ಮಹಾಭಾರತ ಧಾರಾವಾಹಿಯ ಬಜೆಟ್ ಎಷ್ಟಿರಬಹುದು ? ಏಳು ವರುಷದ ಹಿಂದೆಯೇ ಇಷ್ಟು ದೊಡ್ಡ ಬಜೆಟ್ !

in ಕನ್ನಡ ಆರೋಗ್ಯ/ಮನರಂಜನೆ 219 views

ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ಕೋಟಿ-ಕೋಟಿ ಹಣವನ್ನು ನೀರಿನಂತೆ ಚೆಲ್ಲಿ ನಿರ್ಮಿಸುವುದು ತಮಗೆಲ್ಲರಿಗೂ ಗೊತ್ತೇ ಇದೆ. ಕನ್ನಡದಲ್ಲೂ ಕೂಡ ಈ ಟ್ರೆಂಡ್ ಸೆಟ್ ಆಗಿದ್ದು, ದೊಡ್ಡ ಮಟ್ಟದ ಬಜೆಟ್ ಗಳಲ್ಲಿ ಸಿನಿಮಾ ಮಾಡುತ್ತಿದ್ದಾರೆ. ನೂರಾರು ಕೋಟಿಯನ್ನು ಒಂದು ಸಿನಿಮಾಕ್ಕೆ ವೆಚ್ಚ ಮಾಡಿದ್ದಾರೆ ಎಂದರೆ ಅದು ಭಾರಿ ಬಜೆಟ್‌ನ ಚಿತ್ರವೆಂದೇ ಅರ್ಥ. ಆದರೆ ನಿರ್ಮಾಣವಾಗುವ ಎಲ್ಲಾ ಸಿನಿಮಾಕ್ಕೂ 100 ಕೋಟಿ ಬಜೆಟ್ ಇರುವುದಿಲ್ಲ. ಬಹಳ ಕಡಿಮೆ ಹಾಗೂ ವಿಭಿನ್ನ ಸಿನಿಮಾಗಳಿಗೆ ಮಾತ್ರ ನೂರು ಕೋಟಿ ಬಜೆಟ್ ಹೂಡಿ ನಿರ್ಮಾಣ ಮಾಡಲಾಗುತ್ತದೆ . ಕನ್ನಡ, ಮಲೆಯಾಳಂ, ತಮಿಳು, ತೆಲುಗು ಸಿನಿಮಾಗಲ್ಲಿ ದೊಡ್ಡ ಬಜೆಟ್ ನ ಸಿನಿಮಾಗಳು ತಯಾರಾಗುತ್ತಿದ್ದು, ಬಾಲಿವುಡ್‌ ನಲ್ಲಿ ಮಾತ್ರ ಬೆರಳೆಣಿಕೆಯ ಸಿನಿಮಾಗಳಷ್ಟೆ ನೂರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತವೆ. ಆದರೆ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿ ಒಂದಕ್ಕೆ ನೂರು ಕೋಟಿ ಬಂಡವಾಳದಲ್ಲಿ ತಯಾರು ಮಾಡಲಾಗಿತ್ತು ಎಂದರೆ ನೀವೂ ನಂಬುತ್ತೀರಾ? ನಂಬಲು ಕಷ್ಟಸಾಧ್ಯವಾದರೂ ನಂಬಲೇಬೇಕು.

Advertisement

 

Advertisement

Advertisement

 

Advertisement

ಅದೂ ನೆನ್ನೆ, ಮೊನ್ನೆಯಲ್ಲ, ಬರೋಬ್ಬರಿ ಏಳು ವರ್ಷದ ಹಿಂದೆಯೇ ಧಾರಾವಾಹಿ ಮೇಲೆ ನೂರು ಕೋಟಿ ಬಂಡವಾಳ ಹೂಡಲಾಗಿತ್ತು. ಹೌದು ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಅಪಾರ ಜನಮನ್ನಣೆ ಪಡೆದುಕೊಳ್ಳುತ್ತಿರುವ ಕನ್ನಡಕ್ಕೆ ಡಬ್ ಆಗಿ ಪ್ರೇಕ್ಷಕರ ಮುಂದೆ ಬಂದಿರುವ ಮಹಾಭಾರತ  ಧಾರಾವಾಹಿ ಬರೋಬ್ಬರಿ ನೂರು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾದ ಧಾರಾವಾಹಿ. ಅದೂ ಬರೋಬ್ಬರಿ ಏಳು ವರ್ಷಗಳ ಹಿಂದೆಯೇ.

ಈಗಾಗಲೇ ದಶಕಗಳ ಹಿಂದೆ ಮಹಾಭಾರತ, ರಾಮಾಯಣಗಳು ವರುಷಗಳ ಹಿಂದೆ ಹಲವು ಭಾಷೆಗಳಲ್ಲಿ ಧಾರಾವಾಹಿ ಮತ್ತು ಸಿನಿಮಾಗಳಾಗಿ ಬಂದಿದ್ದರೂ ಸಹ ಪ್ರೇಕ್ಷಕ ಭಾಂದವರಿಗೆ ಪೌರಾಣಿಕ ಕತೆಗಳ ಮೇಲೆ ಪ್ರೀತಿ, ಗೌರವ, ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ ಹಾಗಾಗಿ ಹಲವು ನಿರ್ದೇಶಕರು, ನಿರ್ಮಾಪಕರು ಪ್ರತಿಬಾರಿ ಹೊಸದೇ ರೀತಿಯಲ್ಲಿ ಮಹಾಭಾರತ ಕತೆಯನ್ನು ತೆರೆಗೆ ತರುತ್ತಾರೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಏಳು ವರುಷಗಳ ಹಿಂದೆ ಅಂದರೆ 2013 ರಲ್ಲಿ ತಿವಾರಿ ಕುಟುಂಬ ನಿರ್ಮಿಸಿದ ಈ ಮಹಾಭಾರತ ಧಾರಾವಾಹಿಯಲ್ಲಿ ಅದ್ಧೂರಿ ಸೆಟ್, ಸಿನಿಮಾ ಶೈಲಿಯ ನಿರೂಪಣೆ, ಅದ್ಭುತವಾದ ವಿಎಫ್‌ಎಕ್ಸ್‌ಗಳು, ಗ್ರಾಫಿಕ್ಸ್‌ಗಳು, ಹಿನ್ನೆಲೆ ಸಂಗೀತ, ಹಲವು ಹೊಸ ಅದ್ಧೂರಿ ಲೊಕೇಶನ್‌ಗಳು, ಅತ್ಯಂತ ದೊಡ್ಡ ಪಾತ್ರವರ್ಗ ಹೀಗೆ ಹಲವು ಅದ್ಧೂರಿತನದಲ್ಲಿ ಧಾರಾವಾಹಿ ರೂಪುಗೊಂಡಿತ್ತು.

ಹಿಂದಿಯಲ್ಲಿ ದೊಡ್ಡ ಸಂಚಲವನ್ನೇ ಮಾಡಿ ದೊಡ್ಡ ಯಶಸ್ಸು ಕಂಡಿದ್ದ ಈ ಧಾರಾವಾಹಿ ನೂರು ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅಂದಾಜಿನ ಪ್ರಕಾರ ಪ್ರಚಾರವನ್ನೂ ಸೇರಿಸಿಕೊಂಡು ಸುಮಾರು 120 ಕೋಟಿಗೂ ಹೆಚ್ಚು ಹಣವನ್ನು ಈ ಧಾರಾವಾಹಿ ಮೇಲೆ ಬಂಡವಾಳ ಹೂಡಲಾಗಿತ್ತು. ಆದರೆ ಅದಕ್ಕೆ ತಕ್ಕಂತೆ ಈಗಲೂ ಈ ಧಾರಾವಾಹಿ ಸ್ಟಾರ್ ಪ್ಲಸ್‌ನ ಹೆಚ್ಚು ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಧಾರಾವಾಹಿಯ ಚಿತ್ರೀಕರಣವನ್ನು ಭಾರತದ ಹಲವು ಭಾಗಗಳಲ್ಲಿ ಮಾಡಲಾಯಿತು. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಕೇರಳ ಗಳಲ್ಲಿ ಧಾರಾವಾಹಿಯ ಚಿತ್ರೀಕರಣ ಮಾಡಲಾಯಿತು. ಈವರೆಗೆ ಧಾರಾವಾಹಿಗಳಿಗಾಗಿ ಹಾಕಲಾದ ಬೃಹತ್ ಸೆಟ್‌ ಇದೇ ಧಾರಾವಾಹಿಗಾಗಿ ಹಾಕಲಾಗಿದೆ.

Advertisement
Share this on...