ನಟಿ ಮಾಧವಿ ಇದ್ದಕ್ಕಿದ್ದಂತೆ ಸಿನೆಮಾದಿಂದ ದೂರ ಆಗಿದ್ದೇಕೆ ? ಈಗ ಎಲ್ಲಿದ್ದಾರೆ ಗೊತ್ತಾ ?

in ಮನರಂಜನೆ/ಸಿನಿಮಾ 339 views

ಕನ್ನಡ,  ತೆಲುಗು,  ತಮಿಳು,  ಮರಾಠಿ,  ಹಿಂದಿ,  ಬೆಂಗಾಲಿ, ಮಲೆಯಾಳಂ  ಸೇರಿದಂತೆ  ಹಲವಾರು  ಭಾರತೀಯ ಸಿನಿಮಾಗಳಲ್ಲಿ,  ಸೂಪರ್ ಸ್ಟಾರ್ ಗಳ  ಜತೆ ನಾಯಕಿಯಾಗಿ ನಟಿಸಿದ್ದ ಮಾಧವಿ ದವರು ಕನ್ನಡದಲ್ಲಿ ಡಾ.  ರಾಜ್ ಮಾರ್,   ವಿಷ್ಣುವರ್ಧನ್,  ಅಂಬರೀಶ್,  ಶಂಕರ್ ನಾಗ್,  ಶ್ರೀನಾಥ್, ಮುಂತಾದ ಸ್ಟಾರ್ ನಟರುಗಳ ಜತೆ ನಟಿಸಿದರು. ಅಲ್ಲಿಯವರೆಗೆ ಸುಮಾರು ಇನ್ನೂರಕ್ಕೂ   ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.   ಆದರೆ  ಇಂತಹ ಅದ್ಭುತವಾಗಿ ಅಭಿನಯಿಸುತ್ತಿದ್ದ ನಟಿ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಹೋಗಲು ಕಾರಣ ಏನು ? ಮಾಧವಿ ಅವರು ಈಗ ಏನು ಮಾಡುತ್ತಿದ್ದಾರೆ ?  ಎಲ್ಲಿದ್ದಾರೆ ?  ಎಂಬುದನ್ನು ನಾವು ಇಲ್ಲಿ ತಿಳಿಸುತ್ತೇವೆ. ಮಾಧವಿ ರವರ ಮೊದಲ ಹೆಸರು ವಿಜಯಲಕ್ಷ್ಮಿ. ಇವರು ಹುಟ್ಟಿದ್ದು  ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ. ಬಾಲ್ಯದಲ್ಲಿ ಭರತನಾಟ್ಯ ಮತ್ತು ಜಾನಪದ ನೃತ್ಯ ಕಲಿತು ಸಾವಿರಕ್ಕೂ ಹೆಚ್ಚು ಪ್ರದರ್ಶನವನ್ನು ನೀಡಿದ್ದಾರೆ . ಹದಿಹರೆಯದಲ್ಲಿ ಇವರಿಗೆ ದಾಸರಿ ನಾರಾಯಣ ರಾವ್ ರವರು ತೆಲುಗು ಚಿತ್ರವೊಂದರಲ್ಲಿ ಪೋಷಕ ಪಾತ್ರವೊಂದನ್ನು ಕೊಟ್ಟರು.

Advertisement

Advertisement

ಅದು ತುಂಬಾ ಯಶಸ್ವಿಯಾಯಿತು . ನಂತರ ಕೆ. ಬಾಲಚಂದರ್ ಅವರು  1979 ರಲ್ಲಿ ಮರೋ ಚರಿತ್ರ ಎಂಬ ಚಿತ್ರದಲ್ಲಿ ಕಮಲ್ ಹಾಸನ್ ಅವರ ಜೊತೆ ಒಂದು ಪಾತ್ರವನ್ನು ಕೊಟ್ಟರು. ಅದ್ಭುತ ಯಶಸ್ಸು ಕಂಡ ಈ ಚಿತ್ರ ಹಿಂದಿಯಲ್ಲಿ “ಏಕ್ ದೂಜೆ ಕೇಲಿಯೆ ”  ಎಂಬ  ಹೆಸರಿನಲ್ಲಿ ತಯಾರಾಗಿ ಅಲ್ಲೂ ಕೂಡ ತುಂಬಾ ಯಶಸ್ಸನ್ನು ಗಳಿಸಿತು. ಮಾಧವಿ  ಅವರು ಅಮಿತಾಭ್ ಬಚ್ಚನ್ ಜೊತೆ  “ಅಗ್ನಿಪಥ್”  ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ಜತೆ ರಾಜಾ ಪಾರ್ವೈ ಮತ್ತು ಟಿಕ್ ಟಿಕ್ ಟಿಕ್ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ನಟ ಚಿರಂಜೀವಿ ಅವರ ಜತೆ ಕೂಡ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ಕೂಡ ಅನೇಕ ಸ್ಟಾರ್ ನಟರುಗಳ ಜತೆ ಗರುಡ ರೇಖೆ , ಅನುಪಮಾ,  ಹಾಲು ಜೇನು,  ಖೈದಿ , ಅನುರಾಗ ಅರಳಿತು,  ಭಾಗ್ಯದ ಲಕ್ಷ್ಮಿ ಬಾರಮ್ಮ,  ಮಲೆಯ ಮಾರುತ,  ಶ್ರುತಿ ಸೇರಿದಾಗ,  ಆಕಸ್ಮಿಕ , ಒಡಹುಟ್ಟಿದವರು,  ಇನ್ನೂ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಮಲಯಾಳಂನಲ್ಲಿ ಕೂಡ ನಾಯಕಿಯಾಗಿ ಮಮ್ಮುಟಿ ಮತ್ತು ಮೋಹನ್ ಲಾಲ್ ಅವರ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement

 

Advertisement

ಮಾಧವಿ ರವರು ಉದ್ಯಮಿಯಾಗಿದ್ದ   ರಾಲ್ಫ್ ಶರ್ಮಾ  ರನ್ನು  1996  ರಲ್ಲಿ ಮದುವೆಯಾದರು. ಮದುವೆಯಾದ ಕೆಲವು ದಿನಗಳಲ್ಲೆ ಮಾಧವಿ  ಅವರು ಅಮೆರಿಕಕ್ಕೆ ಹೋಗಿ ನೆಲೆಸಿದರು.  ನಂತರ ಸುಮಾರು ವರ್ಷಗಳ ಕಾಲ ಸಾಂಸಾರಿಕ ಜೀವನದ ಕಡೆ ಗಮನ ಹರಿಸುತ್ತಾರೆ . ಟಿಫಾನಿ ಶರ್ಮಾ , ಎವೆಲಿನ್ ಶರ್ಮಾ , ಪ್ರಶೀಲಾ ಶರ್ಮಾ , ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ . ಸುಮಾರು ಇಪ್ಪತ್ತು ವರ್ಷಗಳ ಕಾಲ ಸತತವಾಗಿ ದಕ್ಷಿಣ ಭಾರತದ  ಚಿತ್ರರಂಗದಲ್ಲಿ  ನಂಬರ್ 1  ನಾಯಕಿಯಾಗಿ ಪಡ್ಡೆ  ಹುಡುಗರ ನಿದ್ದೆ ಕೆಡಿಸಿದ್ದ ಮಾಧವಿ ರವರು ಈಗ ಅಮೆರಿಕದಲ್ಲಿ ಗಂಡ ಮತ್ತು ಮೂವರು ಹೆಣ್ಣು ಮಕ್ಕಳ ಜತೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾಧವಿ ರವರ  ಅಭಿಮಾನಿಗಳು ಮತ್ತೆ ನಿಮಗೆ ಚಿತ್ರರಂಗದಲ್ಲಿ ಆಫರ್ ಬಂದರೆ ನಟಿಸುತ್ತೀರಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅದಕ್ಕೆ ಮಾಧವಿ ಅವರು ಈ ಪ್ರಶ್ನೆಗೆ ಉತ್ತರವಿಲ್ಲ ಎಂಬುದಾಗಿ  ಲೈನ್  ಬರೆದುಕೊಂಡಿದ್ದಾರೆ. ಮಾಧವಿ  ಅವರ ಸಿನಿಮಾಗಳನ್ನು ನೀವು ನೋಡಿದ್ದೀರಾ ?  ಮತ್ತು ಮಾಧವಿ  ಅವರ ಅಭಿನಯ ನಿಮಗೆ ಇಷ್ಟವಾಗಿದೆಯಾ ?  ಎಂಬುದನ್ನು ಕಮೆಂಟ್ ಮಾಡಿ ತಿಳಿಸಬಹುದು.

Advertisement
Share this on...