ವಾಹಿನಿಯೊಂದರಲ್ಲಿ ಪ್ರಸಾರವಾಗಲಿದೆ ಲವ್ ಮಾಕ್ಟೇಲ್-೨ !

in ಸಿನಿಮಾ 40 views

ಈಗ ಕೋವಿಡ್ ಕಡಿಮೆಯಾಗಿದೆ. ಕಳೆದ ಎರಡು ವರ್ಷಗಳಿಂದ ಈಡೀ ವಿಶ್ವವೇ ಬಂದ್ ಆದ ಸ್ಥಿತಿಯಲ್ಲಿ ಇತ್ತು. ಈಗ ನಿಧಾನಕ್ಕೆ ಎಲ್ಲ ಚಟುವಟಿಕೆಗಳು ಗರಿಗೆದರುತ್ತಿದೆ. ಜನರು ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಹಾಗಾಗಿ ಎಲ್ಲ ರಂಗಗಳಲ್ಲಿ, ಉದ್ದಿಮೆಗಳಲ್ಲಿ ಕೆಲಸಗಳು ಆರಂಭವಾಗುತ್ತಿದೆ. ವರ್ಕ್ ಫ್ರಂ ಹೋಂ ಸಹ ಮುಗಿದು ಸಾಫ್ಟವೇರ್ ಇಂಜನಿಯರ್‌ಗಳು, ಎಂಎನ್‌ಸಿ ಕಂಪನಿ ಕೆಲಸಗಾರರು ಮತ್ತೆ ಆಫಿಸ್‌ನತ್ತ ಮುಖ ಮಾಡಲು ಆರಂಭಿಸಿದ್ದಾರೆ. ಹೀಗೆ ಎಲ್ಲ ರಂಗಗಳಲ್ಲೂ ಚಟುವಟಿಕೆಗಳು ಆರಂಭವಾದಂತೆ ಚಿತ್ರರಂಗದಲ್ಲೂ ಕೆಲಸಗಳು ಆರಂಭಗೊಂಡಿದೆ. ಹಲವು ಸಿನೆಮಾಗಳು ರಿಲೀಸ್ ಆಗಿವೆ. ಹಲವು ಸಿನೆಮಾಗಳು ಸೆಟ್ಟೇರುತ್ತಿವೆ, ಇನ್ನು ಕೆಲವು ಸಿನೆಮಾಗಳು ಚಿತ್ರೀಕರಣ ಆರಂಭಿಸಿವೆ. ಈ ವರ್ಷ ಬಿಡುಗಡೆಯಾಗಿ ಫ್ಯಾಮಿಲಿ ಹಿಟ್ ಆದ ಸಿನೆಮಾದಲ್ಲಿ ಮುಖ್ಯವಾದ ಸಿನೆಮಾ ಎಂದರೆ ಲವ್ ಮಾಕ್ಟೇಲ್ -೨.

Advertisement

Advertisement

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿದ ಲವ್ ಮಾಕ್ಟೇಲ್ ಸಿನೆಮಾ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿಯನ್ನು ಜನರು ಮೆಚ್ಚಿಕೊಂಡಿದ್ದರು. ಇವರು ನಿಜಜೀವನದಲ್ಲೂ ಈಗ ಸತಿಪತಿಗಳಾಗಿದ್ದಾರೆ. ಲವ್ ಮಾಕ್ಟೇಲ್ ಸಿನೆಮಾ ನವೀರಾದ ಲವ್ ಸ್ಟೋರಿ ಹೊಂದಿತ್ತು. ಮಧ್ಯೆ ಮಧ್ಯೆ ಒಂದಷ್ಟ ಕಚಗುಳಿ ಇಡುವ ಕಾಮೇಡಿ ದೃಶ್ಯಗಳು ನೋಡುಗರನ್ನು ಸ್ವಲ್ಪ ಹಗುರವಾಗುವಂತೆ ಮಾಡಿತ್ತು. ಹೊಸತನದಿಂದ ಕೂಡಿದ ಈ ಸಿನೆಮಾ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡಿತ್ತು. ಇದನ್ನು ಮಿಲನಾ ನಾಗರಾಜ್ ಅವರೇ ನಿರ್ಮಾಣ ಮಾಡಿದ್ದರು.

Advertisement

ಲವ್ ಮಾಕ್ಟೇಲ್ ಸಿನೆಮಾ ಯಾವ ರೇಂಜಿಗೆ ಹಿಟ್ ಆಗಿತ್ತು ಎಂದರೆ ಸಿನೆಮಾ ನಂತರ ಮಿಲನಾ ಅವರು ಎಲ್ಲಿಯೇ ಹೋದರೂ ಅವರನ್ನು ನಿಧಿಮಾ ಎಂದೇ ಮಾತನಾಡಿಸುತ್ತಿದ್ದರು. ಈಗಲೂ ಹಲವರು ಮಿಲನಾ ಅವರನ್ನು ನಿಧಿಮಾ ಎಂದೇ ಕರೆಯತ್ತಾರೆ. ಹಾಗಾಗಿ ನಿಧಿಮಾ ಎನ್ನುವ ಹೆಸರು ಮಿಲನಾ ಅವರ ಹೆಸರ ಜೊತೆ ಸೇರಿ ಹೋಗಿದೆ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಜನರ ಮನಸ್ಸಿನ ಆಳದಲ್ಲಿ ಬೇರೂರಿದ ಸಿನೆಮಾವಾಗಿತ್ತು ಲವ್ ಮಾಕ್ಟೇಟ್.
ಈ ಸಿನೆಮಾದ ಯಶಸ್ಸಿನಿಂದ ಇದೇ ಜೋಡಿ ಲವ್ ಮಾಕ್ಟೇಲ್-೨ ಸಿನೆಮಾ ನಿರ್ಮಾಣ ಮಾಡಿದರು. ಡಾರ್ಲಿಂಗ್ ಕೃಷ್ಣ ಅವರು ೨ನೇ ಪಾರ್ಟ್‌ಗೆ ಒಂದನೇ ಪಾರ್ಟ್‌ನ ಲಿಂಕ್ ಕೊಟ್ಟು ಸಾಕಷ್ಟು ನಗಿಸುವ, ಪಂಚಿಂಗ್ ಡೈಲಾಗ್‌ಗಳನ್ನು ಇಟ್ಟಿದ್ದರು. ಚಿತ್ರಮಂದಿರ, ಓಟಿಟಿಯಲ್ಲೂ ಸಾಕಷ್ಟು ಸದ್ದು ಮಾಡಿತ್ತು ಈ ಸಿನೆಮಾ. ಫ್ಯಾಮಿಲಿಯಲ್ಲಾ ಒಟ್ಟಿಗೆ ಕುಳಿತು ಸಿನೆಮಾ ನೋಡಿ ಮತ್ತೊಮ್ಮೆ ಕೃಷ್ಣ-ಮಿಲನಾ ಅವರ ಜೋಡಿಯನ್ನು ಕೊಂಡಾಡಿದ್ದರು. ಈಗ ಈ ಸಿನೆಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ಲವ್ ಮಾಕ್ಟೇಲ್‌ನಲ್ಲಿ ಆದಿ ಹಾಗೂ ನಿಧಿಮಾ ಮದುವೆ ಆಗಿತ್ತು. ಮದುವೆ ಆದ ನಂತರ ನಿಧಿಗೆ ಕ್ಯಾನ್ಸರ್ ಇರುವುದು ತಿಳಿಯುತ್ತದೆ. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮರಣ ಹೊಂದುತ್ತಾಳೆ. ಆ ಬಳಿಕ ಆದಿ ಒಂಟಿಯಾಗುತ್ತಾನೆ. ಆದಿಗೆ ಮತ್ತೊಂದು ಮದುವೆ ಮಾಡಿಸುವ ಪ್ರಯತ್ನವೇ ಲವ್ ಮಾಕ್ಟೇಲ್-೨ ಹೈಲೈಟ್. ಈ ಸಿನೆಮಾವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೋಡಿ ಇಷ್ಟಪಟ್ಟಿದ್ದರು. ನಂತರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಅಲ್ಲಿಯೂ ಟ್ರೇಂಡ್ ಕ್ರಿಯೇಟ್ ಮಾಡಿತ್ತು. ಈಗ ಈ ಸಿನೆಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಏಪ್ರಿಲ್ ೬ರಂದು ಸಂಜೆ ೬ ಗಂಟೆಗೆ ಪ್ರಸಾರವಾಗಲಿದೆ.

ಚಿತ್ರಮಂದಿರದಲ್ಲಿ ಹಾಗೂ ಓಟಿಟಿಯಲ್ಲಿ ಈ ಸಿನೆಮಾ ನೋಡಲು ಸಾಧ್ಯವಾಗದೇ ಇರುವವರು ಟಿವಿಯಲ್ಲಿ ಈ ಸಿನೆಮಾ ನೋಡಿ ಖುಷಿಪಡಬಹುದು. ಆದಿ-ನಿಧಿಮಾ ಅಭಿಮಾನಿಗಳಿಗೆ ಇದು ಖುಷಿಯ ವಿಚಾರವೇ ಸರಿ.

Advertisement
Share this on...