ವೈದ್ಯೆಗೆ ಕೊರೊನಾ ರೋಗಿ ಮೇಲೆ ಲವ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ…ನಂತರ ಆಗಿದ್ದೇನು..?

in ಕನ್ನಡ ಮಾಹಿತಿ/ಮನರಂಜನೆ 205 views

ಕೊರೊನಾ ವೈರಸ್ ಜನಜೀವನವನ್ನೇ ಬುಡಮೇಲು ಮಾಡಿದೆ. ಕೆಲವರ ಜೀವನವನ್ನೇ ಬದಲಾಯಿಸಿದರೆ, ಮತ್ತೆ ಕೆಲವರಿಗೆ ಸಂಕಷ್ಟ ತಂದೊಡ್ಡಿದೆ. ಇನ್ನು ವೈದ್ಯರು ಕಳೆದ 3-4 ತಿಂಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಈ ನಡುವೆ ಕೊರೊನಾ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಾ ವೈದ್ಯೆಯೊಬ್ಬರಿಗೆ ಆ ರೋಗಿಯ ಮೇಲೆ ಪ್ರೀತಿ ಉಂಟಾಗಿ ಆಸ್ಪತ್ರೆಯಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಕಳೆದ ಕೆಲವು ದಿನಗಳಿಂದ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜನರು ಕೂಡಾ ಈ ವೈದ್ಯೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರು. ಪರವಾಗಿಲ್ವೇ ಕೊರೊನಾ ರೋಗಿಗೆ ಟ್ರೀಟ್​​ಮೆಂಟ್ ನೀಡುತ್ತಾ ಆತನ ಹೃದಯವನ್ನೇ ಕದ್ದ ವೈದ್ಯೆ ನಿಜವಾಗಿಯೂ ಗ್ರೇಟ್ ಎಂದು ಜನರು ಮಾತನಾಡಲಾರಂಭಿಸಿದರು. ಅಲ್ಲದೆ ಈ ಜೋಡಿಗಳ ಫೋಟೋಗಳನ್ನು ತಮ್ಮ ಸ್ಟೇಟಸ್, ಪೋಸ್ಟ್​​​​ಗಳಲ್ಲಿ ಷೇರ್ ಮಾಡಿಕೊಂಡು ಎಂಥಾ ಪ್ರೀತಿಯಪ್ಪಾ ಇದು ಎಂದು ಬರೆದುಕೊಂಡಿದ್ದರು. ಆದರೆ ನಿಜ ಸಂಗತಿಯೇ ಬೇರೆ.

Advertisement

 

Advertisement

Advertisement

ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​​ ಈ ಸುದ್ದಿಯ ಬೆನ್ನು ಹತ್ತಿತು. ಆಗ ನಿಜ ಸಂಗತಿ ಏನು ಎಂದು ಹೊರಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಇಂತಹ ಸುಳ್ಳುಸುದ್ದಿಗಳು ಹರಿದಾಡುತ್ತಿರುತ್ತವೆ. ಕೆಲವರು ಇದು ನಿಜವೋ , ಸುಳ್ಳೋ ಎಂಬುದರ ಬಗ್ಗೆ ವಿಚಾರ ಕೂಡಾ ಮಾಡುವುದಿಲ್ಲ. ಕಣ್ಣ ಮುಂದೆ ಇರುವುದೇ ಸತ್ಯ ಎಂದು ತಿಳಿಯುತ್ತಾರೆ.

Advertisement

ಫೋಟೋದಲ್ಲಿ ಇರುವ ವ್ಯಕ್ತಿಗೆ ಕೊರೊನಾ ಇರಲಿಲ್ಲ. ಅಂದಹಾಗೆ ಇವರಿಬ್ಬರು ಈಜಿಪ್ಟ್​​​​​​​​ ಡಾಕ್ಟರ್​​​ಗಳು. ಇವರ ಹೆಸರು ಮೊಹಮ್ಮದ್ ಫಹ್ಮೈ ಹಾಗೂ ಅಯಾ ಮೊಸ್ಬಾ. ಇದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಆಗಿದ್ದು ತಾವು ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಯಲ್ಲೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋಗಳನ್ನು ಕ್ಲಿಕ್ ಮಾಡಿದ ಪೋಟೋಗ್ರಾಫರ್​​​​ಗಳನ್ನು ಕೂಡಾ ಸಂಪರ್ಕಿಸಿದಾಗ ಇದೇ ವಿಚಾರ ಹೊರಬಂದಿದೆ.

 

ಒಂದು ಪೋಟೋ ಹಾಗೂ ವಿಡಿಯೋ ಮೂಲಕ ಸುಳ್ಳುಸುದ್ದಿ ಹಬ್ಬಿಸುವ ಜನರು ನಮ್ಮ ನಡುವೆ ಇರುತ್ತಾರೆ. ಆದರೆ ಅದನ್ನು ಪರಿಶೀಲಿಸಿ ನೋಡಿದಾಗ ನಿಜ ಏನು ಎಂಬುದು ಹೊರ ಬರುತ್ತದೆ.

Advertisement
Share this on...