ಲಕ್ಷೀ ಬಾರಮ್ಮ ಸೀರಿಯಲ್ ಕಲ್ಪನಾ ಗಂಡ ಯಾರು ಗೊತ್ತಾ? ಇವರ ಗಂಡ ಖ್ಯಾತ ವಿಲನ್ !

in ಮನರಂಜನೆ/ಸಿನಿಮಾ 277 views

ಲಕ್ಷ್ಮಿ ಸಿದ್ದಯ್ಯ ಎಂದ  ಕೂಡಲೇ ಹಲವರಿಗೆ ಯಾರೂ ಇದು ಎಂದು ಅನ್ನಿಸಬಹುದು . ಆದರೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕಲ್ಪನಾ ಅಥವಾ ಗೊಂಬೆ ತಾಯಿ ಎಂದ ಕೂಡಲೇ ಯಾರು  ಅಂತ ಥಟ್ಟನೆ ಗೊತ್ತಾಗುತ್ತದೆ .ಇವರ ಗಂಡ ಕೂಡ ನಟ. ಕೇವಲ ನಟನಲ್ಲ ಖಳ ನಟ. ಲಕ್ಷ್ಮಿ ಅವರ ಗಂಡಾ ಸಿದ್ದಯ್ಯ. ಅನೇಕ ಸಿನಿಮಾಗಳಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರೆ. ರಕ್ಷಿತಾ ಶ್ರೀ ಮುರಳಿ ಅಭಿನಯದ ಯಶವಂತ್ ಸಿನಿಮಾದಲ್ಲಿ ಸಿದ್ದಯ್ಯ ಖಳ ನಟನಾಗಿದ್ದರು ಇನ್ನೂ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಟಿ ಲಕ್ಷ್ಮೀ ಅವರು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ .ಬಿದಿಗೆ ಚಂದ್ರಮ,  ಮಾಂಗಲ್ಯ,  ಕದನ, ಸಂಬಂಧ ಮುಂತಾದ ಧಾರಾವಾಹಿಗಳಲ್ಲಿ ಲಕ್ಷ್ಮಿ ನಟಿಸಿದರು. ಅಷ್ಟಲ್ಲದೆ ಇವರು  ಆಯುಷ್ಮಾನ್ ಭವ , ಎರಡು ಕನಸು, ಅಂಬಿ ನಿನಗೆ ವಯಸ್ಸಾಯ್ತೋ  ಇನ್ನು ಮುಂತಾದ 20  ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

Advertisement

Advertisement

 

Advertisement

ಇವರು ನಟನಾ ಕ್ಷೇತ್ರಕ್ಕೆ ಬಂದು 15  ವರ್ಷಗಳಾಯಿತು .ಕೆಲವು  ವರ್ಷಗಳಿಂದ  ಅವರು ಮೇಲಿಂದ ಮೇಲೆ  ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು .ಆದರೆ ಹೀರೋ,  ಹೀರೊಯಿನ್,  ಅಕ್ಕನ ರೀತಿಯ ಪಾತ್ರಗಳಲ್ಲಿ  ಲಕ್ಷ್ಮಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ರಾಧಿಕಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಲಕ್ಷ್ಮಿಗೆ ಒಳ್ಳೇ ಸಂಬಂಧವಿದೆ . ರಾಧಿಕಾ ಮನೆಯ ಎಲ್ಲಾ ಖಾಸಗಿ ಕಾರ್ಯಕ್ರಮಗಳಲು ಲಕ್ಷ್ಮಿ  ಹಾಜರಿ ಇದ್ದೇ ಇರುತ್ತಾರೆ.  ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮಿಯವರು ಕಲ್ಪನಾ ಎಂಬ  ತಾಯಿ ಪಾತ್ರ ಮಾಡಿದ್ದರೂ ಕೂಡ ಇಲ್ಲಿ ಸ್ವಲ್ಪ ನೆಗೆಟಿವ್ ಶೆಡ್ ಇತ್ತು.

Advertisement

ತಾಯಿ ಪಾತ್ರವಾಗಿದ್ದರು ಕೂಡ ತುಂಬಾ ಡಿಫರೆಂಟ್ ಆಗಿತ್ತು .ಹೀಗಾಗಿ ಪಾತ್ರ ಮಾಡಲು ಲಕ್ಷ್ಮಿ ಅವರು ಒಪ್ಪಿಕೊಂಡರಂತೆ. ಯೋಗ ಪ್ರವೀಣೆ ಆಗಿದ್ದ ಲಕ್ಷ್ಮಿಗೆ ಕ್ರೀಡೆಯಲ್ಲಿ ಏನಾದರೂ ಮಾಡುವ ಆಸೆ ಇತ್ತಂತೆ. ಆದರೆ ಅವರು ಕಾಲಿಟ್ಟಿದ್ದ ಮಾತ್ರ ನಟನ ಕ್ಷೇತ್ರಕ್ಕೆ.

Advertisement
Share this on...