ನಾನಾ…ನೀನಾ…ಮಗಳೊಂದಿಗೆ ಸ್ಪರ್ಧೆಗಿಳಿದ ಮಹೇಶ್ ಬಾಬು ! ಚಾಲೆಂಜ್ ಏನು ನೋಡಿ

in ಮನರಂಜನೆ/ಸಿನಿಮಾ 159 views

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಶೂಟಿಂಗ್ ಇಲ್ಲದಿದ್ದರೆ ಪಾರ್ಟಿ, ಸ್ನೇಹಿತರೊಂದಿಗೆ ಟ್ರಿಪ್ ಎಂದೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಶೂಟಿಂಗ್ ಬಿಟ್ಟರೆ ಮನೆ, ಮನೆ ಬಿಟ್ಟರೆ ಶೂಟಿಂಗ್ ಎಂದು ಇರುವ ಈ ಸೂಪರ್ ಸ್ಟಾರ್ ಸುಮಾರು 3 ತಿಂಗಳಿನಿಂದ ಆರಾಮವಾಗಿ ಮನೆಯಲ್ಲಿ ಪತ್ನಿ , ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿದ್ಧಾರೆ.ಕಳೆದ ಮೂರು ತಿಂಗಳಿಂದ ಮಹೇಶ್ ತಮ್ಮ ಕುಟುಂಬದವರೊಂದಿಗೆ ಇರುವ ಅಪರೂಪದ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಅವರ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಮಹೇಶ್, ತಮ್ಮ ಪುತ್ರಿ ಸಿತಾರಾ ಜೊತೆಗಿರುವ ವಿಡಿಯೋ ಅದು. ಮಹೇಶ್ ಬಾಬು ಮನೆಯಲ್ಲೇ ಸ್ವಿಮ್ಮಿಂಗ್ ಪೂಲ್ ಇದ್ದು ಅಪ್ಪ-ಮಗಳು ಇಬ್ಬರೂ ಸ್ವಿಮ್ಮಿಂಗ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇದು ಬರೀ ಫನ್ ಮಾತ್ರವಲ್ಲ ಇಬ್ಬರೂ ಸ್ವಿಮ್ಮಿಂಗ್ ರೇಸ್ ಕೂಡಾ ಮಾಡಿದ್ದಾರೆ.

Advertisement

Advertisement

ಮಹೇಶ್ ಬಾಬು ಹಾಗೂ ಸಿತಾರಾ ಇಬ್ಬರೂ ಸ್ವಿಮ್ಮಿಂಗ್ ರೇಸ್ ಮಾಡುತ್ತಿರುವ ವಿಡಿಯೋವನ್ನು ಪತ್ನಿ ನಮ್ರತಾ ಶಿರೋಡ್ಕರ್ ಸೆರೆ ಹಿಡಿದಿದ್ಧಾರೆ. ಈ ವಿಡಿಯೋವನ್ನು ಮಹೇಶ್ ಪುತ್ರಿ ಸಿತಾರಾ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ‘ಅಪ್ಪನೊಂದಿಗಿನ ಮೊದಲ ರೇಸ್ ಇದು, ಈ ರೇಸ್ ನಾನು ಬಹಳ ಎಂಜಾಯ್ ಮಾಡಿದೆ. ನನ್ನ ತೋಳುಗಳಿಗಿಂತ ಅಪ್ಪನ ತೋಳು ದೊಡ್ಡದಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸಿತಾರಾ ಇಷ್ಟು ಚಿಕ್ಕ ವಯಸ್ಸಿಗೆ ಅಪ್ಪನಂತೆ ಹೆಸರು ಮಾಡಿದ್ಧಾರೆ.

Advertisement

 

Advertisement
View this post on Instagram

 

Racing with Nanna was so much fun ♥️♥️♥️ His arms are way bigger than mine??? My first race?? #swimoclock @urstrulymahesh

A post shared by SitaraGhattamaneni (@sitaraghattamaneni) on

ಸಿತಾರಾ ಹೆಸರಿನಲ್ಲಿ ಅಫಿಷಿಯಲ್ ಇನ್ಸ್​​ಟಾಗ್ರಾಮ್​ ಇದ್ದು 1 ಲಕ್ಷಕ್ಕೂ ಹೆಚ್ಚು ಮಂದಿ ಸಿತಾರಾಳನ್ನು ಫಾಲೋ ಮಾಡುತ್ತಿದ್ಧಾರೆ. ಸಿತಾರಾ ತನ್ನ ಗೆಳತಿ ಆದ್ಯಾ ಜೊತೆ ಸೇರಿ A & S (Adya and Sitara) ಎಂಬ ಯೂಟ್ಯೂಬ್ ಚಾನೆಲ್ ಕೂಡಾ ನಡೆಸುತ್ತಿದ್ದು ಈ ಚಾನೆಲ್​​​​​​ಗೆ 2 ಲಕ್ಷ ಮಂದಿ ಸಬ್ಸ್​​​​ಕ್ರೈಬ್ ಆಗಿದ್ಧಾರೆ. ‘ಫ್ರೋಜನ್ 2’ ಬೇಬಿ ಎಲ್ಸಾ ಪಾತ್ರಕ್ಕೆ ಸಿತಾರಾ ಇಂಗ್ಲೀಷ್​​ನಲ್ಲಿ ಡಬ್ ಕೂಡಾ ಮಾಡಿದ್ಧಾಳೆ. ಎಷ್ಟೋ ಬಾರಿ ತಂದೆ ತಾಯಿಗಳು ಎಷ್ಟೇ ದೊಡ್ಡ ಮಟ್ಟಿಗೆ ಹೆಸರು ಮಾಡಿದ್ದರೂ ಮಕ್ಕಳಿಗೆ ಆ ಹೆಸರು ಸಿಗುವುದಿಲ್ಲ. ಆದರೆ ಸಿತಾರಾ ವಿಚಾರದಲ್ಲಿ ಹಾಗಲ್ಲ. ಈಗಾಗಲೇ ಆಕೆ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾಳೆ.

Advertisement
Share this on...