ಸರ್ವದೋಷ ನಿವಾರಣೆಗೆ ನೀವು ಈ ದೇವಾಲಯಕ್ಕೆ ಭೇಟಿ ನೀಡಲೇಬೇಕು

in ಕನ್ನಡ ಮಾಹಿತಿ 252 views

ಈ ಹಿಂದೆ ಕಂಚಿ ವರದರಾಜಸ್ವಾಮಿ ದೇವಾಲಯದ ಕೆಲ ವಿಶೇಷತೆ ಹಾಗೂ 40 ವರ್ಷಗಳಿಗೆ ಒಮ್ಮೆ ಮಾತ್ರ ದರ್ಶನ ನೀಡುವ ಜಲಸ್ವರೂಪಿ ವಿಷ್ಣು ದೇವರ ಬಗ್ಗೆ ತಿಳಿದುಕೊಂಡಿದ್ದೆವು. ಅದೇ ದೇವಾಲಯದ ಇನ್ನಷ್ಟು ವಿಶೇಷತೆಗಳನ್ನು ಜೀವನದಲ್ಲಿ ತಿಳಿದುಕೊಳ್ಳಲೇಬೇಕಾದ ಅಗತ್ಯವಿದೆ. ಕಂಚಿಯ ವರದರಾಜಸ್ವಾಮಿ ದೇವಾಲಯ ಅಥವಾ ವರದರಾಜ ಪೆರುಮಾಳ್ ದೇವಾಲಯದಲ್ಲಿ ಸರ್ವದೋಷಗಳನ್ನು ನಿವಾರಣೆ ಮಾಡಬಲ್ಲ ಎರಡು ಪ್ರತಿಕೃತಿಗಳಿವೆ. ಅವುಗಳೇ ಬಂಗಾರದ ಹಾಗೂ ಬೆಳ್ಳಿಯ ಹಲ್ಲಿಗಳ ಪ್ರತಿಕೃತಿಗಳು. ಯಾರು ಈ ಹಲ್ಲಿಗಳನ್ನು ಸ್ಪರ್ಶಿಸುತ್ತಾರೋ ಅವರಿಗೆ ಸರ್ವ ದೋಷಗಳು ನಿವಾರಣೆಯಾಗುತ್ತವೆ ಎಂಬುದು ಹಿಂದಿನಿಂದ ಬಂದಿರುವ ನಂಬಿಕೆ. ಈ ಹಲ್ಲಿಗಳು ದೇವಾಲಯದೊಳಗೆ ಹೇಗೆ ಬಂದವು ಎಂಬ ಬಗ್ಗೆ ಕುತೂಹಲಕಾರಿಯಾದ ಪುರಾಣ ಕಥೆಯೊಂದದಿದೆ. ಅಗಸ್ತ್ಯ ಮುನಿಗಳ ಇಬ್ಬರು ಶಿಷ್ಯಂದಿರು ಗುರುಗಳ ಪೂಜೆಗಾಗಿ ಪ್ರತಿದಿನ ನದಿಗೆ ತೆರಳಿ ನೀರನ್ನು ತೆಗೆದುಕೊಂಡುಬರುತ್ತಿರುತ್ತಾರೆ.

Advertisement

Advertisement

ಹೀಗೆ ತಂದ ನೀರಿನಲ್ಲಿ ಒಮ್ಮೆ ಹಲ್ಲಿಯೊಂದು ಬಿದ್ದಿರುತ್ತದೆಯಂತೆ. ಆಗ ಕೋಪಗೊಂಡ ಅಗಸ್ತ್ಯ ಮುನಿಗಳು ಇಬ್ಬರು ಶಿಷ್ಯಂದಿರಿಗೆ ಹಲ್ಲಿಗಳಾಗಿ ಕಂಚಿಯಲ್ಲಿರಿ ಎಂದು ಶಾಪವನ್ನಿತ್ತರಂತೆ. ಕಾಲಾನಂತರ ಇಂದ್ರದೇವನು ಗಜೇಂದ್ರನ ರೂಪದಲ್ಲಿ ಸೂರ್ಯ ಹಾಗೂ ಚಂದ್ರನೊಂದಿಗೆ ವರದರಾಜ ಪೆರುಮಾಳ್ ದೇವಾಲಯದಲ್ಲಿ ಆರಾಧನೆ ಮಾಡಲು ಬಂದಾಗ ಅಗಸ್ತ್ಯ ಮುನಿಗಳ ಇಬ್ಬರು ಶಿಷ್ಯಂದಿರಿಗೆ ಶಾಪ ವಿಮೋಚನೆಯಾಯಿತಂತೆ. ಹೀಗಾಗಿ ಸೂರ್ಯನ ಪ್ರತೀಕವಾಗಿ ಬಂಗಾರದ ಹಲ್ಲಿ ಹಾಗೂ ಚಂದ್ರನ ಪ್ರತೀಕವಾಗಿ ಬೆಳ್ಳಿಯ ಹಲ್ಲಿಯ ನಿರ್ಮಾಣವಾಗಿದ್ದು, ಇವುಗಳನ್ನು ದರ್ಶಿಸಿ ಸ್ಪರ್ಶಿಸಿದರೆ ದೋಷ ನಿವಾರಣೆಯಾಗುತ್ತದೆ.

Advertisement

ಅಲ್ಲದೇ ಹಲ್ಲಿ ಮೈಮೇಲೆ ಬಿದ್ದ ದೋಷವನ್ನು ಪರಿಹಸಿಕೊಳ್ಳಲು ಸಹ ಈ ಚಿನ್ನ ಹಾಗೂ ಬೆಳ್ಳಿಯ ಹಲ್ಲಿ ಸ್ಪರ್ಶಿಸುವುದು ಕೂಡ ದೋಷ ನಿವಾರಣೆಗೆ ಕಾರಣವಾಗುತ್ತದೆ ಎಂಬುದು ನಂಬಿಕೆ. ಕಂಚಿಯ ವರದರಾಜಸ್ವಾಮಿ ದೇವಾಲಯ ಚೆನ್ನೈನಿಂದ 90 ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ಭೇಟಿ ನೀಡಿ ವರದರಾಜಸ್ವಾಮಿ ದೇವರ ಹಾಗೂ ಇಲ್ಲಿನ ಬಂಗಾರ ಹಾಗೂ ಬೆಳ್ಳಿ ಹಲ್ಲಿಗಳ ದರ್ಶನ ಪಡೆಯುವುದರಿಂದ ಮುಕ್ತಿ ದೊರೆಯುತ್ತದೆ ಎಂಬ ಪ್ರತೀತಿಯಿದೆ. ಹೀಗಾಗಿ ಈ ದೇವಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ.

Advertisement

Advertisement
Share this on...