‘ಲವ್ ಮಾಕ್ ಟೇಲ್’ ತೆಲುಗು ರಿಮೇಕ್’ನಲ್ಲಿ ನಟಿಸಲಿದ್ದಾರೆ ಈ ಸ್ಟಾರ್ ನಟಿ…!

in ಮನರಂಜನೆ/ಸಿನಿಮಾ 171 views

ಮಿಲ್ಕಿ ಬ್ಯೂಟಿ ತಮನ್ನಾ ಕಳೆದ 14 ವರ್ಷಗಳಿಂದ ಚಿತ್ರೋದ್ಯಮದಲ್ಲಿದ್ದಾರೆ. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ಕೆಲಸ ಮಾಡಿರುವ ತಮನ್ನಾ, ಪ್ರತಿ ಬಾರಿಯೂ ಇನ್ನೇನು ತಮ್ಮ ವೃತ್ತಿಜೀವನ ಮುಗಿದು ಹೋಯಿತು ಎಂದು ಭಾವಿಸುವಷ್ಟರಲ್ಲಿ ಹಿಟ್ ಚಿತ್ರದೊಂದಿಗೆ ಹಿಂತಿರುಗುತ್ತಾರೆ.
ತಮನ್ನಾ ಕೈಯ್ಯಲ್ಲಿ ಪ್ರಸ್ತುತ ಸಂಪತ್ ನಂದಿ ನಿರ್ದೇಶನದ, ಗೋಪಿಚಂದ್ ಅವರ ಕ್ರೀಡಾ ಆಧಾರಿತ ಚಲನಚಿತ್ರ ‘ ಸೀತ್ಮಾರ್ ‘ ಚಿತ್ರವಿದೆ. ಹಾಟ್ಸ್ಟಾರ್ಗಾಗಿ ತಮಿಳು ವೆಬ್-ಸರಣಿಯಲ್ಲಿಯೂ ಕೆಲಸ ಮಾಡುತ್ತಿರುವ ತಮನ್ನಾ ‘ಆಹಾ’ ಚಿತ್ರಕ್ಕಾಗಿ ಟಾಕ್ ಶೋ ನಡೆಸಲಿದ್ದಾರೆ ಎಂಬ ಮಾತೂ ಇದೆ. ಚಿತ್ರರಂಗದ ಇತ್ತೀಚಿನ ಸುದ್ದಿ ಏನೆಂದರೆ, ತಮನ್ನಾ ಅವರು ಪ್ರತಿಭಾವಂತ ಕಲಾವಿದ ಸತ್ಯದೇವ್ ಅವರೊಂದಿಗೆ ಕನ್ನಡ ರಿಮೇಕ್’ನಲ್ಲಿ ನಟಿಸಲಿದ್ದಾರೆ.  ಹೌದು, ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹಿಟ್ ಆಗಿರುವ ‘ಲವ್ ಮಾಕ್ಟೇಲ್’ ಅನ್ನು ರೀಮೇಕ್ ಮಾಡಲು ಹೊರಟಿದ್ದಾರೆ. ಇದು ಸಂಪೂರ್ಣ ರೊಮ್ಯಾಂಟಿಕ್ ಡ್ರಾಮಾವಾಗಿದ್ದು, ಇದು ಸಾರ್ವಜನಿಕರನ್ನು ಮತ್ತು ವಿಮರ್ಶಕರನ್ನು ಆಕರ್ಷಿಸಿದೆ. ಈ ಚಿತ್ರ ಮಾಡುವ ಸುದ್ದಿ ಇನ್ನೂ ದೃಢಪಟ್ಟಿಲ್ಲ. ಆದರೆ ಅದು ನಿಜವೆಂದು ತಿಳಿದುಬಂದರೆ, ತಮನ್ನಾರಂತಹ ಸ್ಟಾರ್ ಸತ್ಯದೇವ್ ಅವರಂತಹ ಪ್ರತಿಭಾವಂತ ನಟನ ಮುಂದೆ ಮುಂಬರುವ ಚಿತ್ರದಲ್ಲಿ ನಟಿಸುವುದನ್ನು ನೋಡಬಹುದು.

Advertisement


ತಮನ್ನಾ ಈ ಹಿಂದೆ ಸಂದೀಪ್ ಕಿಶನ್ ಮತ್ತು ಕಲ್ಯಾಣ್ ರಾಮ್ ಅವರಂತಹ ನಾಯಕರೊಂದಿಗೂ ಚಿತ್ರಗಳನ್ನು ಮಾಡಿದ್ದರು. ಆದರೆ ಯಶಸ್ವಿಯಾಗಿಲ್ಲ. ಈ ಚಿತ್ರ ಏನಾಗುತ್ತದೆ ಎಂದು ಮುಂದೆ ಕಾದು ನೋಡೋಣ. ತಮನ್ನಾ ತಮ್ಮ ಅಭಿನಯ ಮತ್ತು ಮುದ್ದಾದ ನೋಟದಿಂದ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿರುವ ಬೆಡಗಿ. ‘ಬಾಹುಬಲಿ’ಯಂತಹ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ತಮನ್ನಾ, ಇದುವರೆಗೂ ದಕ್ಷಿಣ ಭಾರತದ ಹಲವಾರು ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ. ತಮನ್ನಾ ಹಿಂದಿ ಚಲನಚಿತ್ರ ಪ್ರಿಯರಿಗೂ ಚಿರಪರಿಚಿತ ಮುಖ. ಬಾಲಿವುಡ್’ನಲ್ಲಿ ಅವರು ‘ಎಂಟರ್ಟೈನ್ಮೆಂಟ್’ ಮತ್ತು ‘ಹಮ್ಶಕಲ್ಸ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನವಾಜುದ್ದೀನ್ ಸಿದ್ದಿಕಿ ಅಭಿನಯದ ‘ಬೋಲೆ ಚುಡಿಯಾನ್’ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದರ ನಡುವೆ ಕನ್ನಡ ಚಿತ್ರರಂಗದಲ್ಲಿಯೂ ತನ್ನ ಅದೃಷ್ಟವನ್ನು ಪರೀಕ್ಷಿಸಲು ತಮನ್ನಾ ಯೋಜಿಸುತ್ತಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ.

Advertisement
Advertisement

Advertisement
Share this on...