Kannada News ಆಕ್ಟಿಂಗ್ ಮಾಡುವಾಗ ಹೀರೋ ಹೊಡೆದ ಏಟಿಗೆ ಕಣ್ಣು ಕಳೆದುಕೊಂಡ ಖ್ಯಾತ ನಟಿ. ಆ ನಟಿ ಯಾರು ಗೊತ್ತಾ..?

in ಮನರಂಜನೆ 101 views

ಭಾರತ ಚಿತ್ರರಂಗದಲ್ಲಿ ಈ ಘಟನೆ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ. ಜೀವನ ಅಂದರೆನೇ ಹಾಗೇ. ಕೆಲವೊಮ್ಮೆ ನಮ್ಮದಲ್ಲದ ತಪ್ಪಿಗೆ ನಾವು ಜೀವನಪೂರ್ತಿ ನರಕ ಅನುಭವಿಸಬೇಕಾಗುತ್ತದೆ. ಈ ನಟಿಯ ಜೀವನದಲ್ಲೂ ಅದೇ ಆಗಿದೆ. ತನ್ನ ಇಷ್ಟದ ನಟನೆ ಹಾಗೂ ಚಿತ್ರರಂಗ ತನ್ನನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತದೆ ಎಂದು ಈ ನಟಿ ಎಂದಿಗೂ ಭಾವಿಸಿರಲಿಲ್ಲ. ನಟಿ ಲಲಿತಾ ಪಾವರ್ ಇವರು ಏಳು ವರ್ಷವಿದ್ದಾಗ ಒಂದು ದಿನ ಪೂಣೆಯಲ್ಲಿ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ನೋಡಲು ಗೋಡೆ ಹತ್ತಿ ಜಂಪ್ ಮಾಡಿದರು. ಆಗ ನಿರ್ದೇಶಕರ ಕಣ್ಣಿಗೆ ಬಿದ್ದ ಈಕೆಗೆ ಅದೇ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರ ಕೊಟ್ಟರು. ಆಗ ಚಿತ್ರರಂಗದ ಬಗ್ಗೆ ಅತಿಯಾದ ಆಸಕ್ತಿಯನ್ನು ಬೆಳೆಸಿಕೊಂಡ ಲಲಿತಾರವರು ನಂತರ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಬೇಡಿಕೆಯ ನಟಿಯಾಗಿ ಬೆಳೆದರು.  ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ಧಾರಾವಾಹಿಯಲ್ಲಿ ಮಂಥರ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು. ನಟಿ ಲಲಿತಾ ಇದ್ದರೆ ಸಾಕು ಸಿನಿಮಾ ಹಿಟ್ ಅನ್ನುವ ಕಾಲ ಅದು. ಆದರೆ ಆ ಒಂದು ಘಟನೆ ಆಕೆಯ ಜೀವನವನ್ನು ನಾಶಮಾಡಿತು.

Advertisement

Advertisement

ಒಂದು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಹೊಸ ನಟನಾದ ಭಗವಾನ್ ರವರು ನಟಿ ಲಲಿತಾರವರ ಕೆನ್ನೆಗೆ ಹೊಡೆಯುವ ಸೀನ್ ಅದು. ಹೊಸ ನಟನಾದ ಭಗವಾನ್ ಗೆ ಹೇಗೆ ಹೊಡೆಯಬೇಕೆಂದು ಗೊತ್ತಿಲ್ಲದೆ ಕೆನ್ನೆಗೆ ನಿಧಾನವಾಗಿ ಹೊಡೆಯುವ ಬದಲು ಪಟಾರ್ ಅಂತ ಜೋರಾಗಿ ನಟಿ ಲಲಿತಾರವರ ಕೆನ್ನೆಗೆ ಹೊಡೆದರು. ತಕ್ಷಣ ತಲೆತಿರುಗಿ ಬಿದ್ದ ಲಲಿತಾರವರ ಕಿವಿಯಲ್ಲಿ ರಕ್ತ ಬಂತು. ಕಣ್ಣಿನ ಭಾಗ ಊದುಕೊಂಡಿತ್ತು. ಎಡಗಣ್ಣಿನ ನಾಳ ಒಡೆದುಹೋಯಿತು. ಅದರಿಂದ ಚೇತರಿಸಿಕೊಳ್ಳಲು ನಟಿ ಲಲಿತ ಅವರಿಗೆ ಮೂರು ವರ್ಷ ಬೇಕಾಯಿತು. ಹಾಗೆ ಎಡಗಣ್ಣಿನ ದೃಷ್ಟಿ ಕಳೆದುಕೊಂಡರು. ಈ ಘಟನೆಯ ನಂತರ ನಟಿ ಲಲಿತಾರವರ ಮುಖ ಬದಲಾದ ಕಾರಣ ಯಾರು ಸಿನಿಮಾಗಳಲ್ಲಿ ಅವಕಾಶಗಳು ಕೊಡಲಿಲ್ಲ. ಹಾಗಾಗಿ ಪೋಷಕ ನಟಿಯಾಗಿ ಅತ್ತೆ ಪಾತ್ರಗಳಲ್ಲಿ, ತಾಯಿ ಪಾತ್ರಗಳಲ್ಲಿ ಮತ್ತೆ ಮಿಂಚಿದರು.

Advertisement

Advertisement

ವರ್ಷಗಳು ಕಳೆದಂತೆ ಕೆನ್ನೆಗೆ ಬಿದ್ದ ಏಟು ಈ ನಟಿಗೆ ತುಂಬಾ ನೋವು ಕೊಡುತ್ತಿತ್ತು. ಶೂಟಿಂಗ್ ನಲ್ಲಿ ಹಾಕುವ ಲೈಟಿಂಗ್ ಎದುರು ನಿಲ್ಲುವ ಶಕ್ತಿಯನ್ನು ಕಳೆದುಕೊಂಡರು. ಕೊನೆಗೆ ಚಿತ್ರರಂಗ ಬೇಡ ಎಂದು ದೂರ ಸರಿದರು. ಇಷ್ಟೆಲ್ಲಾ ಆದರೂ ತನ್ನ ಕೆನ್ನೆಗೆ ಜೋರಾಗಿ ಹೊಡೆದು ಕಣ್ಣು ಕಳೆದುಕೊಳ್ಳುವಂತೆ ಮಾಡಿದ ನಟ ಭಗವಾನ್ ರವರನ್ನು ಮಾತ್ರ ಲಲಿತಾರವರು ಕ್ಷಮಿಸಿದರು. ತಮ್ಮ ಕೆನ್ನೆಗೆ ಹೊಡೆದ ನಟನಿಗೆ ತಾವೇ ಸಮಾಧಾನ ಮಾಡಿ ನೀವು ಬೇಕಂತ ಮಾಡಿಲ್ಲ ಎಂದು ಹೇಳಿ ಕ್ಷಮಿಸಿದ ನಟಿ ಲಲಿತಾರವರ ಒಳ್ಳೆಯ ಮನಸ್ಸು ಮೆಚ್ಚುವಂತಹದ್ದು.

All Rights Reserved Namma Kannada Entertainment.

Advertisement
Share this on...