ಮಾಧುರಿ ಜೊತೆ ಇಂಟಿಮೇಟ್ ದೃಶ್ಯ ಮಾಡುವಾಗ ಮೈಮರೆತಿದ್ದರು ಈ ಹಿರಿಯ ನಟ.!

in ಮನರಂಜನೆ 45 views

ಬಾಲಿವುಡ್’ನ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಯಾರಿಗೆ ಗೊತ್ತಿಲ್ಲ ಹೇಳಿ. ಮಾಧುರಿ ಹೆಸರಿನ ಚಲನಚಿತ್ರಗಳು ಸಹ ಹಿಟ್ ಆಗಿದ್ದ ಕಾಲವಿತ್ತು. ಮಾಧುರಿ ಹೆಸರಿನಲ್ಲಿ ಸರೋವರ ಇರುವುದು ಸಹ ಬಹುತೇಕರಿಗೆ ಗೊತ್ತಿಲ್ಲ. ಅಂದಹಾಗೆ ಇಂದು ನಾವು ಮಾಧುರಿ ಅವರ ವೃತ್ತಿ ಜೀವನದದಲ್ಲಿ ನಡೆದ ಘಟನೆಯೊಂದನ್ನು ನಿಮಗೆ ಹೇಳಲಿದ್ದೇವೆ. ಹೌದು, ಈ ಘಟನೆ ಮಾಧುರಿ ಮತ್ತು ವಿನೋದ್ ಖನ್ನಾ ಅವರಿಗೆ ಸಂಬಂಧಿಸಿದ್ದು. ಬಾಲಿವುಡ್’ನಲ್ಲಿ ಮಾಧುರಿ ವಿನೋದ್ ಖನ್ನಾ ಅವರೊಂದಿಗೆ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಆದರೆ ಒಂದು ಚಿತ್ರದ ಸಮಯದಲ್ಲಿ ನಡೆದ ಈ ಘಟನೆಯಿಂದ ಇಬ್ಬರೂ ಮತ್ತೆ ಒಟ್ಟಿಗೆ ಕೆಲಸ ಮಾಡಲಿಲ್ಲ.

Advertisement

 

Advertisement

Advertisement

ಇಬ್ಬರೂ ‘ದಯಾವಾನ್’ ಚಿತ್ರದ ಚಿತ್ರೀಕರಣದಲ್ಲಿದ್ದರು. ಈ ಚಿತ್ರವು 1988 ರಲ್ಲಿ ಬಿಡುಗಡೆಯಾಯಿತು. ಆದರೆ ಈ ಚಿತ್ರದ ಸೆಟ್’ನಲ್ಲಿ ಚುಂಬನದ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ಅನಿಯಂತ್ರಿತರಾದ ವಿನೋದ್ ಖನ್ನಾ, ಮಾಧುರಿ ದೀಕ್ಷಿತ್ ಅವರ ತುಟಿಗಳನ್ನು ಕಚ್ಚಿದರು ಎಂದು ಹೇಳಲಾಗುತ್ತದೆ.
ಹೌದು, ಮಾಧುರಿ ವಿನೋದ್ ಖನ್ನಾ ಅವರಿಗೆ ತುಂಬಾ ವಯಸ್ಸಾದ ಕಾರಣ ಅವರೊಂದಿಗೆ ಈ ಇಂಟಿಮೇಟ್ ದೃಶ್ಯ ಮಾಡಲು ಒಪ್ಪಿಕೊಂಡರಂತೆ. ಆದರೆ ನಿರ್ದೇಶಕರು ಕಟ್ ಹೇಳಿದ ನಂತರವೂ ವಿನೋದ್ ನಿಲ್ಲಿಸದಿದ್ದಾಗ, ಮಾಧುರಿ ಮತ್ತೆ ವಿನೋದ್ ಖನ್ನಾ ಅವರೊಂದಿಗೆ ಕೆಲಸ ಮಾಡಲಿಲ್ಲವಂತೆ. ಆ ನಂತರ ಸ್ವತಃ .ಮಾಧುರಿ ಈ ದೃಶ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದರು.

Advertisement

 

ಮಾಧುರಿ ದೀಕ್ಷಿತ್ 1980, 1990 ಮತ್ತು 2000 ರ ದಶಕದ ಆರಂಭದಲ್ಲಿ ಜನಪ್ರಿಯ ಮತ್ತು ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬಾಲಿವುಡ್ ನಟಿ. ಮಾಧುರಿ ಬಾಲಿವುಡ್’ನ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇವರು ಉತ್ತಮ ನಟಿ ಮಾತ್ರವಲ್ಲ, ಉತ್ತಮ ನರ್ತಕಿ ಕೂಡ. ಇದೇ ಕಾರಣಕ್ಕಾಗಿ ಅವರು ಭಾರತ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ. ಇದುವರೆಗೂ 6 ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಮಾಧುರಿ, ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಸಹ ಪಡೆದಿದ್ದಾರೆ.

 

ಮಾಧುರಿ ದೀಕ್ಷಿತ್ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವುದಲ್ಲದೆ, ಅನೇಕ ಬ್ರಾಂಡ್ಗಳ ರಾಯಭಾರಿಯೂ ಆಗಿದ್ದಾರೆ. ಸೂಪರ್ ಡ್ಯಾನ್ಸರ್ ಮತ್ತು ಇತರ ಅನೇಕ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

Advertisement
Share this on...