ಬಾಲಿವುಡ್’ ನ ಮೋಹಕ ನಟಿ ಮಾಧುರಿ ದೀಕ್ಷಿತ್ ಸಂಪತ್ತು ಎಷ್ಟಿದೆ ಗೊತ್ತೆ ?

in ಮನರಂಜನೆ 35 views

ಮಾಧುರಿ ದೀಕ್ಷಿತ್ 1980, 1990 ಮತ್ತು 2000 ರ ದಶಕದ ಆರಂಭದಲ್ಲಿ ಜನಪ್ರಿಯ ಮತ್ತು ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬಾಲಿವುಡ್ ನಟಿ. ಮಾಧುರಿ ಬಾಲಿವುಡ್’ನ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಭಾರತೀಯ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಇವರು ಉತ್ತಮ ನಟಿ ಮಾತ್ರವಲ್ಲ, ಉತ್ತಮ ನರ್ತಕಿ ಕೂಡ. ಇದೇ ಕಾರಣಕ್ಕಾಗಿ ಅವರು ಭಾರತ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ. ಇದುವರೆಗೂ 6 ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಮಾಧುರಿ, ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಸಹ ಪಡೆದಿದ್ದಾರೆ.

Advertisement

 

Advertisement

 

Advertisement


ಮಾಧುರಿ ದೀಕ್ಷಿತ್ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವುದಲ್ಲದೆ, ಅನೇಕ ಬ್ರಾಂಡ್ಗಳ ರಾಯಭಾರಿಯೂ ಆಗಿದ್ದಾರೆ. ಸೂಪರ್ ಡ್ಯಾನ್ಸರ್ ಮತ್ತು ಇತರ ಅನೇಕ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಾಧುರಿ ದೀಕ್ಷಿತ್ 1984ರಲ್ಲಿ ಬಿಡುಗಡೆಯಾದ ಅಬೋಧ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆದರೆ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟ ಚಿತ್ರ 1988ರಲ್ಲಿ ತೆರೆಕಂಡ ತೇಜಾಬ್. ನಾಯಕಿಯ ಮೇಲೆಯೇ ಕೇಂದ್ರಿಕೃತವಾದ ಈ ಚಿತ್ರ ಮಾಧುರಿ ಅವರನ್ನು ತಾರಾಪಟ್ಟಕ್ಕೇರಿಸಿತು.
ಅಂದಹಾಗೆ ಬಹುತೇಕ ಅಭಿಮಾನಿಗಳಿಗೆ ಅವರು ಇಷ್ಟಪಡುವ ಸ್ಟಾರ್ ನಟ-ನಟಿಯರ ಆಸ್ತಿ ವಿವರ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಹಾಗಾಗಿ ಈ ಬಾರಿ ಮಾಧುರಿ ಅವರ ಒಟ್ಟು ಆಸ್ತಿಯ ವಿವರ ಕೊಡಲಾಗಿದೆ. ಮಾಧುರಿ ಬಳಿ ಒಟ್ಟಾರೆ 45 ಮಿಲಿಯನ್ ಆಸ್ತಿಯಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ಕರೆನ್ಸಿಯ ಪ್ರಕಾರ 340 ಕೋಟಿ ರೂ. ಮಾಧುರಿ ತಮ್ಮ ಒಂದು ಚಿತ್ರಕ್ಕೆ 3-4 ಕೋಟಿ ರೂ. ತೆಗೆದುಕೊಳ್ಳುತ್ತಾರೆ. ರಿಯಾಲಿಟಿ ಶೋ ಜಡ್ಜ್ ಆಗಲು ಸಹ ಭಾರಿ ಮೊತ್ತದ ಹಣ ತೆಗೆದುಕೊಳ್ಳುತ್ತಾರೆ.

Advertisement

 


ಇನ್ನು ಮಾಧುರಿ ಅವರ ಮನೆ ಮತ್ತು ಕಾರುಗಳು ಬಗ್ಗೆ ಮಾತನಾಡುವುದಾದರೆ ಮಾಧುರಿ ಮುಂಬೈನ ಲೋಖಂಡ್ವಾಲಾದಲ್ಲಿ ಕಾಂಪ್ಲೆಕ್ಸ್ ಹೊಂದಿದ್ದಾರೆ ಮತ್ತು ಹಲವಾರು ರಿಯಲ್ ಎಸ್ಟೇಟ್’ಗಳ ಮಾಲೀಕರಾಗಿದ್ದಾರೆ. ಮಾಧುರಿ ಅವರ ಬಳಿ ಆಡಿ ಕ್ಯೂ 7, ಆಡಿ ಎ 8, ಮಿನಿ ಕೂಪರ್, ಬಿಎಂಡಬ್ಲ್ಯು 5-ಸೀರೀಸ್ ಮುಂತಾದ ಹಲವಾರು ಐಷರಾಮಿ ಕಾರುಗಳಿವೆ. ಸದ್ಯಕ್ಕೆ ಮಾಧುರಿ ದೀಕ್ಷಿತ್ ತನ್ನ ಪತಿ ಡಾ. ಶ್ರೀರಾಮ್ ನೆನೆ ಜೊತೆಗೆ ಯುಎಸ್ನಲ್ಲಿದ್ದಾರೆ. ಕಥಕ್ ಡ್ಯಾನ್ಸರ್ ಸಹ ಆಗಿರುವ ಮಾಧುರಿ ದೀಕ್ಷಿತ್ ಈಗಲೂ ಡ್ಯಾನ್ಸ್ ಪ್ರಾಕ್ಟೀಸ್ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತನ್ನ ಪುತ್ರ ಅರಿನ್ ತಬಲಾ ಬಾರಿಸುತ್ತಿದ್ದರೆ ಮಾಧುರಿ ನೃತ್ಯ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು.

Advertisement
Share this on...