ಲಾಸ್ ಏಂಜಲೀಸ್’ನಲ್ಲಿರುವ ಸನ್ನಿ ಐಷಾರಾಮಿ ಬಂಗ್ಲೆ ಹೇಗಿದೆ ಗೊತ್ತಾ ?

in ಮನರಂಜನೆ 60 views

ಬಾಲಿವುಡ್ನ ಬೇಬಿ ಡಾಲ್ ಸನ್ನಿ ಲಿಯೋನ್ ತಮ್ಮ ಕೂಲ್ ಸ್ಟೈಲ್’ಗೆ ಮಾತ್ರವಲ್ಲದೆ, ಐಷಾರಾಮಿ ಜೀವನಶೈಲಿಗೂ ಹೆಸರುವಾಸಿಯಾಗಿದ್ದಾರೆ. ಆದರೆ ಅವರು ಈ ಮಟ್ಟಕ್ಕೆ ಬರಲು ಬಹಳ ಕಷ್ಟ ಅನುಭವಿಸಿದ್ದಾರೆ. ಪೋರ್ನ್ ಇಂಡಸ್ಟ್ರಿಯಿಂದ ಬಂದ ಸನ್ನಿ, ಬಾಲಿವುಡ್ ನಟಿಯಾಗಿ ಬೆಳೆದಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಕೋಟಿಗಟ್ಟಲೆ ಆಸ್ತಿಗೆ ಒಡತಿಯಾಗಿದ್ದಾರೆ. ಸದ್ಯ ಈ ಲಾಕ್ ಡೌನ್ ಸಮಯದಲ್ಲಿ ತನ್ನ ಇಡೀ ಕುಟುಂಬದೊಂದಿಗೆ ಲಾಸ್ ಏಂಜಲೀಸ್ ಮನೆಯಲ್ಲಿ ವಾಸಿಸುತ್ತಿರುವ ಸನ್ನಿ ಮನೆ ಹೇಗಿದೆ ಎಂದು ನೋಡೋಣ ಬನ್ನಿ.

Advertisement

 

Advertisement


ಇಂದು ನಾವು ಸನ್ನಿ ಲಿಯೋನ್ ಅವರ ಐಷಾರಾಮಿ ಬಂಗಲೆಯ ಚಿತ್ರಗಳನ್ನು ನಿಮಗೆ ತೋರಿಸಲಿದ್ದೇವೆ. ವಾಸ್ತವವಾಗಿ ಸನ್ನಿ ಅವರ ಬಂಗಲೆ ಅಮೆರಿಕದ ಲಾಸ್ ಏಂಜಲೀಸ್ ‘ನಲ್ಲಿದೆ. ಎಕರೆಗಟ್ಟಲೆ ಪ್ರದೇಶದಲ್ಲಿ ಹರಡಿರುವ ಸನ್ನಿ ಅವರ ಈ ಐಷಾರಾಮಿ ಬಂಗಲೆ ನೋಡಿ ಅಭಿಮಾನಿಗಳು ಇಷ್ಟಗಲ ಕಣ್ಣರಳಿಸಿದ್ದಾರೆ. ಸನ್ನಿ ಈಗ ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಹೊಸ ಮತ್ತು ಅತ್ಯಂತ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ.

Advertisement

 

Advertisement


1 ಎಕರೆ ಪ್ರದೇಶದಲ್ಲಿ ಹರಡಿರುವ ಈ ಐಷಾರಾಮಿ ಬಂಗಲೆಯಲ್ಲಿ 5 ಮಲಗುವ ಕೋಣೆಗಳಿವೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಸನ್ನಿ ಲಿಯೋನ್’ನ ಈ ಮನೆ ಅಮೆರಿಕದ ಅತ್ಯಂತ ದುಬಾರಿ ಸ್ಥಳಗಳಲ್ಲಿ ಒಂದಾದ ಬೆವರ್ಲಿ ಹಿಲ್ಸ್’ನಿಂದ ಸುಮಾರು 30 ನಿಮಿಷಗಳ ದೂರದಲ್ಲಿದೆ ಎಂಬುದಂತು ನಿಜ. ಇದಲ್ಲದೆ ಸನ್ನಿ ಮತ್ತು ಡೇನಿಯಲ್ ಮುಂಬೈನ ಜುಹು ಪ್ರದೇಶದಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಈ ಐಷಾರಾಮಿ ಬಂಗಲೆಯ ಫೋಟೋಗಳನ್ನು ಹಂಚಿಕೊಂಡಿರುವ ಸನ್ನಿ, ‘ಹಳ್ಳಿಗಾಡಿನ ಶೈಲಿಯ ನಮ್ಮ ಸಣ್ಣ ಮನೆ, ಮಿಡಲ್ ಸಿಟಿಯಲ್ಲಿ ಒಂದು ಎಕರೆ ಜಾಗದಲ್ಲಿದೆ. ಹೊಸ ಆರಂಭ’ ಎಂದು ಬರೆದುಕೊಂಡಿದ್ದಾರೆ. ಈ ಮನೆಗಾಗಿ ಸನ್ನಿ ಇಟಲಿ, ರೋಮ್ ಮತ್ತು ಸ್ಪೇನ್ನಿಂದ ವಸ್ತುಗಳನ್ನು ಖರೀದಿಸಿದ್ದಾರೆ.

 

ಕೊರೊನಾ ವೈರಸ್ ಕಾರಣದಿಂದಾಗಿ ಸನ್ನಿ ಲಿಯೋನ್ ಕುಟುಂಬ ಯುಎಸ್’ಗೆ ತೆರಳಿದೆ. ಅಷ್ಟೇ ಅಲ್ಲ, ಈ ಲಾಕ್ ಡೌನ್ ಸಮಯದಲ್ಲಿ ನಾನು ಮತ್ತು ಡೇನಿಯಲ್ ನಮ್ಮ ಮಕ್ಕಳನ್ನು ಕೊರೊನಾದಿಂದ ರಕ್ಷಿಸಿಕೊಳ್ಳಲು ಈ ಸ್ಥಳದಲ್ಲಿ ಕಾಲ ಕಳೆಯುತ್ತಿದ್ದೇವೆ ಎಂದು ಸನ್ನಿ ಈ ಹಿಂದೆ ಹೇಳಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

Advertisement
Share this on...