ಶ್ರುತಿಯವರಿಂದ ದೂರ ಆದ್ಮೇಲೆ ಎಸ್. ಮಹೇಂದರ್ ಅವರು ಹೇಗಿದ್ದಾರೆ ಗೊತ್ತಾ..?

in ಮನರಂಜನೆ 167 views

ಎಸ್. ಮಹೇಂದರ್ ಅದೆಷ್ಟೋ ಜನರನ್ನು ಸ್ಟಾರ್ ಅನ್ನಾಗಿ ಮಾಡಿದ ಅದ್ಭುತ ನಿರ್ದೇಶಕ. ಅದೆಷ್ಟೋ ಜನರಿಗೆ ಚಿತ್ರರಂಗದಲ್ಲಿ ಜೀವಧಾನ ನೀಡಿದ ಕ್ರಿಯೇಟರ್. ಕನ್ನಡಿಗರಿಗೆ ಸೆಂಟಿಮೆಂಟ್ ಅಂದರೆ ಏನು ಎಂದು ತೋರಿಸಿ ಕಣ್ಣಿನಲ್ಲಿ ನೀರು ತರಿಸಿದ ಅದ್ಭುತವಾದ ಕಲಾಕಾರ. ಆದರೆ ಇಷ್ಟೊಂದು ಜನರನ್ನು ಬೆಳೆಸಿದ ಎಸ್. ಮಹೇಂದರ್ ಜೀವನದಲ್ಲಿ ಆಗಿದ್ದೇನು..? ಈಗ ಅವರು ಏನು ಮಾಡುತ್ತಿದ್ದಾರೆ ಗೊತ್ತಾ..?

Advertisement

 

Advertisement


ಅದೊಂದು ಕಾಲ ಎಸ್. ಮಹೇಂದರ್ ಎಂದರೆ ನಿರ್ಮಾಪಕರಿಗೆ ಜೇನುತುಪ್ಪ ಇದ್ದಂತೆ. ಕಡಿಮೆ ಬಜೆಟ್ ನಲ್ಲಿ ಸಿನಿಮಾ ತೆಗೆದು ಸಂಬಂಧಗಳನ್ನೇ ಕಥಾ ವಸ್ತುವನ್ನಾಗಿ ಮಾಡಿಕೊಂಡು ಜೀವಂತ ಮೌಲ್ಯಗಳನ್ನು ತೋರಿಸಿ ಹಿಟ್ ಮೇಲೆ ಹಿಟ್ ಕೊಟ್ಟು ನಿರ್ಮಾಪಕರ ಜೇಬು ತುಂಬಿಸುತ್ತಿದ್ದ ಎಸ್. ಮಹೇಂದರ್ ಡೇಟ್ಸ್ ಗಾಗಿ ಕಾಯುತ್ತಿದ್ದರು ನಿರ್ಮಾಪಕರು. ಎಲ್ಲವೂ ಚೆನ್ನಾಗಿ ಇತ್ತು. ನಟಿ ಶ್ರುತಿ ಮತ್ತು ಎಸ್. ಮಹೇಂದ್ರ ಮಧ್ಯೆ ಪ್ರೇಮಾಂಕುರವಾಗಿ 1998ರಲ್ಲಿ ಇಬ್ಬರು ಮದುವೆಯಾದರು. ನಂತರ ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಹುಟ್ಟಿತು. ಎಸ್. ಮಹೇಂದ್ರ ಮತ್ತು ಶ್ರುತಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಆಗ ಬಂದಿದೆ ರಾಜಕೀಯ.

Advertisement

 

Advertisement


ತಾನು ಹುಟ್ಟಿದ ಸ್ಥಳ ಕೊಳ್ಳೇಗಾಲಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡೋಣ ಎಂದು ರಾಜಕೀಯಕ್ಕೆ ಧುಮ್ಮುಕ್ಕಿದ ಎಸ್. ಮಹೇಂದ್ರ ಕೊಳ್ಳೇಗಾಲದಿಂದ ಎಂ.ಎಲ್.ಎ ಎಲೆಕ್ಷನ್ ಗೆ ನಿಂತರು. ರಾಜಕೀಯದ ಆಳ ಗೊತ್ತಿಲ್ಲದ ಎಸ್. ಮಹೇಂದರ್ ಇಳಿದ ಮೇಲೆ ಹಿಂದಿರುಗಿ ಬರಲು ಆಗದ ಕಾರಣ ತನ್ನಲ್ಲಿದ್ದ ಎಲ್ಲಾ ಹಣವನ್ನು ಎಲೆಕ್ಷನ್ ನಲ್ಲಿ ಖರ್ಚು ಮಾಡಿದರು. ಆದರೆ ಅವರು ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು. ಕೇವಲ 12 ಸಾವಿರ ಮತಗಳ ಅಂತರದಿಂದ ಎಸ್. ಮಹೇಂದರ್ ಸೋಲನ್ನು ಅನುಭವಿಸಿದರು. ಎಲೆಕ್ಷನ್ ನಂತರ ಎಸ್. ಮಹೇಂದರ್ ಜೀವನದಲ್ಲಿ ಊಹಿಸದ ಘಟನೆಗಳು ನಡೆಯುತ್ತಾ ಹೋದ್ದವು. ನಟಿ ಶ್ರುತಿ ಮತ್ತು ಎಸ್. ಮಹೇಂದರ್ ಮಧ್ಯೆ ವೈಮನಸ್ಸು ಉಂಟಾಯಿತ್ತು. ಕೊನೆಗೆ ಅದು ವಿಚ್ಛೇದನದಲ್ಲಿ ಕೊನೆಯಾಯಿತು.

 


ಕಾಲದ ಮಹಿಮೆಯೇ ಹಾಗೆ ಸಮಯ ಸರಿಯಿಲ್ಲ ಅಂದರೆ ಕೆಲವೊಮ್ಮೆ ಅಮೃತ ಕೂಡ ನಮ್ಮ ಕಣ್ಣಿಗೆ ವಿಷವಾಗಿ ಕಾಣಿಸುತ್ತದೆ. ಮೂರು ವರ್ಷ ಒಂಟಿಯಾಗಿದ್ದ ಎಸ್. ಮಹೇಂದರ್ 2012 ರಲ್ಲಿ ಯಶೋಧ ಅನ್ನುವವರನ್ನು ಮದುವೆಯಾದರು. ಇದರ ಮಧ್ಯೆ ಎಸ್. ಮಹೇಂದರ್ ಅವರ ಮಗಳು ಗೌರಿರವರು ಬರೆದಿದ್ದ ಒಂದು ಪೋಸ್ಟ್ ಹೃದಯವನ್ನು ಹಿಂಡಿತ್ತು. ಅಪ್ಪ ಐ ಲವ್ ಯು, ನೀವು ಯಾವಾಗಲೂ ನನ್ನ ಮೊದಲ ಪ್ರೀತಿ, ನನ್ನ ನೆಚ್ಚಿನ ಹೀರೋ, ನಿಮ್ಮ ಮೇಲಿನ ನನ್ನ ಪ್ರೀತಿ, ನಮ್ಮಿಬ್ಬರ ಬಾಂಧವ್ಯದ ಬೇಸುಗೆಯನ್ನು ಯಾರಿಂದಲೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಐ ಮಿಸ್ ಯು, ನಿಮ್ಮೊಂದಿಗೆ ಸಮಯವನ್ನು ಕಳೆಯಬೇಕೆಂದಿದ್ದೇನೆ ಅದು ಶೀಘ್ರದಲ್ಲೇ ನಿಜವಾಗಲಿದೆ ಎಂದು ಪೋಸ್ಟ್ ಮಾಡಿದ್ದರು. ಇದರ ಮೂಲಕ ಗೌರಿ ಅಪ್ಪನ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದರು.

 


ತುಂಬಾ ಗ್ಯಾಪ್ ತೆಗೆದುಕೊಂಡು 2011 ರಿಂದ 2017 ರವರೆಗೆ ಎಸ್. ಮಹೇಂದರ್ ರವರು ಮೂರು ಸಿನಿಮಾ ನಿರ್ದೇಶನ ಮಾಡಿದರಾದರೂ ಅವು ಹೇಳಿಕೊಳ್ಳುವಷ್ಟು ಹಿಟ್ ಆಗಲಿಲ್ಲ. ಸುಮಾರು 3 ವರ್ಷದಿಂದ ಎಸ್. ಮಹೇಂದರ್ ಯಾವ ಸಿನಿಮಾವನ್ನು ಕೂಡ ಮಾಡಿಲ್ಲ. ಒಂದಂತು ಸತ್ಯ ಮುಂದಿನ ಪೀಳಿಗೆಗೆ ಎಸ್. ಮಹೇಂದರ್ ರವರ ಸಿನಿಮಾಗಳು ತೋರಿಸಿದರೆ ಸಾಕು ಸಂಬಂಧಗಳ ಮೌಲ್ಯ ಏನು ಅನ್ನುವುದು ಗೊತ್ತಾಗುತ್ತದೆ.

– ಸುಷ್ಮಿತಾ

Advertisement
Share this on...