ಭಾವಿ ಪತಿಯ ಹುಟ್ಟು ಹಬ್ಬಕ್ಕೆ ನಿಧಿಮಾ ಎಂತಹ ಉಡುಗೊರೆ ಕೊಟ್ಟಿದ್ದಾರೆ ಗೊತ್ತಾ !?

in ಮನರಂಜನೆ/ಸಿನಿಮಾ 210 views

ಲವ್ ಮಾಕ್ಟೈಲ್ ಎಂಬ ಮುದ್ದಾದ ಪ್ರೇಮಕಥೆಯ ಮೂಲಕ ಜನರ ಮೆಚ್ಚಿಗೆಗೆ ಪಾತ್ರವಾದ ಜೋಡಿ ಎಂದರೆ ಅದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಜೋಡಿ. ಚಿತ್ರದಲ್ಲಿ ಇವರಿಬ್ಬರ ಪಾತ್ರ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಎಲ್ಲರು ಕೂಡ ಈ ಪಾತ್ರವನ್ನು ಬಹಳ ಇಷ್ಟಪಟ್ಟಿದ್ದರು. ಇನ್ನು ಚಿತ್ರದ ನಿರ್ಮಾಣ ಹಾಗು ನಿರ್ದೇಶನವನ್ನು ಈ ಜೋಡಿಗಳೆ ಮಾಡಿದ್ದು ವಿಶೇಷ. ತೆರೆಯ ಮೇಲೆ ಇವರಿಬ್ಬರ ಪ್ರೇಮ ಹೇಗಿತ್ತೋ ನಿಜ ಜೀವನದಲ್ಲೂ ಕೂಡ ಹಾಗೆಯೇ ಇದೆ ಎಂಬುವ ವಿಚಾರ ಅದೆಷ್ತೋ ಜನರಿಗೆ ತಿಳಿದಿರಲಿಲ್ಲ.ಇನ್ನು ಈ ಜೋಡಿಗಳು ಯಾವುದೇ ಮುಚ್ಚುಮರೆ ಇಲ್ಲದೇ ಸಿನಿಮಾ ಹಿಟ್ ಆದ ಬಳಿಕ ಹೇಳಿಕೊಂಡಿದ್ದಾರೆ. ನಾಲ್ಕು ವರ್ಷದಿಂದ ಪ್ರೀತಿಸುತ್ತಿರುವ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಮುಂದಿನ ವರ್ಷ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಸಹ ಇದೆ.ಲವ್ ಮಾಕ್ಟೈಲ್ ಸಿನಿಮಾ ಚಿತ್ರಮಂದಿರದಲ್ಲಿ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಾಣದೇ ಹೊಗಿದ್ದರು, ಅಮೇಜಾನ್ ಪ್ರೈಮ್ ನಲ್ಲಿ ಹೆಚ್ಚು ಪ್ರಶಂಸೆಯನ್ನು ಪಡೆದು ಕೊಂಡಿತ್ತು.‌

Advertisement

 

Advertisement

Advertisement

ಅಷ್ಟೇ ಅಲ್ಲದೆ ಸಿನಿಮಾ ಮತ್ತೇ ಬಿಡುಗಡೆ ಮಾಡುವಂತೆಯೂ ಸಿನಿ ಪ್ರೇಕ್ಷಕರು ಮನವಿ ಮಾಡಿದ್ದರು. ಇದೆಲ್ಲದಕ್ಕಿಂತ ಹೆಚ್ಚಾಗಿ ಕೆಲವೊಂದಿಷ್ಟು ಜನರು ಕೃಷ್ಣ ಅವರಿಗೆ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾ ನೋಡಿ ಹಣ ಕೂಡ ಕಳುಹಿಸಿದ್ದರು. ಇದೀಗ ಲವ್ ಮಾಕ್ಟೈಲ್ 2 ಸಿನಿಮಾ ಮಾಡುವ ತಯಾರಿಯಲ್ಲಿರುವ ನಟ ಹಾಗೂ ನಿರ್ದೇಶಕ ಕೃಷ್ಣ ಅವರು ಸದ್ಯ ಕತೆ ಬರೆಯುವಲ್ಲಿ ಬ್ಯುಸಿ ಆಗಿದ್ದಾರೆ. ತಮಗೆಲ್ಲರಿಗು ತಿಳಿದಿರುವ ಹಾಗೆ ಲವ್ ಮಾಕ್ಟೈಲ್ ಸಿನಿಮಾವನ್ನು ಕೃಷ್ಣ ಹಾಗೂ ಮಿಲನ ನಾಗರಾಜ್ ಇಬ್ಬರು ಕೂಡ ಸೇರಿ ನಿರ್ದೇಶಿಸಿದ್ದರು. ಈಗಲೂ ಸಹ ಇಬ್ಬರು ಚರ್ಚಿಸಿ ಲವ್ ಮಾಕ್ಟೈಲ್ 2 ಸಿನಿಮಾದ ಕತೆಯನ್ನು ಬರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

 

ಇದೆಲ್ಲದರ ನಡುವೆ ನಿನ್ನೆ ಕೃಷ್ಣ ಅವರ ಹುಟ್ಟುಹಬ್ಬವಿದ್ದ ಕಾರಣ ಭಾವಿ ಪತ್ನಿ ಮಿಲನ ಅವರು ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿ ಸ್ಪೆಷಲ್ ಉಡುಗೊರೆಯೊಂದನ್ನು ನೀಡಿದ್ದಾರೆ. ಲವ್ ಮಾಕ್ಟೈಲ್ ಸಿನಿಮಾದಲ್ಲಿ ಬರುವ ದೃಶ್ಯದಲ್ಲೂ ನಿಧಿಮಾ ಆದಿ ಹುಟ್ಟುಹಬ್ಬವನ್ನು‌ ಮಧ್ಯರಾತ್ರಿಯಲ್ಲಿ ಆಚರಿಸಿದ್ದು, ನಿಜ ಜೀವನದಲ್ಲಿಯೂ ಮಧ್ಯ ರಾತ್ರಿ 12 ಗಂಟೇ ವೇಳೆಗೆ ಹೂವು ದೀಪಗಳಿಂದ ಅಲಂಕರಿಸಿ ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಜೊತೆಗೆ ಲವ್ ಮಾಕ್ಟೈಲ್ 2 ಸಿನಿಮಾದಲ್ಲಿನ ಕೃಷ್ಣ ಅವರ ಪೋಸ್ಟರ್ ಒಂದನ್ನು ರೆಡಿ ಮಾಡಿಸಿ ಬಿಡುಗಡೆ ಮಾಡಿದ್ದು ಕೃಷ್ಣ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

Advertisement
Share this on...