ಎಲ್ಲರ ಮನೆಯಲ್ಲೂ ಸಿಗುವಂತ ಹಣ್ಣು ಇದರ ಲಾಭ ತುಂಬಾ..!

in ಕನ್ನಡ ಆರೋಗ್ಯ 49 views

ಎಲ್ಲರ ಮನೆಯಲ್ಲಿ ಸಿಗುವಂತ ನಿಂಬೆಹಣ್ಣಿನಿಂದ ಆಗುವಂತ ಆಯುರ್ವೇದದ ಲಾಭಗಳನ್ನು ತಿಳಿದುಕೊಳ್ಳಿ. ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದರೆ ಒಂದು ಬಟ್ಟಲು ಬಿಸಿ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ ಅರ್ಧ ಟೀ ಚಮಚ ಅಡುಗೆ ಸೋಡಾವನ್ನು ಸೇರಿಸಿ ಸೇವಿಸಿದರೆ ಶೀಘ್ರವೇ ಗುಣವಾಗಿ ಹೊಟ್ಟೆನೋವು ಉಪಶಮನವಾಗುವುದು.

Advertisement

 

Advertisement

Advertisement

 

Advertisement

ನಿಂಬೆ ಹಣ್ಣಿನ ರಸದಲ್ಲಿ ಸಕ್ಕರೆ ಕಲಸಿ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ವಾಂತಿ ನಿಲ್ಲುವುದು. ಒಂದು ನಿಂಬೆಹಣ್ಣಿನ ರಸ ತೆಗೆದು ಅದಕ್ಕೆ ರಸದ ಅರ್ಧಭಾಗದಷ್ಟು ಅಪ್ಪಟ ಹರಳೆಣ್ಣೆಯನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆ ನುಲಿಯುವಿಕೆ ಮತ್ತು ಸಂಕಟ ಪರಿಹಾರವಾಗಿ ದೇಹಕ್ಕೆ ಆರಾಮವೆನಿಸುವುದು. ಸ್ವಲ್ಪ ಉಪ್ಪು ಬೆರೆಸಿದ ನೀರಿಗೆ ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುವುದು.

 

 

ಮಧ್ಯಮಗಾತ್ರದ ನಿಂಬೆಹಣ್ಣನ್ನು ಕತ್ತರಿಸಿ ರಸ ಹಿಂಡಿ ಆ ರಸವನ್ನು ಸೇವಿಸುವುದರಿಂದ ಹುಳಿತೇಗು ನಿವಾರಣೆಯಾಗುವುದು. ಒಂದು ಬಟ್ಟಲು ಕುರಿಯ ಹಾಲಿಗೆ ಒಂದು ಹೋಳು ನಿಂಬೆ ಹಣ್ಣಿನ ರಸ ಹಿಂಡಿ ಸೇವಿಸುವುದರಿಂದ ಆಮಶಂಕೆ ನಿವಾರಣೆಯಾಗುವುದು. ಆಗ ತಾನೆ ಹಿಂಡಿದ ಒಂದು ಬಟ್ಟಲು ಹಸುವಿನ ನೊರೆ ಹಾಲಿಗೆ ಒಂದು ನಿಂಬೆಹಣ್ಣನ್ನು ಹಿಂಡಿ ತಕ್ಷಣ ಸೇವಿಸಿ ಹತ್ತು ದಿನಗಳವರೆಗೆ ಈ ರೀತಿ ಸೇವಿಸಿದರೆ ಮೂಲವ್ಯಾಧಿ ಗುಣವಾಗುವುದು. ಸತತ ನಿಂಬೆ ಹಣ್ಣಿನ ಸೇವನೆಯಿಂದ ಮುಖದ ಮೇಲೆ ಬರುವ ಸುಕ್ಕುಗಳು ಕೂಡ ಕಡಿಮೆಯಾಗುತ್ತದೆ.

 

 

ಇಲ್ಲಿ ತಪ್ಪದೆ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ಯಾವುದೇ ಆಗಲಿ ಹಿತಮಿತವಾಗಿದರೆ ಆರೋಗ್ಯಕ್ಕೆ ಒಳ್ಳೆಯದು. ಅತಿಯಾದರೆ ಅಮೃತವು ಕೂಡ ವಿಷವಾಗುತ್ತದೆ ಆ ವಿಷಯವನ್ನು ನೆನಪಿನಲ್ಲಿಟ್ಟುಕೊಂಡು ನಿಂಬೆಹಣ್ಣನ್ನು ಕೂಡ ಅಷ್ಟೇ ಹಿತಮಿತವಾಗಿ ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಒಂದುವೇಳೆ ಈ ನಿಂಬೆರಸವನ್ನ ಪ್ರಮಾಣಕ್ಕಿಂತ ಹೆಚ್ಚು ತೆಗೆದುಕೊಂಡಾಗ ಒಮ್ಮೊಮ್ಮೆ ಕಿಡ್ನಿಯಲ್ಲಿ ಹರಳುಗಳನ್ನ ಇದು ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಹಿತಮಿತವಾದ ಸೇವನೆ ಯಾವುದೇ ಆಗಲಿ ಅದು ಆರೋಗ್ಯವನ್ನ ವೃದ್ಧಿಸುತ್ತದೆ.

– ಸುಷ್ಮಿತಾ

Advertisement
Share this on...