ಮಹಾಲಯ ಅಮಾವಾಸ್ಯೆ ವಿಶೇಷ

in ಜ್ಯೋತಿಷ್ಯ 605 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ವರ್ಷ  ಋತು,  ಭಾದ್ರಪದ ಮಾಸೆ,  ಕೃಷ್ಣ  ಪಕ್ಷದ ಚತುರ್ದಶಿ ತಿಥಿ,  ಮಖಾ ನಕ್ಷತ್ರ,  ಸಿದ್ಧ ಯೋಗ,  ಭದ್ರಂಕರಣ ಕರಣ ಸೆಪ್ಟೆಂಬರ್ 16  ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ  ಬೆಳಗ್ಗೆ 10 ಗಂಟೆ  9 ನಿಮಿಷದಿಂದ  11 ಗಂಟೆ,  36 ನಿಮಿಷದವರೆಗೂ ಇದೆ.

Advertisement

ಇಂದು ಗುರೂಜಿ ರವರು ಮಹಾಲಯ ಅಮಾವಾಸ್ಯೆಯ ಸಿದ್ಧತೆಯ ಬಗ್ಗೆ ತಿಳಿಸಿಕೊಡಲಿದ್ದಾರೆ. ಈ ಹದಿನೈದು ದಿನಗಳ ಕಾಲ ಪಿತೃಗಳ ದಿನ.  ನಮ್ಮ ಹಿರಿಯರು ಬಹು ದೊಡ್ಡ ವಟ ವೃಕ್ಷ ನಾವು ಅದರಲ್ಲಿ  ಒಂದು ಅಣು ವಿದ್ದಂತೆ. ಎಲ್ಲಾ ರೀತಿಯ ಪೂಜೆಗಳ ವಿಧಾನಗಳನ್ನು ತಿಳಿಸಿಕೊಟ್ಟವರು ನಮ್ಮ ಹಿರಿಯರು. ಪಿತೃಗಳು ಸಮಾಧಾನವಾಗಿ ಇಲ್ಲದಿದ್ದರೆ  ಲೋಕ ನಡೆಯುವುದಿಲ್ಲ.  ಪಿತೃಗಳು ಸಮಾಧಾನವಾಗಿ ಇಲ್ಲದಿದ್ದರೆ ವಂಶ ವೃದ್ಧಿಯಾಗುವುದಿಲ್ಲ. ಪಿತೃಗಳು ಸಮಾಧಾನವಾಗಿ ಇಲ್ಲದಿದ್ದರೆ ವೃತ್ತಿಯಲ್ಲಿ ಅಭಿವೃದ್ಧಿ ಇಲ್ಲ. ಪಿತೃಗಳು ಸಮಾಧಾನವಾಗಿ ಇಲ್ಲದಿದ್ದರೆ ಅಲ್ಲಿ ಏಳಿಗೆ ಇರುವುದಿಲ್ಲ. ಅಲ್ಲದೆ ಪಿತೃಗಳು ಸಮಾಧಾನವಾಗಿ ಇಲ್ಲದಿದ್ದರೆ ಆ ಮನೆಯಲ್ಲಿ ಒಂದೇ ಒಂದು ಶುಭ ಕಾರ್ಯವೂ ಕೂಡ ನಡೆಯುವುದಿಲ್ಲ. ಪಿತೃಗಳ ಆಶೀರ್ವಾದ ಬಹುದೊಡ್ಡ ಆಶೀರ್ವಾದ. ಪತ್ರಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

 

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ತಾಯಿ ತಂದೆ ಹಿರಿಯರ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ನಿಮ್ಮ ಗೌರವಕ್ಕೆ ಅಥವಾ ನಿಮ್ಮ ಹಿರಿಯರ ಗೌರವಕ್ಕೆ ಒಂದು ಚ್ಯುತಿ ಬರುವ ಸಂಭವವಿದೆ ಆದ್ದರಿಂದ  ಮನೆಯಲ್ಲಿ ಒಂದು ಗಣಪತಿ ಹೋಮವನ್ನು ಮಾಡಿಸುವುದು ಸರ್ವಶ್ರೇಷ್ಠ.

ವೃಷಭ ರಾಶಿ : ಸುಖಕ್ಕೊಂದು ಕೊಳ್ಳಿ,  ವಿದ್ಯಾರ್ಥಿಗಳಿಗೆ ಸ್ವಲ್ಪ ಎಳೆದಾಟ, ಸುಖವಿದ್ದರೂ ಅದು ಅನುಭವಿಸಲಾಗದ ಸ್ಥಿತಿ ಎಡವಟ್ಟು ಬಂದೊದಗುತ್ತದೆ.  ಗುರುಗಳ ಆಶೀರ್ವಾದವನ್ನು ಪಡೆದುಕೊಳ್ಳಿ.

ಮಿಥುನ ರಾಶಿ : ಸಹೋದರರನ್ನು ಬಿಟ್ಟು ಮಾಡುವ ಕಾರ್ಯ ಪ್ರಯೋಜನಕಾರಿಯಲ್ಲ. ಅದರಲ್ಲೂ  ಪಿತೃ ಕಾರ್ಯವನ್ನು ಮಾಡುವಾಗ ಎಲ್ಲರೂ ಒಟ್ಟಾಗಿ ಮಾಡುವುದು ಒಳ್ಳೆಯದು. ಒಡಹುಟ್ಟಿದವರೊಡನೆ ಸುಮಧುರ ಭಾವನೆಯನ್ನು ಇಟ್ಟುಕೊಳ್ಳಿ.

ಕರ್ಕಾಟಕ ರಾಶಿ : ಕುಟುಂಬದ ವಿಚಾರ,  ಪೂಜಾ ವಿಚಾರ,  ನಾಳೆಯ ಕಾರ್ಯದ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೀರಿ.

ಸಿಂಹ ರಾಶಿ : ಎಲ್ಲಾ ಇದ್ದು ಏನೂ ಇಲ್ಲದಂತಹ ಭಾವದಿಂದ ಸ್ವಲ್ಪ ಕದಲುತ್ತೀರಿ.

ಕನ್ಯಾ ರಾಶಿ : ಮೋಕ್ಷ ಚಿಂತನಾ,  ದೈವ ಚಿಂತನದ ಬಗ್ಗೆ ಹೆಚ್ಚು ತಲೆ  ಕೆಡಿಸಿಕೊಳ್ಳುತ್ತೀರ.

ತುಲಾ ರಾಶಿ : ವೃತ್ತಿಗೆ ಸಂಬಂಧಪಟ್ಟಂತೆ ಸ್ವಲ್ಪ ಒತ್ತಡವಿದ್ದರೂ ಕೂಡ ಅದನ್ನು ಗೆದ್ದುಕೊಂಡು ಬರುತ್ತೀರಿ.

ವೃಶ್ಚಿಕ ರಾಶಿ : ವಿಶೇಷ ಧರ್ಮ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ ಯಶಸ್ಸು ಪಡೆಯುವಿರಿ ಜೊತೆಗೆ ಪಿತೃಗಳ ಆಶೀರ್ವಾದವನ್ನು ಕೂಡ ಪಡೆಯುವಿರಿ.

ಧನಸ್ಸು ರಾಶಿ : ನೀವು ಮಾಡುವುದಿಲ್ಲ,  ಮಾಡುವವರನ್ನು ಕೂಡ ನಂಬುವುದಿಲ್ಲ,  ಮಾಡುವವರಿಗೆ  ಮಾಡಲು ಬಿಡಿ.

ಮಕರ ರಾಶಿ : ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ.  ಪ್ರಯಾಣದಲ್ಲಿ ಸ್ವಲ್ಪ ವಿಳಂಬ ಬಿಟ್ಟರೆ ಮಿಕ್ಕಂತೆ ಯಾವುದೇ ರೀತಿಯ ತೊಂದರೆ ಇಲ್ಲ.

ಕುಂಭ ರಾಶಿ : ಧರ್ಮ ಕಾರ್ಯದಲ್ಲಿ ವಿಶೇಷ ಚಿಂತನ, ವಿಶೇಷ ದಾನ ಧರ್ಮಗಳನ್ನು ಮಾಡುವಂತಹ ದಿನ. ಗುರುಗಳಾಗಿದ್ದಾರೆ ತಾನಾಗಿಯೇ ಪ್ರತಿಷ್ಠೆ ಕೀರ್ತಿ ಗೌರವಗಳು ಹುಡುಕಿಕೊಂಡು ಬರುತ್ತದೆ.

ಮೀನ ರಾಶಿ : ಫುಡ್, ಏರ್,  ವಾಟರ್ ಇನ್ಫೆಕ್ಷನ್ ಗಳಾಗುತ್ತವೆ ಎಚ್ಚರಿಕೆ  ಅದನ್ನು ಬಿಟ್ಟರೆ ಮಿಕ್ಕಂತೆ ಯಾವುದೇ ರೀತಿಯ ತೊಂದರೆ ಇಲ್ಲ.

All Rights reserved Namma Kannada Entertainment.

Advertisement
Share this on...