ಲಾಕ್​ ಡೌನ್​​​​ನಲ್ಲಿರುವ ಜನರನ್ನು ರಂಜಿಸಲು ಎಂ.ಡಿ. ಪಲ್ಲವಿ ಮಾಡಿದ ಪ್ಲ್ಯಾನ್ ಮೆಚ್ಚುವಂತದ್ದು

in ಮನರಂಜನೆ 72 views

ಲಾಕ್​ ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದು ಹೇಗಪ್ಪಾ ಸಮಯ ಕಳೆಯುವುದು ಎಂದುಕೊಳ್ಳುತ್ತಿರುವ ಸಂಗೀತ ಪ್ರಿಯರಿಗೆ ಗಾಯಕಿ ಎಂ.ಡಿ. ಪಲ್ಲವಿ ಹಾಡುಗಳನ್ನು ಹಾಡುವ ಮೂಲಕ ಮನರಂಜನೆ ನೀಡಿದ್ದಾರೆ. ಇದೇನಪ್ಪಾ ಇದೀಗ ಕಿರುತೆರೆ ಅಥವಾ ರಿಯಾಲಿಟಿ ಶೋ ಶೂಟಿಂಗ್ ನಿಂತಿರುವ ಈ ಸಮಯದಲ್ಲಿ ಪಲ್ಲವಿ ಹೇಗೆ ಹಾಡು ಹಾಡಿದರು ಎಂದುಕೊಳ್ಳಬೇಡಿ. ಪಲ್ಲವಿ ಹಾಡು ಹಾಡಿರುವುದು ಫೇಸ್​​​ಬುಕ್ ಲೈವ್ ಮೂಲಕ.

Advertisement

 

Advertisement

Advertisement

 

Advertisement

ನಿನ್ನೆ ಸಂಜೆ 6 ಗಂಟೆಗೆ ಪಲ್ಲವಿ ಸಂಗೀತ ಪ್ರಿಯರಿಗಾಗಿ ಫೇಸ್​​ಬುಕ್ ಲೈವ್ ಬಂದಿದ್ಧಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಲೈವ್​​​​ನಲ್ಲಿದ್ದ ಪಲ್ಲವಿ, ತಮ್ಮ ಗಾಯನದಿಂದ ಸಂಗೀತ ಪ್ರಿಯರಿಗೆ ಮನರಂಜನೆ ನೀಡಿದ್ಧಾರೆ. ಪಲ್ಲವಿ ಅವರ ಈ ಪ್ರಯತ್ನಕ್ಕೆ ಬೆಂಗಳೂರು ಗಣೇಶೋತ್ಸವ ಸಮಿತಿ ಕೂಡಾ ಸಾಥ್ ನೀಡಿದೆ. ಈ ಲೈವ್ ವೇಳೆ ಪಲ್ಲವಿ ಸುಗಮ ಸಂಗೀತ, ಸಿನಿಮಾ ಸಂಗೀತ, ಶಾಸ್ತ್ರೀಯ ಸಂಗೀತ ಸೇರಿ ಸುಮಾರು 25 ಹಾಡುಗಳನ್ನು ಹಾಡಿದ್ದಾರೆ. ಆದರೆ ಹಾಡುಗಳ ನಡುವೆ ಜನರು ತಮ್ಮ ಮೆಚ್ಚಿನ ಹಾಡುಗಳಿಗೆ ಬೇಡಿಕೆ ಇಟ್ಟಿದ್ದರಿಂದ ಈ ಎಲ್ಲಾ ಹಾಡುಗಳನ್ನು ಪಲ್ಲವಿ ಪೂರ್ಣವಾಗಿ ಹಾಡಲು ಸಾಧ್ಯವಾಗಲಿಲ್ಲ.

 

 

ಇನ್ನು ಪಲ್ಲವಿ ಅವರ ಹಾಡು ಕೇಳಲು ಸುಮಾರು 21 ಸಾವಿರ ಮಂದಿ ಫೇಸ್​​ ಬುಕ್ ಲೈವ್ ಬಂದಿದ್ದರು. ಸ್ವತ: ಪಲ್ಲವಿ ಕೂಡಾ ಅಭಿಮಾನಿಗಳಿಗಾಗಿ ಲೈವ್ ಬಂದಿದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಲಾಕ್ ಡೌನ್ ವೇಳೆ ಮನೆಯಲ್ಲಿ ಕುಳಿತಿದ್ದ ಜನರನ್ನು ರಂಜಿಸಲು ಪಲ್ಲವಿ ಅವರು ಮಾಡಿದ ಈ ವಿನೂತನ ಪ್ರಯತ್ನಕ್ಕೆ ಕೂಡಾ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂ.ಡಿ. ಪಲ್ಲವಿ ಅವರ ಪತಿ ಅರುಣ್ ಕೂಡಾ ಸಂಗೀತಗಾರರು. ಆದರೆ ಅವರು ಡ್ರಮ್ಮರ್. ಈ ದಂಪತಿ ಬಹಳ ವರ್ಷಗಳಿಂದ ಒಟ್ಟಿಗೆ ಕಲಾ ಸರಸ್ವತಿ ಸೇವೆ ಮಾಡುತ್ತಿದ್ದಾರೆ.

Advertisement
Share this on...