆಯಲ್ಲಿದೆ . ದುಷ್ಟ ರಾಕ್ಷಸರ ದಮನ ಮಾಡಲು ಜನ್ಮವೆತ್ತಿದ ಈಶ್ವರ ಪುತ್ರರಾದ ಸುಬ್ರಹ್ಮಣ್ಯರು ತಾರಕಾಸುರಾದಿಯನ್ನು ಯುದ್ಧದಲ್ಲಿ  ಸಂಹರಿಸಿ ಸಹೋದರನಾದ ಗಣೇಶರೊಡನೆ ಕುಮಾರಪರ್ವತಕ್ಕೆ ಬಂದಿರುತ್ತಾರೆ . ಆಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಕುಮಾರಧಾರ ನದಿಯ ತಟದಲ್ಲಿ ಸುಬ್ರಹ್ಮಣ್ಯರಿಗೆ ಮದುವೆ ಮಾಡಿಕೊಡುತ್ತಾರೆ . ಅಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ನಾಗ ವಂಶದ ರಾಜ ವಾಸುಕಿಯ ಪ್ರಾರ್ಥನೆಯ ಮೇರೆಗೆ ದೇವಸೇನಾ ಸಮೇತವಾಗಿ ಸುಬ್ರಹ್ಮಣ್ಯರು ಅಲ್ಲಿಯೇ ನೆಲೆಸುವುದಾಗಿ ವಾಸುಕಿಗೆ ಮಾತು ಕೊಡುತ್ತಾರೆ.

Advertisement

 

Advertisement


ಸುಬ್ರಹ್ಮಣ್ಯ ದೇವಸ್ಥಾನವನ್ನು ಪ್ರವೇಶಿಸುತ್ತಿರುವಾಗಲೇ ಅಲ್ಲಿ ಒಂದು ಬಲ್ಲಾಳದೇವನ ದೇವಸ್ಥಾನವಿದೆ.  ಈ ದೇವಸ್ಥಾನಕ್ಕೆ  ಕುಂಬಳ ಕಾಯಿ, ಸಾಸಿವೆ,  ಬೆಣ್ಣೆ,  ಹತ್ತಿಯನ್ನು ನೀಡಿದರೆ ಸರ್ಪದೋಷ ನಿವಾರಣೆಯಾಗುತ್ತದೆ. ಇದರ ಹಿಂದೆಯೂ ಒಂದು ಪೌರಾಣಿಕ ಕಥೆಯಿದೆ . ಹಿಂದೆ ಮಧ್ವ ಮೂಲ ವಿಷ್ಣುತೀರ್ಥರು ಸಂಸ್ಥಾನದಿಂದ ಸಿದ್ಧ ಪರ್ವತಕ್ಕೆ ತಪಸ್ಸಿಗೆ ಹೋಗುವಾಗ ಮಧ್ವ ದಿಂದ ದತ್ತವಾದ  ಅಕ್ಷಯ ಪಾತ್ರೆಯನ್ನು  ತೆಗೆದುಕೊಂಡು ಹೋಗುತ್ತಾರೆ. ಆಗ ಇನ್ನೋರ್ವ ಸ್ವಾಮಿಗಳಾದ ಅನಿರುದ್ಧ ತೀರ್ಥರನ್ನು  ಕಂಡು ನಾಳೆ ನೀನು ಹರಿಧ್ಯಾನದಲ್ಲಿರುವಾಗ ನೀನು ಬಯಸಿದಾಗ ಒಂದು ಅಕ್ಷಯ ಪಾತ್ರೆ ಕುಮಾರಧಾರ ನದಿಯಲ್ಲಿ ತೇಲಿ ಬರುತ್ತದೆ. ಇನ್ನೊಂದು ಕನ್ನಡಿ ಹೊಳೆಯಲ್ಲಿ ತೇಲಿ ಬರುತ್ತದೆ . ಕುಮಾರಧಾರದಲ್ಲಿ ತೇಲಿ ಬರುವ ಅಕ್ಷಯ ಪಾತ್ರೆಯನ್ನು ಸಂಸ್ಥಾನ ದಲ್ಲಿಟ್ಟುಕೊಂಡು ಇನ್ನೊಂದನ್ನು ದೇವಸ್ಥಾನಕ್ಕೆ ಕೊಡಬೇಕು  ಎಂದು ಹೇಳುತ್ತಾರೆ .

Advertisement

 

Advertisement

ಈ ವಿಚಾರ ಊರಲ್ಲೆಲ್ಲ ಪ್ರಚಾರವಾಗಿ ಬಲ್ಲಾಳದೇವನಿಗೆ ದೂರು ಹೋಗುತ್ತದೆ . ಬಲ್ಲಾಳ  ಅನಿರುದ್ಧ ತೀರ್ಥರಿಗೆ ತಮ್ಮಲ್ಲಿ ಉಳಿಸಿಕೊಂಡಂತ  ಅಕ್ಷಯ ಪಾತ್ರೆಯನ್ನು ವಾಪಸ್ ಕೊಡುವಂತೆ ಆದೇಶಿಸುತ್ತಾನೆ. ನಾನು ಗುರುಗಳ ಪ್ರೇರಣೆಯಂತೆ ಅಕ್ಷಯ ಪಾತ್ರೆಯನ್ನು  ನನ್ನಲ್ಲಿ ಇರಿಸಿಕೊಂಡಿದ್ದೇನೆ ಎಂದು ಪರಿಪರಿಯಾಗಿ ಹೇಳಿದರೂ ಕೇಳದ ಬಲ್ಲಾಳ ಬಲವಂತವಾಗಿ ಅಕ್ಷಯ ಪಾತ್ರೆಯನ್ನು ತೆಗೆದುಕೊಳ್ಳುತ್ತಾನೆ.  ಅದರ ಮುಚ್ಚಳವನ್ನು ತೆಗೆಯಲು ಎಷ್ಟೇ ಪ್ರಯತ್ನಿಸಿದರೂ ಅದು ಆಗುವುದಿಲ್ಲ ಆಗ ಪಟ್ಟದ ಆನೆಯಿಂದ ತುಳಿಸುತ್ತಾನೆ.  ಆಗ ಆನೆಗೆ ಮೈಯೆಲ್ಲಾ ಉರಿಯಲಾರಂಭಿಸುತ್ತದೆ. ನಂತರ ಆ ಆನೆ ನದಿಗೆ ಬಿದ್ದು ಸತ್ತು ಹೋಗುತ್ತದೆ  ಆ ಜಾಗವೇ ಇಂದು  ಆನೆಗುಂಡಿ ಎಂದು ಫೇಮಸ್ ಆಗಿದೆ . ನಂತರ ಬಲ್ಲಾಳನ ಮೈ ಉರಿಯಲಾರಂಭಿಸಿತ್ತು, ಬೊಬ್ಬೆ ಎದ್ದಿತ್ತು ಇದರಿಂದ ನನ್ನನ್ನು ಕಾಪಾಡು ಎಂದು ಸುಬ್ರಹ್ಮಣ್ಯ ರನ್ನು ಕೇಳಿಕೊಳ್ಳುತ್ತಾನೆ .

 

ಆಗ ಸುಬ್ರಹ್ಮಣ್ಯರ ನೀನು ಗುರುದ್ರೋಹ ಮಾಡಿದ್ದಿ  ನಿನ್ನ ಪಾಪ ವಿಮೋಚನೆ ಯಾಗಬೇಕಾದರೆ ನಿನ್ನ ಮೈ ಉರಿ ಕಡಿಮೆಯಾಗಬೇಕಾದರೆ ನಿನ್ನ ಕಲ್ಲಿನ ವಿಗ್ರಹವನ್ನು ಮಾಡಿಸಿ ನನ್ನ ಸನ್ನಿಧಾನದಲ್ಲಿ ಇರಿಸು ಭಕ್ತಾದಿಗಳು ಕುಂಬಳಕಾಯಿ, ಬೆಣ್ಣೆ,  ಸಾಸಿವೆ,  ಹತ್ತಿಯನ್ನು ಹರಕೆಯಾಗಿ  ಕೊಡುತ್ತಾರೆ.  ಅದನ್ನು ಮಾರಿ ಬಂದ  ಹಣವನ್ನು ಮಠಕ್ಕೆ ನೀಡಬೇಕು.  ಮತ್ತು ದೇವಸ್ಥಾನದ ಅಧಿಕಾರವನ್ನು ಸ್ವಾಮಿಗಳಿಗೆ ಒಪ್ಪಿಸಬೇಕು ಎಂದು ಹೇಳುತ್ತಾರೆ.  ಈ ರೀತಿ  ನಡೆದುಕೊಂಡ ಬಳಿಕ ಬಲ್ಲಾಳನ ಸಂಕಟ ನಿವಾರಣೆಯಾಯಿತು. ಆ ವಿಗ್ರಹ ಇಂದೂ ಕೂಡ ಇದೆ. ಅದನ್ನು ಸ್ಥಳಾಂತರಿಸಬಾರದು ಎಂಬ ನಿಯಮವೂ ಕೂಡ ಇದೆ. ಮೈಯಲ್ಲಿ ಬೊಬ್ಬೆ ಆದವರು ಈ ಎಲ್ಲ ವಸ್ತುಗಳನ್ನು ಬಲ್ಲಾಳದೇವನಿಗೆ ಕೊಟ್ಟು ಹರಕೆಯನ್ನು ತೀರಿಸುತ್ತಾರೆ ಇದರಿಂದ ಬೊಬ್ಬೆ  ವಾಸಿಯಾಗುತ್ತದೆಎಂಬ ನಂಬಿಕೆ ಇಂದಿಗೂ ಕೂಡ ಇದೆ.

 


ಪವಿತ್ರವಾದ  ಕುಮಾರ ತೀರ್ಥ ನದಿಯ ಪುಣ್ಯ ಸ್ನಾನದಿಂದ ಮತ್ತು ಮಡೆ ಸ್ನಾನದಿಂದ ಭಯಾನಕವಾದ ಕುಷ್ಠ ರೋಗ ಮತ್ತು ಅನೇಕ ರೀತಿಯ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.  ಪ್ರತಿನಿತ್ಯ ಈ ಕ್ಷೇತ್ರದಲ್ಲಿ ಸಾವಿರಾರು ಜನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಸರ್ಪದೋಷದಿಂದ ಬರುವ ಸಂತಾನ ಹೀನತೆ,  ದೃಷ್ಟಿ ದೋಷ, ಭೂಮಿ ದೋಷ,  ಚರ್ಮ ವ್ಯಾಧಿ, ಮುಂತಾದ ಸಮಸ್ಯೆಗಳಿಗೆ  ಪರಿಹಾರವಾಗಿ ಆಶ್ಲೇಷ ಬಲಿ, ಸರ್ಪ ಸಂಸ್ಕಾರ,  ನಾಗ ಪ್ರತಿಷ್ಠೆ  ಮುಂತಾದ ಸೇವೆಗಳನ್ನು ಭಕ್ತರು ಸಲ್ಲಿಸುತ್ತಾರೆ .

 


ಇಂದು ಬಾಲಿವುಡ್ ನ  ಸೂಪರ್ ಸ್ಟಾರ್ ಆಗಿರುವ ಅಮಿತಾಬ್ ಬಚ್ಚನ್ ರವರಿಗೆ  ಹಿಂದೆ ಅವಕಾಶಗಳೇ ಸಿಗುತ್ತಿರಲಿಲ್ಲ ಮತ್ತು ಎಲ್ಲರೂ ಇವರನ್ನು ರಿಜೆಕ್ಟ್ ಮಾಡುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಬನ್ನಿ ಒಳ್ಳೆಯದಾಗುತ್ತೆ  ಎಂದು ಸಲಹೆಯನ್ನು ನೀಡುತ್ತಾರೆ. ಆ ನಂತರ ಅಮಿತಾಭ್ ಬಚನ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಹಲವು ದಿನಗಳ ಕಾಲ ಯಜ್ಞ ವನ್ನು ನಡೆಸಿಹೋಗಿದ್ದರು . ಆ ನಂತರ ಅವಕಾಶಗಳು ಬರಲಾರಂಭಿಸಿ ಬಾಲಿವುಡ್ ನಲ್ಲಿ ಉನ್ನತ ಮಟ್ಟಕ್ಕೇರಿದರು.

 

ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಮೊಣಕೈ ನೋವಿನ ನಿವಾರಣೆಗಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಅಲ್ಲಿ ಸರ್ಪದೋಷ ಪೂಜೆಯನ್ನು ಮಾಡಿಸಿದರು ಆ ನಂತರ ಅವರಿಗೆ ನೋವು ನಿವಾರಣೆಯಾಯಿತು. ಇಂತಹ ಪವಿತ್ರವಾದ ದೇವಸ್ಥಾನ ಕರ್ನಾಟಕದಲ್ಲಿ ಇರುವುದು ನಮ್ಮ ಪುಣ್ಯವೆ ಸರಿ.
ದೋಷ ನಿವಾರಕ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಎಲ್ಲರಿಗೂ ಆಶೀರ್ವದಿಸಲಿ.

Advertisement
Share this on...