ದೊಡ್ಡ ಸ್ಟಾರ್​ ಆದ್ರೂ ಅನಾಥಾಶ್ರಮದಲ್ಲಿ ಮದುವೆಯಾದ ಮಾಧವಿ..ಪತಿ-ಪತ್ನಿ ವಿಧಿಸಿಕೊಂಡ ಷರತ್ತುಗಳೇನು ಗೊತ್ತಾ?

in ಸಿನಿಮಾ 143 views

ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಮಾಧವಿ ಕೂಡಾ ಒಬ್ಬರು. ಮೂಲತ: ತೆಲುಗು ಕುಟುಂಬಕ್ಕೆ ಸೇರಿದ ಮಾಧವಿ ಕನ್ನಡದವರೇ ಆಗಿ ಹೋಗಿದ್ದರು. ಏಕೆಂದರೆ ಅವರ ಅಭಿನಯ ನೋಡಿದ ಯಾರೂ ಅವರನ್ನು ಬೇರೆ ಭಾಷೆಯವರು ಎಂದು ಹೇಳಲು ಸಾಧ್ಯವೇ ಇಲ್ಲ. ಡಾ. ರಾಜ್​​ಕುಮಾರ್ ಅವರೊಂದಿಗೆ ನಟಿಸಿದ ‘ಜೀವನಚೈತ್ರ’, ‘ಅನುರಾಗ ಅರಳಿತು’, ಒಡಹುಟ್ಟಿದವರು, ಡಾ. ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದ ‘ಮಲಯ ಮಾರುತ’ ಚಿತ್ರವಾಗಲೀ ಅವರು ನಟಿಸಿದ್ದ ಎಲ್ಲಾ ಸಿನಿಮಾಗಳಲ್ಲೂ ಅವರ ಅಭಿನಯ ಮನೋಜ್ಞವಾಗಿತ್ತು.ಇನ್ನು ಮಾಧವಿ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ತಮ್ಮ ಆಧ್ಯಾತ್ಮಿಕ ಗುರುಗಳಾದ ಸ್ವಾಮಿ ರಾಮ ಹಾಗೂ ಅಪ್ಪ-ಅಮ್ಮ ನೋಡಿದ ರಾಲ್ಫ್​​​ ಜಯದೀಪ್ ಶರ್ಮಾ ಎಂಬುವವರನ್ನು ಕೈ ಹಿಡಿದರು. ಜಯದೀಪ್ ಯುಎಸ್​ ಫಾರ್ಮಾಸ್ಯುಟಿಕಲ್ ಕಂಪನಿಯೊಂದರ ಮಾಲೀಕರಾಗಿದ್ದರು. ಅವರ ತಂದೆ ಭಾರತೀಯರಾದರೆ ತಾಯಿ ಜರ್ಮಿನಿಯವರು. ಎಷ್ಟೇ ದೊಡ್ಡ ನಟಿ ಆದರೂ ಮಾಧವಿ ಲವ್ ಮ್ಯಾರೇಜ್ ಎಂದು ತಲೆ ಕೆಡಿಸಿಕೊಳ್ಳದೆ ಹಿರಿಯರು ನೋಡಿದ ಹುಡುಗನನ್ನು ಮದುವೆಯಾದರು. ಅದಕ್ಕೂ ಮುನ್ನ ಜಯದೀಪ್ ಹಾಗೂ ಮಾಧವಿಗೆ ಪರಿಚಯವೇ ಇರಲಿಲ್ಲ.

Advertisement

 

Advertisement

Advertisement

ಇನ್ನು ಮದುವೆಗೂ ಒಂದು ವಾರ ಇರುವಾಗಲೇ ಮಾಧವಿ ಹಾಗೂ ಜಯದೀಪ್ ಒಮ್ಮೆ ಭೇಟಿ ಮಾಡಿದ್ದರಂತೆ. ಆಗ ಅವರು ಮಾತನಾಡಿದ್ದು ಮೂರೇ ವಿಚಾರವಂತೆ. ಜಯದೀಪ್ ಮಾಧವಿಗೆ ಎರಡು ಕಂಡಿಷನ್ ಹಾಕಿದರೆ, ಮಾಧವಿ ಜಯದೀಪ್ ಅವರಿಗೆ ಒಂದು ಕಂಡಿಷನ್ ಹಾಕಿದ್ದರಂತೆ. ಇರುವಷ್ಟು ದಿನ ನನ್ನ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೂ ಸಂಪಾದನೆಯ ಹಣದ ಸ್ವಲ್ಪ ಭಾಗವನ್ನ ಚಾರಿಟಿಗೆ ತೆಗೆದಿರಿಸಬೇಕು ಎಂದು ಜಯದೀಪ್ ಮಾಧವಿಗೆ ಕಂಡಿಷನ್ ಮಾಡಿದ್ದರೆ, ನನ್ನ ಸಿನಿಮಾಗಳನ್ನು ನೀವು ನೋಡಬಾರದು ಹಾಗೂ ಸ್ನೇಹಿತರಿಗೂ ತೋರಿಸಬಾರದು ಎಂದು ಮಾಧವಿ ಹೇಳಿದ್ದರಂತೆ. 14 ಫೆಬ್ರವರಿ 1996 ರಂದು ಮಾಧವಿ ಹಾಗೂ ಜಯದೀಪ್ , ಸ್ವಾಮಿ ರಾಮ ಅವರ ಆಶ್ರಮದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

 

ಮದುವೆಗೆ ಮುನ್ನ ಮಾಡಿಕೊಂಡಿದ್ದ ಒಪ್ಪಂದವನ್ನು ಇಂದಿಗೂ ಇಬ್ಬರೂ ಉಳಿಸಿಕೊಂಡು ಬಂದಿದ್ದಾರೆ. ಆದರೆ ಮದುವೆಯಾಗಿ ಹಲವು ವರ್ಷಗಳ ಬಳಿಕ ತಾವು ಅಭಿನಯಿಸಿದ್ದ 2 ಸಿನಿಮಾಗಳನ್ನು ಮಾಧವಿ ತಮ್ಮ ಪತಿಗೆ ತೋರಿಸಿದ್ದಾರೆ. ಸಿನಿಮಾಗಳನ್ನು ನೋಡಿದ ಪತಿ, ನೀನೂ ನಿಜಕ್ಕೂ ಅದ್ಭುತ ಕಲಾವಿದೆ, ಆ್ಯಕ್ಟಿಂಗ್ ಬಿಡಬೇಡ ಎಂದು ಹೇಳಿದ್ದರಂತೆ. ಅದು ನಿಜಕ್ಕೂ ನನಗೆ ಬಹಳ ಖುಷಿಯ ವಿಚಾರ ಎನ್ನುತ್ತಾರೆ ಮಾಧವಿ.

ಮದುವೆ ನಂತರ ಪತಿಯ ಬ್ಯುಸ್ನೆಸ್ ನೋಡಿಕೊಳ್ಳುತ್ತಾ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಮಾಧವಿಗೆ ಈಗ ಮೂವರು ಹೆಣ್ಣು ಮಕ್ಕಳು. ಎವ್ಲಿನ್ ಶರ್ಮಾ, ಪ್ರಿಸಿಲ್ಲಾ ಶರ್ಮಾ, ಟಿಫಾನಿ ಶರ್ಮಾ. ಪ್ರೀತಿಸುವ ಪತಿಯೊಂದಿಗೆ, ಮುದ್ಧಾದ ಮಕ್ಕಳೊಂದಿಗೆ ಮಾಧವಿ ಈಗ ನೆಮ್ಮದಿಯ ಜೀವನ ನಡೆಸುತ್ತಿದ್ಧಾರೆ. ಮಕ್ಕಳಿಗೆ ಭಾರತೀಯ ಸಂಸ್ಕಾರವನ್ನು ಕೂಡಾ ಮಾಧವಿ ಕಲಿಸಿಕೊಟ್ಟಿದ್ಧಾರಂತೆ. ಇನ್ನು ಮಾಧವಿಗೆ ಸಿನಿಮಾದಲ್ಲಿ ನಟಿಸಲು ಇಂದಿಗೂ ಆಫರ್ ಬರುತ್ತಿದೆಯಂತೆ. ಆದರೆ ನಾನು ಶೂಟಿಂಗ್​​ನಲ್ಲಿ ಬ್ಯುಸಿ ಆದರೆ ಮಕ್ಕಳು, ಪತಿಯನ್ನು ನೋಡಿಕೊಳ್ಳುವವರು ಇರುವುದಿಲ್ಲ. ಒಂದು ವೇಳೆ ನನ್ನ ಮಕ್ಕಳು ನಟಿಸಿದರೆ ನಾನು ಅದಕ್ಕೆ ಒಪ್ಪಿಗೆ ನೀಡುತ್ತೇನೆ ಎನ್ನುತ್ತಾರೆ ಮಾಧವಿ.

Advertisement
Share this on...