ಲಿಪ್ ಸ್ಟಿಕ್, ಮಸ್ಕರಾ ಸ್ವಚ್ಛಗೊಳಿಸದಿದ್ದರೂ ಹರಡುತ್ತದೆ ಕೊರೊನಾ !

in ಕನ್ನಡ ಮಾಹಿತಿ 51 views

ಕೊರೊನಾ ವೈರಸ್’ನಿಂದ ರಕ್ಷಿಸಿಕೊಳ್ಳಲು ಜನರು ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ. ಆಹಾರ, ಪಾನೀಯದಿಂದ ಹಿಡಿದು ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಾರೆ. ಈ ವೈರಸ್’ನ ಸೋಂಕು ಹತ್ತಿರಕ್ಕೂ ಸುಳಿಯಬಾರದೆಂದರೆ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛವಾಗಿಡುವುದು, ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇನ್ನೊಂದು ಮುಖ್ಯವಾದ ವಿಚಾರವೆಂದರೆ ಈ ವೈರಸ್ ಮೇಕಪ್ ಮೂಲಕವೂ ಹರಡಬಹುದು. ಆದ್ದರಿಂದ ಇಲ್ಲಿ ಮೇಕಪ್ ಉತ್ಪನ್ನಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ ಓದಿ. ಲಿಪ್ ಸ್ಟಿಕ್ ಮತ್ತು ಮಸ್ಕರಾ ಸಹ ಕೊರೊನಾವನ್ನು ಹರಡಬಹುದು. ಆದ್ದರಿಂದ ಹೆಣ್ಣುಮಕ್ಕಳು ಅನೇಕ ದೈನಂದಿನ ವಸ್ತುಗಳಂತೆ, ಮೇಕಪ್ ಉತ್ಪನ್ನಗಳು ಮತ್ತು ಉಪಕರಣಗಳನ್ನು ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಅವು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಸಂತಾನೋತ್ಪತ್ತಿ ಮಾಡುವ ಸ್ಥಳವಾಗಬಹುದು. ನಿಮ್ಮ ಮೇಕಪ್ ಉತ್ಪನ್ನವನ್ನು ಯಾರೊಂದಿಗಾದರೂ ಹಂಚಿಕೊಂಡರೂ ನಿಮ್ಮ ವಸ್ತುಗಳಲ್ಲಿ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತವೆ. ಲಿಪ್ ಸ್ಟಿಕ್, ಮಸ್ಕರಾ ಮತ್ತು ಐಲೈನರ್ ವೈರಸ್ ಅನ್ನು ಸುಲಭವಾಗಿ ಹರಡುವ ಮೇಕಪ್ ಉತ್ಪನ್ನಗಳಾಗಿವೆ. ಆದ್ದರಿಂದ ಮೇಕಪ್ ಉತ್ಪನ್ನಗಳನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂದು ತಿಳಿಯೋಣ.

Advertisement

 

Advertisement

Advertisement

 

Advertisement

ನಿಮ್ಮ ಕಾಂಪ್ಯಾಕ್ಟ್ಗಳು, ಐಷಾಡೋಗಳು ಮತ್ತು ಬ್ಲಶರ್ಗಳ ಮೇಲೆ ನಿಮ್ಮ ಬೆರಳುಗಳನ್ನು ಬಳಸಬೇಡಿ. ಏಕೆಂದರೆ ನೀವು ಬೆರಳುಗಳನ್ನು ಬಳಸುವುದರಿಂದ ಈ ಉತ್ಪನ್ನಗಳು ಕಲುಷಿತಗೊಳ್ಳಬಹುದು. ಆದ್ದರಿಂದ ಮೇಕಪ್ ಉತ್ಪನ್ನಗಳನ್ನು ಬಳಸುವುದಕ್ಕೆ ಕ್ಲೀನಿಂಗ್ ಬ್ರಶಸ್, ಅಪ್ಲಿಕೇಟರ್ಸ್’ಗಳಂತಹ ಅತ್ಯುತ್ತಮ ಸಾಧನಗಳನ್ನು ಬಳಸಿ.
ಫೌಂಡೇಶನ್ ಬಾಟಲ್ ಮತ್ತು ಅದರ ನಳಿಕೆಯನ್ನು ಸ್ವಚ್ಛಗೊಳಿಸಲು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ ಅನ್ನು ಬಳಸಬಹುದು. ಹತ್ತಿ ಪ್ಯಾಡ್ ನಲ್ಲಿ ಸ್ಯಾನಿಟೈಜರ್ ಅನ್ನು ತೇವಗೊಳಿಸಿ, ಅದರಿಂದ ಫೌಂಡೇಶನ್ ಬಾಟಲಿಯನ್ನು ಒರೆಸಿ. ನೀವು ಎಷ್ಟೇ ಬ್ಯೂಸಿಯಾಗಿದ್ದರೂ, ವಾರಕ್ಕೊಮ್ಮೆಯಾದರೂ ನಿಮ್ಮ ಮೇಕಪ್ ಬ್ರಷ್ ಮತ್ತು ಸ್ಪಾಂಜುಗಳನ್ನು ಬ್ರಷ್ ಕ್ಲೆನ್ಸರ್ ಮೂಲಕ ಸ್ವಚ್ಛಗೊಳಿಸಿ. ಬ್ರಷ್ಗಳನ್ನು ಸ್ವಚ್ಛಗೊಳಿಸಲು ಮೇಕಪ್ ರಿಮೂವರ್ ಸಹ ಬಳಸಬಹುದು.

 

ನೀವು ಬಿಸಾಡಲೆಂದು ಎತ್ತಿಟ್ಟುಕೊಂಡಿರುವ ಸ್ಪಾಂಜುಗಳನ್ನು ಬಳಸಬಹುದು. ಬ್ಯೂಟಿ ಬ್ಲೆಂಡರ್ ಅನ್ನು ಸೋಪಿನಿಂದ ತೊಳೆಯಬಹುದು. ನೀವು ಸೋಂಕುನಿವಾರಕ ಸ್ಪ್ರೇ ಹೊಂದಿದ್ದರೆ ಅದನ್ನು ಮೇಕಪ್ ಉತ್ಪನ್ನಗಳ ಮೇಲೆ ಸಿಂಪಡಿಸಬಹುದು. ಮಸ್ಕರಾ ಮತ್ತು ಐಲೈನರ್ ಮೇಲೆ ಏರೋಸಾಲ್ ಸ್ಪ್ರೇ ಬಳಸಿ ಅದನ್ನು ಸ್ವಚ್ಛಗೊಳಿಸಬಹುದು. ನೀವು ಕಣ್ಣಿನ ಸೋಂಕನ್ನು ತಡೆಯಬೇಕೆಂದರೆ ಕಲುಷಿತಗೊಂಡ ಐ ಮೇಕಪ್ಸ್ ಉಪಯೋಗಿಸಬೇಡಿ.

Advertisement
Share this on...