ಮಾಧವನ್ ಚಿತ್ರರಂಗಕ್ಕೆ ಬರುವ ಮೊದಲು ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ..?

in ಮನರಂಜನೆ 10 views

ಬಾಲಿವುಡ್ ಹಾಗೂ ತಮಿಳಿನ ಸೂಪರ್ ಸ್ಟಾರ್ ಆರ್.ಮಾಧವನ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್’ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಆರ್.ಮಾಧವನ್ ‘ಗೆ ಈಗ 50 ವರ್ಷ. ಜೂನ್ 1 ರಂದು ಜನಿಸಿದ ಆರ್. ಮಾಧವನ್ ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ಚಲನಚಿತ್ರಗಳಲ್ಲಿ ನಟಿಸಿದ ನಟ. ಕೆಲಸದಲ್ಲಿ ಅವರು ತೋರಿಸುವ ಶ್ರದ್ಧೆಯನ್ನು ನೋಡಿ ಇನ್ನೂ ಅವರನ್ನು ಅಭಿಮಾನಿಗಳು ತುಂಬಾ ಪ್ರೀತಿಸುತ್ತಾರೆ. ಮಾಧವನ್ ಜೂನ್ 1, 1970 ರಂದು ಜಾರ್ಖಂಡ್’ನ ಜಮ್ಶೆಡ್ಪುರದಲ್ಲಿ ಜನಿಸಿದರು. ಮಾಧವನ್ ಪೂರ್ಣ ಹೆಸರು ರಂಗನಾಥನ್ ಮಾಧವನ್. ‘ರಂಗನಾಥನ್’ ಎಂದರೆ ಅವರ ತಂದೆಯ ಹೆಸರು. ಚಿತ್ರರಂಗಕ್ಕೆ ಬಂದ ಮೇಲೆ ಮಾಧವನ್ ಅವರನ್ನು ಭಾರತದಲ್ಲಿ ‘ಮ್ಯಾಡಿ ಭಾಯ್’, ‘ಮ್ಯಾಡಿ ಪಾಜಿ’, ‘ಮ್ಯಾಡಿ ಭಾಯಿ ಜಾನ್ ‘, ‘ಮ್ಯಾಡಿ ಸರ್’, ‘ಮ್ಯಾಡಿ ಚೆಟ್ಟಾ’, ‘ಮ್ಯಾಡಿ ಅಣ್ಣ’ ಎಂದು ಪ್ರೀತಿಯಿಂದ ಕರೆಯುತ್ತಾರೆ ಜನರು. ಅಂದಹಾಗೆ ಮಾಧವನ್ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಕೊಲ್ಹಾಪುರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು.

Advertisement

 

Advertisement

Advertisement

ಆ ನಂತರ ಮಾಧವನ್ ಮುಂಬೈನ ‘ಕೆಸಿ ಕಾಲೇಜಿನಿಂದ’ ಸಾರ್ವಜನಿಕ ಭಾಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಹುತೇಕರಿಗೆ ಗೊತ್ತಿರದ ವಿಚಾರವೆಂದರೆ ಮಾಧವನ್ 1996 ರಲ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಶ್ರೀಗಂಧದ ಪುಡಿಯ ಜಾಹೀರಾತಿನಲ್ಲಿ ಕೆಲಸ ಮಾಡಿದ್ದರು. ಇದಾದ ನಂತರ ಅವರು ‘ಗುರು’ ಚಿತ್ರ ಮಾಡಿದರು.
ಇದೇ ಸಮಯದಕ್ಕೆ ಅಂದರೆ ಸಿನಿಮಾಗಳಲ್ಲಿ ನಟಿಸುವ ಮೊದಲು ಮಾಧವನ್ ಟಿವಿ ಧಾರಾವಾಹಿಗಳಾದ ‘ಬನೆಗಿ ಅಪ್ನಿ ಬಾತ್’, ‘ಟೋಲ್ ಮೋಲ್ ಕೆ ಬೋಲ್’ ಮತ್ತು ‘ಘರ್ ಜಮೈ’ ನಲ್ಲಿ ಕೆಲಸ ಮಾಡಿದರು. ಮಾಧವನ್ ನಟಿಸಿದ ಜನಪ್ರಿಯ ಹಿಂದಿ ಚಿತ್ರಗಳೆಂದರೆ ʼರೆಹನಾ ಹೈ ತೇರೆ ದಿಲ್ ಮೇʼ, ‘ರಂಗ್ ದೇ ಬಸಂತಿ’, ‘3 ಈಡಿಯಟ್ಸ್’, ‘ತನು ವೆಡ್ಸ್ ಮನು’ ಮತ್ತು ಇತ್ತೀಚೆಗೆ ‘ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರಗಳಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ.

Advertisement

ಕನ್ನಡದಲ್ಲಿ ‘ಶಾಂತಿ ಶಾಂತಿ ಶಾಂತಿ’ ಚಿತ್ರದಲ್ಲಿಯೂ ನಟಿಸಿದ್ದಾರೆ ಮಾಧವನ್. ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ಮಾಧವನ್ ನಟನೆಯ ವಿಕ್ರಂ ವೇದಂ ಬಾಕ್ಸ್ ಆಫೀಸ್’ನಲ್ಲಿ ಸೂಪರ್ ಹಿಟ್ ಆಗಿತ್ತು. ಮಾಧವನ್ ಪ್ರಸ್ತುತ ಚಿತ್ರಗಳಿಂದ ದೂರವಿದ್ದರೂ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

Advertisement
Share this on...