ನಟಿ ಮಹಾಲಕ್ಷ್ಮಿ ಈಗ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ ಗೊತ್ತಾ..?

in ಮನರಂಜನೆ 100 views

ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಮಹಾಲಕ್ಷ್ಮಿ ಕನ್ನಡಿಗರ ಕನಸಿನ ಹುಡುಗಿಯಾಗಿ, ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿ, ಬಾರಿ ಬೇಡಿಕೆಯಲ್ಲಿದ್ದಾಗಲೇ ಚಿತ್ರರಂಗವನ್ನು ಬಿಟ್ಟರು. ಕನ್ನಡ, ತಮಿಳು, ತೆಲುಗು ಸೇರಿದಂತೆ ಅನ್ಯ ಭಾಷೆಗಳಲ್ಲೂ ನಟಿಸಿದ್ದರು. ಕನ್ನಡದ ಅತ್ಯದ್ಭುತ ನಟಿಯರಲ್ಲಿ ಇವರು ಕೂಡ ಒಬ್ಬರು. ಕನ್ನಡದ ಆನಂದ ಭೈರವಿ, ಅಪರಂಜಿ, ಬಡ್ಡಿ ಬಂಗಾರಮ್ಮ, ಮದುವೆ ಮಾಡು ತಮಾಷೆ ನೋಡು, ಜಯಸಿಂಹ, ನವಭಾರತ, ಬಾರೆ ನನ್ನ ಮುದ್ದಿನ ರಾಣಿ, ದುರ್ಗಾಷ್ಟಮಿ ತಮಿಳಿನ ದೇವಿ ಶ್ರೀ ದೇವಿ, ಪೂ ಮನಮ್ ತೆಲುಗಿನ ರೆಂಡು ಜಿಲಾ ಸಿತಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಡಾ.ರಾಜ್ ಕುಮಾರ್ ರವರಿಂದ ಹಿಡಿದು ರವಿಚಂದ್ರನ್ ರವರೆಗಿನ ಎಲ್ಲಾ ಟಾಪ್ ನಟರ ಜೊತೆ ನಟಿಸಿರುವ ಈ ನಟಿಯ ಜೀವನ ಮಾತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ.

Advertisement

 

Advertisement

Advertisement

ಕನ್ನಡದ ಟಾಪ್ ನಟನ (ಆತ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ) ಜೊತೆ ಮಹಾಲಕ್ಷ್ಮಿ ಸ್ನೇಹ ಬೆಳೆಯಿತು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಇಬ್ಬರು ತುಂಬಾ ಗಾಢವಾದ ಪ್ರೀತಿಯಲ್ಲಿ ಮುಳುಗಿದ್ದರು. ಎಷ್ಟರಮಟ್ಟಿಗೆ ಅಂದರೆ ಇಬ್ಬರನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ ಅನ್ನುವ ಹಾಗೆ. ಇವರ ಪ್ರೀತಿಯ ವಿಷಯ ನಟನ ಮನೆಯಲ್ಲಿ ಗೊತ್ತಾಯಿತ್ತು. ಇದು ಅವರ ಮನೆಯಲ್ಲಿ ಕೋಲಾಹಲವನ್ನೆ ಸೃಷ್ಟಿಸಿತು. ಮಹಾಲಕ್ಷ್ಮಿಯನ್ನು ಮದುವೆಯಾಗುವುದು ನಟನ ಮನೆಯವರಿಗೆ ಇಷ್ಟ ಇರಲಿಲ್ಲ. ದೀಡಿರ್ ಅಂತ ಬೇರೆ ಒಂದು ಹುಡುಗಿಯನ್ನು ನೋಡಿ ನಟನಿಗೆ ಅವರ ಮನೆಯವರು ಮದುವೆ ಮಾಡಿದರು. ಅಲ್ಲಿಗೆ ಮಹಾಲಕ್ಷ್ಮಿ ಅವರ ಪ್ರೀತಿ ಮುರಿದುಬಿತ್ತು.
ಈ ನಟಿ ತುಂಬಾ ಸ್ವಾಭಿಮಾನದ ಹುಡುಗಿ ಹಾಗೂ ಒಳ್ಳೆಯ ಹುಡುಗಿ. ಪ್ರೀತಿ ಫೇಲ್ಯೂರ್ ಆಗಿದೆ ತಡ, ಚಿತ್ರರಂಗದಲ್ಲಿ ಪೀಕ್ ನಲ್ಲಿದ್ದ ಟೈಮ್ ನಲ್ಲೆ ಚಿತ್ರರಂಗವನ್ನು ತೊರೆದರು ನಟಿ ಮಹಾಲಕ್ಷ್ಮಿ. ಕೊನೆಗೆ ಮನೆಯವರು ಈ ನಟಿಗೆ ಒಬ್ಬ ಹುಡುಗನನ್ನು ನೋಡಿ ಮದುವೆ ಮಾಡಿದರು. ಹಲವಾರು ಕಾರಣಗಳಿಂದ ಮೊದಲನೇಯ ಪತಿಗೆ ವಿಚ್ಛೇದನ ಕೊಟ್ಟರು ಮಹಾಲಕ್ಷ್ಮಿ. ಹಾಗೆ ಎರಡನೇಯ ಮದುವೆ ಕೂಡ ತುಂಬಾ ಕಾಲ ಉಳಿಯುವುದಿಲ್ಲ. ಮೂರನೇ ಮದುವೇನೂ ಮುರಿದು ಬಿದ್ದಾಗ ಮಹಾಲಕ್ಷ್ಮಿಗೆ ಮಾನಸಿಕ ಖಿನ್ನತೆ ಕಾಡಿತು.

Advertisement

 

ಪ್ರೀತಿ, ಸಾಂಸಾರಿಕ ಜೀವನದಿಂದ ನೊಂದು-ಬೆಂದ ಮಹಾಲಕ್ಷ್ಮಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಎಲ್ಲವನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಚೆನೈನ ಒಂದು ಚರ್ಚ್ ನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಚರ್ಚ್ ನಲ್ಲಿ ನಟಿ ಮಹಾಲಕ್ಷ್ಮಿಯನ್ನು ನೋಡಿದ ಒಬ್ಬ ವ್ಯಕ್ತಿ ಅಕ್ಷರಶಃ ಶಾಕ್ ಆಗಿದ್ದ. ಅದಕ್ಕೆ ಕಾರಣ ಗುರುತು ಹಿಡಿಯಲು ಕಷ್ಟವಾಗುವಷ್ಟು ಬದಲಾಗಿದ್ದರು ಮಹಾಲಕ್ಷ್ಮಿ. ಆಕೆ ಇಷ್ಟಪಟ್ಟ ಆ ನಟನನ್ನೆ ಮದುವೆಯಾಗಿದಿದ್ದರೆ ನಟಿ ಮಹಾಲಕ್ಷ್ಮಿಯವರ ಜೀವನ ಬೇರೆ ರೀತಿಯಲ್ಲೆ ಇರುತ್ತಿತ್ತು. ಕೆಲವೊಮ್ಮೇ ಪ್ರೀತಿ ಜೀವನವನ್ನೇ ಹೇಗೆ ನಾಶ ಮಾಡಿತ್ತದೆ ಎಂಬುದಕ್ಕೆ ನಟಿ ಮಹಾಲಕ್ಷ್ಮಿ ಉದಾಹರಣೆಯಾಗಿ ಉಳಿದಿದ್ದಾರೆ ಎನ್ನಬಹುದು.

– ಸುಷ್ಮಿತಾ

Advertisement
Share this on...