ಟಿಕ್ ಟಾಕ್ ಹೋಯ್ತು, ಲಿಟ್ ಲಾಟ್ ಬಂತು : ಯಾವ ರೇಂಜ್ ಗೆ ಬೆಳೆಯುತ್ತಿದೆ ಗೊತ್ತಾ?

in ಕನ್ನಡ ಮಾಹಿತಿ/ಮನರಂಜನೆ 98 views

ಅಬ್ಬಾ ಇತ್ತೀಚಿನ ದಿನಗಳಂತೂ ಈ ಟಿಕ್ ಟಾಕ್ ಎಂಬ ಅಪ್ಲೀಕೇಶನ್ ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯೆ ಗಳಿಸಿದ್ದು,ಪ್ರತಿಯೊಬ್ಬರ ಮೊಬೈಲ್ ನಲ್ಲೂ ಈ ಟಿಕ್ ಟಾಕ್ ಅಪ್ಲಿಕೇಶನ್ ಇರುತ್ತಿತ್ತು. ಹದಿಹರಿಯದ ಹುಡುಗರಿಂದ ಹಿಡಿದು ವಯಸ್ಸಾದ ಮುದುಕರ ತನಕ ಈ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡುತ್ತಿದ್ದು, ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದರು. ಬರೀ ಜನಸಾಮಾನ್ಯರು ಮಾತ್ರವಲ್ಲದೆ ಸಿನಿಮಾ ಸೆಲೆಬ್ರಿಟಿಗಳು, ಕ್ರಿಕೆಟಿಗರು ಸೇರಿದಂತೆ ಎಲ್ಲಾ ವರ್ಗದವರು ಕೂಡ ಈ ಟಿಕ್ ಟಾಕ್ ಮೋಡಿಗೆ ಮಾರು ಹೋಗಿದ್ದರು. ಈ ಅಪ್ಲಿಕೇಶನ್ ನಿಂದ ಬಹಳ ಉಪಯೋಗವು ಕೂಡ ಆಗಿದೆ. ಅದೆಷ್ಟೋ ನಟರಾಗಬೇಕೆಂದು ಕನಸೊತ್ತಿದ್ದ ಪ್ರತಿಭೆಗಳು ಅವಕಾಶವಿಲ್ಲದೆ, ಮನೆಯಲ್ಲೆ ಕುಳಿತು ಸಿಕ್ಕ ಕೆಲಸವನ್ನು ಮಾಡುತ್ತ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಈ ಅಪ್ಲಿಕೇಶನ್ ಬಂದ ಮೇಲೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿ ಕಿರುತೆರೆ ಹಾಗೂ ಹಿರೆತೆರೆಯಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ತಮ್ಮ ಬದುಕನ್ನೇ ಬದಲಿಸಿಕೊಂಡಿದ್ದಾರೆ. ಅದರ ಜೊತೆಗೆ ಲಕ್ಷ ಲಕ್ಷ ಫಾಲೋವರ್ಸ್ ಪಡೆದುಕೊಂಡು ಸಿನಿಮಾ ಸ್ಟಾರ್ ಅಂತೆ ದೊಡ್ಡ ಸೆಲೆಬ್ರಿಟಿಗಳಾಗಿದ್ದರು.

Advertisement

Advertisement

ಇದರ ಬೆನ್ನಲ್ಲೇ ಟಿಕ್ ಟಾಕ್ ವಿರುದ್ದ ಪರ ವಿರೋದಗಳು ನಡೆಯುತ್ತಲೇ ಇದ್ದವು. ಕಾರಣ ವರ್ಷಾನುವರ್ಷ ಟಿ.ವಿ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು ಅಷ್ಟು ಖ್ಯಾತಿ ಪಡೆದಿರುವುದಿಲ್ಲ. ಆದರೆ ಈ ಸಾಮಾಜಿಕ ಜಾಲತಾಣಗಳಲ್ಲಿ ಬಿಡುವ ಹಾಡು ಮತ್ತು ನೃತ್ಯದ ಟಿಕ್ ಟಾಕ್ ವಿಡೀಯೊಗಳಿಂದ ರಾತ್ರೋರಾತ್ರಿ ದೊಡ್ಡ ಸ್ಟಾರ್ಸ್ ಆಗಿ ಬಿಡುತ್ತಾರೆ ಎಂದು ಅದೆಷ್ಟೋ ಜನ ಧ್ವನಿ ಎತ್ತಿದ್ದರು. ಇನ್ನು ಹೆಣ್ಣು ತಮ್ಮ ಅರೆ ಬಟ್ಟೆ ಮತ್ತು ಮೈಕಾಂತಿಯನ್ನು ತೋರಿಸಿದರೇ ಸಾಕು ಲಕ್ಷ ಲಕ್ಷ ಫಾಲೋವರ್ಸ್ ಗಳನ್ನು ಸಂಪಾಧಿಸುದ್ದರು .ಈ ಬೆಳವಣಿಗೆಯನ್ನು ನೋಡುತ್ತಿದ್ದ ಅನೇಕ ನೆಟ್ಟಿಗರು ಇದನ್ನು ಬ್ಯಾನ್ ಮಾಡುವಂತೆ ಧ್ವನಿ ಎತ್ತಿದ್ದರು. ಇದರ ಜೊತೆ ಚೀನಾ ಹಾಗೂ ಭಾರತದ ಗಡಿ ವಿವಾದ ಚೀನಾ ಅಪ್ಲಿಕೇಶನ್ ಎಲ್ಲವನ್ನು ನಿಷೇಧ ಮಾಡಲು ಅಡಿಪಾಯ ಹಾಕಿ ಕೊಟ್ಟಿತು. ಇದೀಗ ಟಿಕ್ ಟಾಕ್ ಬ್ಯಾನ್ ಆದ ಕಾರಣ ಚೀನಾ ದೇಶಕ್ಕೆ ಇದೀಗ ಕೋಟಿ ಕೋಟಿ ನಷ್ಟ ಅಗುತ್ತಿದೆ. ಅಲ್ಲದೇ ಚೀನಾ ದೇಶದಲ್ಲಿ ಅನೇಕರು ನಿರೋದ್ಯೊಗಿಗಳಾಗಿದ್ದಾರೆ. ಇದರ ಜೊತೆ ಅದೆಷ್ಟೋ ಭಾರತೀಯ ಯುವ ಪ್ರತಿಭೆಗಳು ನಿರಾಸೆಗೊಂಡಿದ್ದು, ಟಿಕ್ ಟಿಕ್ ನಿಷೇಧವಾಗಿರುವುದರ ಬಗ್ಗೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

Advertisement

Advertisement

ಇದರ ಬೆನ್ನಲ್ಲೇ ಇದೀಗ ಭಾರತದ ಅಪ್ಲಿಕೇಶನ್ ಒಂದು ಬಿಡುಗಡೆಯಾಗಿದ್ದು ಇದಕ್ಕೆ ಲಿಟ್ ಲಾಟ್ ಎಂದು ಹೆಸರಿಡಲಾಗಿದೆ. ಈಗಾಗಲೇ ಸಾಕಷ್ಟು ಮಂದಿ ಈ ಅಪ್ಲಿಕೇಶನ್ ಮುಖಾಂತರ ವಿಡಿಯೋ ಮಾಡಿದ್ದು, ದೇಸಿ ಅಪ್ಲಿಕೇಶನ್ ಗೆ ಮಾರು ಹೋಗಿದ್ದಾರೆ. ಈಗಾಗಲೇ ಈ ಅಪ್ಲಿಕೇಶನ್ ಅನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ಡೌನ್ಲೋಡ್ ಮಾಡಿದ್ದು, ಇನ್ಸ್ಟಾಗ್ರಾಮ್ ನಲ್ಲಿ 606 k ಫಾಲೋವರ್ಸ್ ನ ಸಂಪಾದಿಸಿ ಬಿಟ್ಟಿದೆ. ಒಟ್ಟಾರೆ ಟಿಕ್ ಟಾಕ್ ಹೋದರೆ ಹೋಯ್ತು, ಲಿಟ್ ಲಾಟ್ ಬಂತಲ್ಲ ಎಂದು ಯುವಕರು ಇದರ ಬೆನ್ನಿಗೆ ಬಿದ್ದಿದ್ದಾರೆ.

Advertisement
Share this on...