ನೀವು ನಿಯಮಿತವಾಗಿ ಮೈದಾ ಪದಾರ್ಥವನ್ನು ಸೇವಿಸುತ್ತೀರಾ ? ಹಾಗಾದ್ರೆ ನಿಮಗೆ ಈ ಸಮಸ್ಯೆ ಕಾಡೋದು ಪಕ್ಕಾ !

in ಕನ್ನಡ ಆರೋಗ್ಯ 61 views

ನಮ್ಮ ಯುವಕರಿಗೆ ಕಳೆದ ಕೆಲವು ದಿನಗಳಲ್ಲಿ ಹೆಚ್ಚು ಇಷ್ಟಪಡುವ ಖಾದ್ಯವೆಂದರೆ ಜಂಕ್‌ ಫುಡ್‌ ಗಳು. ಅದರಲ್ಲೂ ನಾಲಿಗೆಗೆ ರುಚಿಕೊಡುವ ನಮ್ಮದಲ್ಲದ ಪಿಜ್ಜಾ ಬರ್ಗರ್ ಹಿಂದೆ ಬಿದ್ದಿರುವುದು ಬೇಸರ ತರಿಸುವ ವಿಚಾರವೇ ನಿಜ. ಇವನ್ನು ತಿನ್ನುವ ಮೂಲಕ ಯುವಕರು ಅವರಿಗೆ ಅರಿವಿಲ್ಲದೆಯೇ ಅನೇಕ ರೋಗಗಳಿಗೆ ಒಳಗೊಳ್ಳುತ್ತಿದ್ದಾರೆ. ಅದರಲ್ಲೂ ಪಿಜ್ಜಾ, ಬರ್ಗರ್ ಮತ್ತು ಬೇಕರಿ ಉತ್ಪನ್ನಗಳನ್ನು ತಿನ್ನಲೇಬಾರದು.

Advertisement

 

Advertisement

Advertisement

 

Advertisement

ಇದಕ್ಕೆ ಪ್ರಮುಖ ಕAರಣ ಈ ಉತ್ಪನ್ನಗಳಲ್ಲಿ ಬಳಸಲಾಗುವುದು ಮೈದಾ. ಇದೇ ಬಿಳಿ ಹಿಟ್ಟು ಅಂದರೆ ಮೈದಾ ದೇಹಕ್ಕೆ ತುಂಬ ಅಪಾಯಕಾರಿ. ಈ ಮೈದಾ ಹಿಟ್ಟನ್ನು ಯಾವಗಲಾದರೂ ಒಮ್ಮೆಯೋ ಅಥವಾ 6 ತಿಂಗಳಿಗೋ ವರ್ಷಕ್ಕೊಮ್ಮೆಯೋ ತಿಂದರೆ ಪರವಾಗಿಲ್ಲ. ಆದರೆ, ವಾರದಲ್ಲಿ 2-3 ಬಾರಿ ಸೇವಿಸಿದರೆ ಅಪಾಯ ತಪ್ಪಿದ್ದಲ್ಲ. ಬೇಕರಿ ಈ ಪದಾರ್ಥಗಳಿಗೆ ಇದು ಮೃದುತ್ವವನ್ನು ಕೊಡುತ್ತದೆಯಾದ್ದರಿಂದ ಮೈದಾವನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಮೈದಾ ನಮ್ಮ ದೇಹಕ್ಕೆ ಅಪಾರ ಹಾನಿಯನ್ನುಂಟುಮಾಡುತ್ತದೆ.

 

 

ಮೈದಾ ಎಂದರೆ ಸಂಸ್ಕರಿಸಿದ ಗೋಧಿ ಹಿಟ್ಟು. ಇದೇ ಗೋಧಿ ಹಿಟ್ಟಿನಲ್ಲಿರುವ ಸಂಪೂರ್ಣ ನಾರಿನ ಅಂಶವನ್ನು ತೆಗೆದುಬಿಡುವುದರಿಂದ ಮೈದಾ ಹಿಟ್ಟು ನುಣ್ಣಗೆ ಹಾಗೂ ಬೆಳ್ಳಗೆ ಇರುತ್ತದೆ. ಅಲ್ಲದೇ ಬೆನ್ಜೋಯಿಕ್ ಪೆರಾಕ್ಸೆಡ್ ರಾಸಾಯನಿಕದಿಂದ ಬ್ಲೀಚ್ ಮಾಡುವುದರಿಂದ ಶುಭ್ರವಾದ ಬಿಳಿಯ ಬಣ್ಣ ಹೊಂದುತ್ತದೆ. ಈ ಬೆನ್ಜೋಯಿಕ್ ಪೆರಾಕ್ಸೆಡ್ ರಾಸಾಯನಿಕವನ್ನು ಈಗಾಗಲೇ ಚೀನಾ ಮತ್ತು ಯುರೋಪ್ಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಇದಕ್ಕೆ ಯೀಸ್ಟ್ ಹಾಕಿ ಓವನ್ನಲ್ಲಿ ಬೇಯಿಸಿದಾಗ ಹೆಚ್ಚು ಮೃದುತ್ವ ಬರುವುದರಿಂದ ಇದನ್ನೇ ಜಂಕ್ಫುಡ್ಗಳಲ್ಲಿ ಬಳಸುತ್ತಾರೆ ಎಂಬುದು ಆತಂಕಕಾರಿ ಬೆಳವಣಿಗೆ.

 

 

ಮೈದಾದಲ್ಲಿ ನಾರಿನಂಶ ಇಲ್ಲದಿರುವುದರಿಂದ ಇದನ್ನು ತಿನ್ನುವವರಿಗೆ ಮಲಬದ್ಧತೆ ಹೆಚ್ಚುತ್ತದೆ. ಅಲ್ಲದೇ ನಿಯಮಿತವಾಗಿ ಮೈದಾ ಸೇವನೆಯಿಂದ ಸಿಟ್ಟು, ಕೋಪ, ಅಸಹನೆ ಜಾಸ್ತಿಯಾಗುತ್ತದೆ. ಕಾರಣ ಇದನ್ನು ತಿಂದ ಕೂಡಲೇ ನಮ್ಮ ರಕ್ತದಲ್ಲಿ ಸಕ್ಕರೆ ಅಂಶ ಏರುಪೇರಾಗುತ್ತದೆ. ಹೀಗೆ ಏರುಪೇರಾದ ಸಕ್ಕರೆ ಅಂಶ ಮಿದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತದ ಸೃವಿಸುವಿಕೆಗೆ ಅಡ್ಡಿ ಮಾಡುವುದರಿಂದ ಹೀಗಾಗುತ್ತದೆ. ಮೈದಾ ತಿಂದರೇ ಹಸಿವು ಜಾಸ್ತಿಯಾಗುತ್ತದೆ.

 

 

ಇದಕ್ಕೆ ಕಾರಣ ಮೈದಾ ಸೇವಿಸಿದ ಕೂಡಲೇ ದೇಹದಲ್ಲಿ ಸಕ್ಕರೆ ಪ್ರಮಾಣ ವೇಗವಾಗಿ ಲಭ್ಯವಾಗಿ, ಅಷ್ಟೇ ವೇಗವಾಗಿ ಖಾಲಿಯಾಗುವುದ ರಿಂದ ಹಸಿವು ಜಾಸ್ತಿಯಾದ ಅನುಭವವಾಗುತ್ತದೆ ಎಂಬ ಸತ್ಯ ತಿಳಿದುಕೊಳ್ಳಿ. ಹಾಗಾದರೆ ಮೈದಾ ಎಷ್ಟು ಡೇಂಜರ್‌ ಎಂಬುದು ಅರಿವಿಗೆ ಬಂದಂತೆ ಕಾಣುತ್ತದೆ. ಹಾಗಾದರೆ ಇನ್ನೇಕೆ ತಡ ಮೊದಲು ಈ ಮೈದಾ ಬಳಕೆಯನ್ನು ಕಡಿಮೆ ಮಾಡಿ

Advertisement
Share this on...