ಈ ಫೋಟೋದಲ್ಲಿರುವ ಜನಪ್ರಿಯ ನಟ ಯಾರೆಂದು ಊಹಿಸಬಲ್ಲೀರಾ?

in ಮನರಂಜನೆ/ಸಿನಿಮಾ 32 views

ಇವರು ದಕ್ಷಿಣ ಭಾರತದ ಸೂಪರ್ ಸ್ಟಾರ್ . ಒಂದು ಕಾಲದಲ್ಲಿ ಬಾಲಿವುಡ್’ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಇವರಿಗೆ ಈಗ 50 ವರ್ಷ. ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಈ ನಟ. ಕೆಲಸದಲ್ಲಿ ಅವರು ತೋರಿಸುವ ಶ್ರದ್ಧೆಯನ್ನು ನೋಡಿ ಇನ್ನೂ ಅವರನ್ನು ಅಭಿಮಾನಿಗಳು ತುಂಬಾ ಪ್ರೀತಿಸುತ್ತಾರೆ. ಇವರು ಜೂನ್ 1, 1970 ರಂದು ಜಾರ್ಖಂಡ್’ನ ಜಮ್ಶೆಡ್ಪುರದಲ್ಲಿ ಜನಿಸಿದರು. ಚಿತ್ರರಂಗಕ್ಕೆ ಬಂದ ಮೇಲೆ ಇವರನ್ನು ‘ಮ್ಯಾಡಿ ಭಾಯ್’, ‘ಮ್ಯಾಡಿ ಪಾಜಿ’, ‘ಮ್ಯಾಡಿ ಭಾಯಿ ಜಾನ್ ‘, ‘ಮ್ಯಾಡಿ ಸರ್’, ‘ಮ್ಯಾಡಿ ಚೆಟ್ಟಾ’, ‘ಮ್ಯಾಡಿ ಅಣ್ಣ’ ಎಂದು ಪ್ರೀತಿಯಿಂದ ಕರೆಯುತ್ತಾರೆ ಜನರು. ಅಂದಹಾಗೆ ಇವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಕೊಲ್ಹಾಪುರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ಆ ನಂತರ ಮುಂಬೈನ ‘ಕೆಸಿ ಕಾಲೇಜಿನಿಂದ’ ಸಾರ್ವಜನಿಕ ಭಾಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

Advertisement

 

Advertisement

Advertisement

ಬಹುತೇಕರಿಗೆ ಗೊತ್ತಿರದ ವಿಚಾರವೆಂದರೆ ಇವರು 1996 ರಲ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಶ್ರೀಗಂಧದ ಪುಡಿಯ ಜಾಹೀರಾತಿನಲ್ಲಿ ಕೆಲಸ ಮಾಡಿದ್ದರು. ಇದಾದ ನಂತರ ಅವರು ‘ಗುರು’ ಚಿತ್ರ ಮಾಡಿದರು. ಇದೇ ಸಮಯದಕ್ಕೆ ಅಂದರೆ ಸಿನಿಮಾಗಳಲ್ಲಿ ನಟಿಸುವ ಮೊದಲು ಟಿವಿ ಧಾರಾವಾಹಿಗಳಾದ ‘ಬನೆಗಿ ಅಪ್ನಿ ಬಾತ್’, ‘ಟೋಲ್ ಮೋಲ್ ಕೆ ಬೋಲ್’ ಮತ್ತು ‘ಘರ್ ಜಮೈ’ ನಲ್ಲಿ ಕೆಲಸ ಮಾಡಿದರು. ಈ ನಟ ನಟಿಸಿದ ಜನಪ್ರಿಯ ಹಿಂದಿ ಚಿತ್ರಗಳೆಂದರೆ ʼರೆಹನಾ ಹೈ ತೇರೆ ದಿಲ್ ಮೇʼ, ‘ರಂಗ್ ದೇ ಬಸಂತಿ’, ‘3 ಈಡಿಯಟ್ಸ್’, ‘ತನು ವೆಡ್ಸ್ ಮನು’ ಮತ್ತು ಇತ್ತೀಚೆಗೆ ‘ತನು ವೆಡ್ಸ್ ಮನು ರಿಟರ್ನ್ಸ್’ ಚಿತ್ರಗಳಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ.

Advertisement

ಕನ್ನಡದಲ್ಲಿ ‘ಶಾಂತಿ ಶಾಂತಿ ಶಾಂತಿ’ ಚಿತ್ರದಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ಇವರ ನಟನೆಯ ವಿಕ್ರಂ ವೇದಂ ಬಾಕ್ಸ್ ಆಫೀಸ್’ನಲ್ಲಿ ಸೂಪರ್ ಹಿಟ್ ಆಗಿತ್ತು. ಪ್ರಸ್ತುತ ಇವರು ಚಿತ್ರಗಳಿಂದ ದೂರವಿದ್ದರೂ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಈಗ ಊಹಿಸಬಲ್ಲೀರಾ ಇವರು ಯಾರೆಂದು!

Advertisement
Share this on...