ಲವ್ವರ್ ನ ಮೀಟ್ ಆಗಲು ಈತ ಮಾಡಿದ ಐಡಿಯಾ ಏನು ಗೊತ್ತಾ..? ಸಕ್ಕತ್ ವೈರಲ್..!

in ಮನರಂಜನೆ 68 views

ಪ್ರೀತಿ ಒಂದು ಸುಮಧುರ ಭಾವನೆ. ಮನುಷ್ಯನ ಜೀವನದ ಅತ್ಯುನ್ನತ ಫೀಲಿಂಗ್. ಇಬ್ಬರು ಹತ್ತಿರವಿರುವುದಕ್ಕಿಂತ ದೂರ ಇದ್ದಾಗ ಪ್ರೀತಿಯ ಪರಿಣಾಮ ಹೆಚ್ಚಾಗಿರುತ್ತದೆ. ಭಾವನೆಗಳು ಉಕ್ಕಿ ಹರಿಯುತ್ತದೆ. ಹಾಗೆ ಪ್ರೀತಿ ಎನ್ನುವುದು ಒಂದು ಮಾಯೆ, ಅದನ್ನು ಹಿಡಿತದಲ್ಲಿಟ್ಟುಕೊಳ್ಳಲಿಲ್ಲ ಅಂದರೆ ನಮ್ಮನ್ನು ಕೆಟ್ಟ ದಾರಿಗೆ ಏಳೆಯುತ್ತದೆ. ಇಲ್ಲೂ ಸಹ ಅದೇ ಆಗಿದೆ. ಕೋರೋನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಆದರೆ ಇದನ್ನು ದಾಟಿ ತನ್ನ ಪ್ರೀತಿಯ ಹುಡುಗಿಯನ್ನು ಭೇಟಿಯಾಗಲು ಈ ಹುಡುಗ ಮಾಡಿದ ಐಡಿಯಾ ಏನು ಗೊತ್ತಾ..? ಗುಜರಾತಿನ ಪರಡಿ ಟೌನ್ ಗೆ ಸೇರಿದ 19 ವರ್ಷದ ಹುಡುಗ ಒಬ್ಬ ಹುಡುಗಿಯನ್ನು ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಿದ್ದ. ಪ್ರತಿದಿನ ಹೇಗೋ ಮಾಡಿ ಆಕೆಯನ್ನು ಮೀಟ್ ಮಾಡುತ್ತಿದ್ದ. ಆದರೆ ಸಡನ್ ಆಗಿ ಲಾಕ್ ಡೌನ್ ಮಾಡಲಾಯಿತು. ಯಾರು ಹೊರಗೆ ಬರದಂತೆ ತಡೆಯಲಾಯಿತು. ಆಗ ತನ್ನ ಹುಡುಗಿಯನ್ನು ಮೀಟ್ ಮಾಡಲಾಗದೆ ಚಡಪಡಿಸಿದ ಈ ಹುಡುಗ ಕೊನೆಗೆ ಒಂದು ಐಡಿಯಾ ಮಾಡಿದ.

Advertisement

Advertisement

ಹೇಗಾದರೂ ಮಾಡಿ ತನ್ನ ಹುಡುಗಿಯನ್ನು ಮೀಟ್ ಆಗಲೇಬೇಕೆಂದು ನಿರ್ಧರಿಸಿದ ಈ ಹುಡುಗ, ಹುಡುಗಿಯಂತೆ ಪಂಜಾಬಿ ಡ್ರೆಸ್ ಹಾಕಿಕೊಂಡು ಮುಖವನ್ನು ದುಪ್ಪಟ್ಟದಿಂದ ಮುಚ್ಚಿಕೊಂಡು ಸ್ಕೂಟಿ ಹತ್ತಿ ತನ್ನ ಹುಡುಗಿಯನ್ನು ಭೇಟಿಯಾಗಲು ಹೊರಟೇ ಬಿಟ್ಟ‌. ತನ್ನ ಹುಡುಗಿಯ ಮನೆ ಮುಟ್ಟಬೇಕೆಂದರೆ ಪರಿಯಾ ಅನ್ನುವ ರೋಡ್ ನಲ್ಲಿ ಹೋಗಲೇಬೇಕಾಗಿತ್ತು. ಆದರೆ ಆ ರಸ್ತೆಯನ್ನು ಬ್ಲಾಕ್ ಮಾಡಿ ಪೊಲೀಸರು ನಿಂತಿದ್ದರು. ಪಂಜಾಬಿ ಡ್ರೆಸ್ ಹಾಕಿಕೊಂಡು ಮುಖವನ್ನು ದುಪ್ಪಟ್ಟದಿಂದ ಮುಚ್ಚಿಕೊಂಡು ಬಂದ ಈತನನ್ನು ಹುಡುಗಿ ಎಂದು ಭಾವಿಸಿದ ಪೊಲೀಸರು ಎಲ್ಲೋ ಮೆಡಿಕಲ್ ಶಾಪ್ ಗೆ ಹೋಗುತ್ತಿರಬೇಕು ಎಂದು ಭಾವಿಸಿ ಯಾವುದೇ ಪ್ರಶ್ನೆಯನ್ನು ಕೇಳದೆ ಬಿಟ್ಟರು. ಆಗ ತನ್ನ ಐಡಿಯಾ ಸಕ್ಸಸ್ ಆಗಿದೆ ಎಂದು ಭಾವಿಸಿದ ಈತ ಕೆಲವು ಗಂಟೆಗಳ ನಂತರ ಮತ್ತೆ ಅದೇ ರಸ್ತೆಯಲ್ಲಿ ಹುಡುಗಿಯಂತೆ ಡ್ರೆಸ್ ಮಾಡಿಕೊಂಡು ಬಂದಾಗ ನಿಲ್ಲಿಸಿದ ಪೊಲೀಸರು ಮತ್ತೆ ಎಲ್ಲಿಗೆ ಹೋಗುತ್ತಿದ್ದೀಯಮ್ಮ ಎಂದು ಕೇಳಿದರು.

Advertisement

Advertisement

ಆಗ ಮಾತನಾಡಿದರೆ ಹುಡುಗ ಎಂದು ಗೊತ್ತಾಗುತ್ತದೆ ಎಂದು ಭಾವಿಸಿದ ಈತ ಕೈ ಸನ್ನೆ ಮೂಲಕ ಹೇಳಿದ. ಇದರಿಂದ ಅನುಮಾನಗೊಂಡು ದುಪ್ಪಟ್ಟ ತೆಗೆದು ಮಾತನಾಡು ಎಂದರು ಪೋಲಿಸರು. ಆಗ ಹುಡುಗನ ಬಂಡವಾಳ ಬಯಲಿಗೆ ಬಂತು. ಪೊಲೀಸರನ್ನು, ಹುಡುಗಿಯರ ಪೋಷಕರನ್ನು ಯಾಮಾರಿಸಲು ತಾನು ಹುಡುಗಿ ವೇಷ ಧರಿಸಿದ್ದಾಗಿ ಹುಡುಗ ಒಪ್ಪಿಕೊಂಡಿದ್ದಾನೆ. ಈತನ ಮೇಲೆ ಕೇಸ್ ಹಾಕಿ ಒಳಗೆ ಕಳುಹಿಸಿದ್ದಾರೆ ಪೊಲೀಸರು. ಪರಸ್ಪರ ಭೇಟಿಯಾದರೆ ಮಾತ್ರ ಪ್ರೀತಿ ಎಂದು ಭಾವಿಸುವ ಕೆಲವು ಹುಡುಗರು ಇದೇ ರೀತಿ ಕೆಟ್ಟ ದಾರಿ ಹಿಡಿಯುತ್ತಿದ್ದಾರೆ. ಪ್ರೀತಿ ಅನ್ನುವುದು ಸಿಹಿ ಅನುಭವ ಆದರೆ ಅದೇ ಅತಿಯಾದರೆ ವಿಷ ಆಗುತ್ತದೆ.

– ಸುಷ್ಮಿತಾ

Advertisement
Share this on...