ಸನ್ನಿ- ಡೇನಿಯಲ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?

in ಮನರಂಜನೆ 58 views

ನಟಿ ಸನ್ನಿ ಲಿಯೋನ್, ತನಗೆ ಪತಿ ಡೇನಿಯಲ್ ಅವರ ಮೇಲೆ ಲವ್ ಯಾವಾಗ ಶುರುವಾಯಿತು ಎಂಬ ಬಗ್ಗೆ ತಮ್ಮ ಜೀವನಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಸನ್ನಿ ತಾನು ಮೊದಲ ಬಾರಿಗೆ ಡೇನಿಯಲ್’ನನ್ನು ಹೇಗೆ ಭೇಟಿಯಾದೆ ಎಂದು ಕೂಡ ಹೇಳಿದ್ದಾರೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾವೊಂದರ ಸಂದರ್ಶನವೊಂದರಲ್ಲಿ ತನ್ನ ಹಾಗೂ ಪತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಸನ್ನಿ, ತಾನು 18 ವರ್ಷದವಳಿದ್ದಾಗ ಪೋರ್ನ್ ಚಿತ್ರದಲ್ಲಿ ಕೆಲಸ ಮಾಡಲು ಶುರು ಮಾಡಿದೆ ಎಂದು ಹೇಳಿದ್ದಾರೆ. ಸನ್ನಿ ಜೊತೆಗೆ ಡೇನಿಯಲ್ ಕೂಡ ಪೋರ್ನ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರಂತೆ.

Advertisement

 

Advertisement


ಆ ನಂತರ ಡೇನಿಯಲ್ ಬಗ್ಗೆ ಮಾತನಾಡಿರುವ ಸನ್ನಿ, “ನಾನು ಮತ್ತು ಡೇನಿಯಲ್ ವೆಗಾಸ್’ನ ಕ್ಲಬ್ಒಂದರಲ್ಲಿ ಭೇಟಿಯಾದೆವು. ಅಂದು ನಮ್ಮಿಬ್ಬರಿಗೂ ಮೊದಲ ನೋಟದಲ್ಲೇ ಪ್ರೇಮ ಮೂಡಿತು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಡೇನಿಯಲ್ ತನಗೆ ಹೇಗೆ ಪ್ರಪೋಸ್ ಮಾಡಿದರು ಎಂಬುದನ್ನು ತಿಳಿಸಿರುವ ಸನ್ನಿ, “ಡೇನಿಯಲ್ ಮೊದಲು ನನಗೆ ಉಂಗುರವನ್ನು ಕೊಟ್ಟರು. ನಂತರ ವಿಥ್ ಲವ್, ಡೇನಿಯಲ್ ಎಂದು ಹೇಳಿದ್ದು ನನಗೆ ಇನ್ನು ನೆನಪಿದೆ. ಆ ಸಮಯದಲ್ಲಿ ನಾನು ತುಂಬಾ ಉತ್ಸುಕಳಾಗಿದ್ದೆ. ಡೇನಿಯಲ್ ನನಗೆ ಪ್ರಪೋಸ್ ಮಾಡಿದಾಗ ನನ್ನ ಮನಸ್ಸಿನಲ್ಲೇ ನಾನೇ ಗುನುಗಲು ಪ್ರಾರಂಭಿಸಿದೆ. ನನಗೆ ಡೇನಿಯಲ್ ಸಿಕ್ಕಿದ್ದು ತುಂಬಾ ಅದೃಷ್ಟ”. ಎಂದು ಪ್ರಶಂಸಿಸಿದ್ದಾರೆ ಸನ್ನಿ.

Advertisement

 

Advertisement


ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡ ನಂತರ, ನೇರವಾಗಿ ಬಾಲಿವುಡ್’ಗೆ ಪ್ರವೇಶ ಪಡೆದ ಸನ್ನಿ ಸುರಸುಂದರಿ ಎಂಬುದರಲ್ಲಿ ಎರಡು ಮಾತಿಲ್ಲ. ವಯಸ್ಸು 39 ಆದರೂ ಹದಿಹರೆಯದವರೂ ನಾಚಿಕೊಳ್ಳುವಷ್ಟು ಅದ್ಭುತ ಸೌಂದರ್ಯವನ್ನು ಹೊಂದಿದ್ದಾರೆ. ಸನ್ನಿ ಲಿಯೋನ್ ತುಂಬಾ ಸುಂದರವಾಗಿ ಕಾಣಿಸಿಕೊಳ್ಳುವುದನ್ನು ನೋಡಿ ಅನೇಕರಿಗೆ ಸನ್ನಿ ಸೌಂದರ್ಯದ ಗುಟ್ಟೇನು ಎಂದು ಕಾಡದೆ ಇರಲಾರದು. ಆಕೆಯ ಹೊಳೆಯುವ ಚರ್ಮ ಕಂಡು ಹೆಂಗಳೆಯರೇ ಮನ ಸೋತಿದ್ದಾರೆ. ಸನ್ನಿ ತನ್ನ ಇನ್ಸ್ಟಾಗ್ರಾಮ್’ನಲ್ಲಿ ವಿವಿಧ ರೀತಿಯ ಸೌಂದರ್ಯದ ವೀಡಿಯೊಗಳನ್ನು ಪೋಸ್ಟ್ ಮಾಡಿರುವುದನ್ನು ನೀವು ನೋಡಿರಬಹುದು.

 

ಇತ್ತೀಚೆಗಷ್ಟೇ ತಮ್ಮ 39 ನೇ ಹುಟ್ಟುಹಬ್ಬ ಆಚರಿಸಿಕೊಂಡ ಸನ್ನಿ ಲಿಯೋನ್, ಬಾಲಿವುಡ್’ನಲ್ಲಿ ತಮ್ಮ ನಿರೀಕ್ಷೆಗೆ ತಕ್ಕ ಹಾಗೆ ಅವಕಾಶ ಪಡೆಯದಿದ್ದರೂ, ಅಭಿಮಾನಿಗಳ ಹೃದಯ ಕದಿಯುವುದರಲ್ಲಿ ವಿಫಲವಾಗಿಲ್ಲ.

Advertisement
Share this on...