ಲವ್​ ಮಾಕ್​ಟೈಲ್ ಭಾಗ -2ಕ್ಕೆ ಸ್ಕ್ರಿಪ್ಟ್​ ಪೂಜೆ…ಸಿನಿಮಾ ರಿಲೀಸ್ ಸಮಯ​​​​ ಕೂಡಾ ಫಿಕ್ಸ್​​​​​​

in ಸಿನಿಮಾ 111 views

‘ಲವ್ ಮಾಕ್​ಟೇಲ್’​​​​, ಡಾರ್ಲಿಂಗ್ ಕೃಷ್ಣ ಅಭಿನಯಿಸಿ ಮೊದಲ ಬಾರಿ ನಿರ್ದೇಶಿಸಿದ ಸಿನಿಮಾ. ಆರಂಭದಲ್ಲಿ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯಲಿಲ್ಲ. ಆದರೆ ಓಟಿಟಿ ಪ್ಲಾಟ್​​​​ಫಾರ್ಮ್​ನಲ್ಲಿ ಪ್ರಸಾರವಾದ ನಂತರ ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ದೊರೆಯಿತು. ನಂತರ ಸಿನಿಪ್ರಿಯರು ಇಂತಹ ಒಳ್ಳೆ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು.ಈ ಸಿನಿಮಾ ಬಿಡುಗಡೆಯಾದ ನಂತರ ಕೃಷ್ಣ, ತಮ್ಮ ಹಾಗೂ ಮಿಲನಾ ನಾಗರಾಜ್ ಲವ್ ಸ್ಟೋರಿಯನ್ನು ಕೂಡಾ ಜನರ ಮುಂದೆ ತೆರೆದಿಟ್ಟರು. ತಮ್ಮ ಲವ್ ಸ್ಟೋರಿ ಜೊತೆಗೆ ‘ಲವ್ ಮಾಕ್​ಟೇಲ್’ ಸಿನಿಮಾ ಮಾಡಲು ನಾವು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬ ವಿಚಾರವನ್ನು ಎಳೆಎಳೆಯಾಗಿ ತೆರೆದಿಟ್ಟರು. ಸಿನಿಮಾ ಡೈಲಾಗ್​​​​ಗಳು ಕೂಡಾ ಬಹಳ ಫೇಮಸ್ ಆಯ್ತು. ಅಂತೂ ನಮ್ಮ ಶ್ರಮಕ್ಕೆ ಪ್ರತಿಫಲ ದೊರೆಯಿತು ಎಂದು ಚಿತ್ರತಂಡ ಖುಷಿಯಿಂದ ಇದೆ.

Advertisement

 

Advertisement

Advertisement

ಇನ್ನು ‘ಲವ್ ಮಾಕ್​​ಟೇಲ್’ ಗೆದ್ದ ಖುಷಿಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಭಾಗ 2 ನ್ನು ಮಾಡಲು ಕೃಷ್ಣ ನಿರ್ಧರಿಸಿದರು. ಅವರು ತಡಮಾಡದೆ ಸ್ಕ್ರಿಪ್ಟ್ ಬರೆಯಲು ಕೂಡಾ ಆರಂಭಿಸಿದರು. ಅಷ್ಟರಲ್ಲಿ ಲಾಕ್​​ಡೌನ್ ಆರಂಭವಾಗಿದ್ದರಿಂದ ಕೃಷ್ಣ ಅವರಿಗೆ ಇನ್ನೂ ಅನುಕೂಲವಾಯ್ತು. ಮನೆಯಿಂದ ಎಲ್ಲೂ ಹೊರಗೆ ಹೋಗದೆ ಲಾಕ್​ಡೌನ್​ ಸಮಯವನ್ನು ಸದುಪಯೋಗಪಡಿಸಿಕೊಂಡ ಕೃಷ್ಣ ಸ್ಕ್ರಿಪ್ಟ್ ಬರೆದು ಮುಗಿಸಿದರು.

Advertisement

ಇಂದು ಕೃಷ್ಣ ಹಾಗೂ ಮಿಲನಾ ನಾಗರಾಜ್ ಒಟ್ಟಿಗೆ ಸೇರಿ ಬೆಂಗಳೂರಿನ ಆಂಜನೇಯ ಸ್ವಾಮಿ ದೇವಸ್ಥಾನವೊಂದರಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆಯನ್ನು ನೆರವೇರಿಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಲಾಕ್​ಡೌನ್ ಸಂಪೂರ್ಣ ಸಡಿಲಿಕೆ ಆದ ನಂತರ ‘ಲವ್ ಮಾಕ್​​ಟೇಲ್’​ ಭಾಗ 2 ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಕೆಲವು ತಂತ್ರಜ್ಞರು ಈ ಸಿನಿಮಾದಲ್ಲಿ ಕೂಡಾ ಕೆಲಸ ಮಾಡಲಿದ್ದಾರಂತೆ. ಮೊದಲ ಭಾಗದಂತೆ ಈ ಸಿನಿಮಾವನ್ನು ಕೂಡಾ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಲು ಕೃಷ್ಣ ಈಗಾಗಲೇ ನಿರ್ಧರಿಸಿದ್ದಾರೆ.ಒಟ್ಟಿನಲ್ಲಿ ಈ ಲವ್​​​​ಬರ್ಡ್ಸ್​​​​​​ ಸೇರಿ ಮಾಡುತ್ತಿರುವ ಲವ್​​​​​ ಮಾಕ್​​ಟೇಲ್ ಸೀಕ್ವೆಲ್ ಯಾವ ರೀತಿ ಇರಲಿದೆ ಕಾದು ನೋಡಬೇಕು.

Advertisement
Share this on...