ಸುಂದರ ಸಂಬಂಧವನ್ನು ಕಾಯ್ದುಕೊಳ್ಳಿ, ಬಿರುಕನ್ನು ದೂರವಾಗಿಸಿ

in ಮನರಂಜನೆ 138 views

ಮಾನವ ಸಂಘ ಜೀವಿ.ಹೀಗಾಗಿ ಅನಾದಿ ಕಾಲದಿಂದಲೂ ಮನುಷ್ಯ ಜೊತೆ ಜೊತೆಯಾಗಿ ಬದುಕುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಇಂದು ಮಾನವನು ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯತ್ತ ಸಾಗುತ್ತಿದ್ದಾನೆ. ಏರುಗತಿಯಿಂದ ಕೂಡಿದ ಮಾನವನ ಬದುಕಿನಲ್ಲಿ ಒತ್ತಡದಿಂದಾಗಿ ಸಂಬಂಧಗಳು ಹಾಳಾಗುತ್ತಿದೆ. ಹೀಗಾಗಿ ಒತ್ತಡ ತುಂಬಿದ ಬದುಕಿನಲ್ಲಿ ಯಾರ ಬಳಿಯೂ ಮಾತನಾಡಲು ಸಮಯವಿಲ್ಲ. ತನ್ನವರಿಗಾಗಿ ಕೊಡಲು ಸಮಯವಿಲ್ಲ. ಇದರಿಂದಾಗಿ ಸಂಬಂಧಗಳಲ್ಲಿ ದಿನೇ ದಿನೇ ಬಿರುಕು ಕಾಣಿಸುತ್ತಲೇ ಇದೆ. ಆದರೆ ಈ ಅಂಶಗಳನ್ನು ಅಳವಡಿಸಿಕೊಂಡರೆ ಸಂಬಂಧಗಳಲ್ಲಿ ಬಿರುಕು ಕಾಣಲು ಸಾಧ್ಯವಿಲ್ಲ.
• ಬೆಂಬಲ ನೀಡಿ
ಜೀವನಸಂಗಾತಿಯಾಗಿರಲಿ ಅಥವಾ ಯಾವುದೇ ಸಂಬಂಧವಾಗಿರಲಿ. ಪ್ರತಿಯೊಬ್ಬ ವ್ಯಕ್ತಿಯೂ ಬಯಸುವುದು ಬೆಂಬಲ ಅಥವಾ ಪ್ರೋತ್ಸಾಹ. ಹೀಗಾಗಿ ನಿಮ್ಮ ಜೀವನಸಂಗಾತಿಯು ಏನಾದರೂ ಹೊಸ ಕೆಲಸವನ್ನು ಮಾಡಲು ಹೊರಟಾಗ ಬೆಂಬಲ ನೀಡಿ. ಹೀಗಿದ್ದಾಗ ಅವರಲ್ಲಿ ಮಾಡಬೇಕೆನ್ನುವ ಹುಮ್ಮಸ್ಸು ಬೆಳೆಯುತ್ತದೆ. ಜೊತೆಗೆ ನನ್ನ ಜೊತೆ ಜೀವನ ಸಂಗಾತಿ ಅಥವಾ ಸಂಬಂಧಿಕರು ಇದ್ದಾರೆ ಎನ್ನುವ ಧೈರ್ಯವನ್ನು ಮೂಡಿಸುತ್ತದೆ. ಇದು ಸಂಬಂಧವನ್ನು ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೆ.

Advertisement


• ಪ್ರಮಾಣಿಕವಾಗಿರಿ
ಪ್ರತಿಯೊಂದು ಸಂಬಂಧದಲ್ಲಿ ಮುಖ್ಯವಾಗಿ ಬೇಕಾಗಿರುವುದು ಪ್ರಾಮಾಣಿಕತೆ. ಮನುಷ್ಯ ಎಷ್ಟೇ ಸಂಪಾದಿಸಿದರೂ ಪ್ರಾಮಾಣಿಕತೆಯನ್ನು ಸಂಬಂಧಿಸಲೂ ಸಾಧ್ಯಾವಿಲ್ಲ. ಯಾವುದೇ ಸಂಬಂಧವಾಗಿರಲಿ ನಿಜ ಸಂಗತಿಯನ್ನೂ ಹಂಚಿಕೊಳ್ಳಿ, ಸುಳ್ಳು ಹೇಳಿ ಆ ಕ್ಷಣಕ್ಕೆ ಸಂಬಂಧವನ್ನು ಉಳಿಸಿಕೊಳ್ಳಬಹುದು. ಆದರೆ ಸತ್ಯವೂ ಸಂಬಂಧದಲ್ಲಿ ಪ್ರಾಮಾಣಿಕರಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಸುಳ್ಳು ಅಥವಾ ಅಪ್ರಾಮಾಣಿಕತೆ ಸಂಬಂಧಗಳಲ್ಲಿ ಬಿರುಕು ಮೂಡಿಸಲು ಕಾರಣವಾಗುತ್ತದೆ. ಹೀಗಾಗಿ ಸಂಬಂಧಗಳಲ್ಲಿ ಪ್ರಾಮಾಣಿಕರಾಗಿರಿ.

Advertisement

• ಹಣದ ವ್ಯವಹಾರ ಹಾಳುಗೆಡುವದಿರಲಿ
ಜೀವನ ಸಂಗಾತಿಯಾಗಿರಲಿ ಅಥವಾ ಸ್ನೇಹವಾಗಿರಲಿ ಇಂತಹ ಸಂಬಂಧಗಳಲ್ಲಿ ಕೆಲವು ನಿಯಮಗಳನ್ನು ಅಳವಡಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಆರ್ಥಿಕ ಏರಿಳಿತ ಸರ್ವೇಸಾಮಾನ್ಯ. ಯಾವುದೇ ಸಂಬಂಧದಿರಲಿ ಹಣದ ವ್ಯವಹಾರದಂತಹ ವಿಷಯವನ್ನು ಸಂಬಂಧದಲ್ಲಿ ತರುವುದನ್ನು ದೂರವಿಡಿ. ಇದ್ದರಿಂದಾಗಿ ಸಂಬಂಧಗಳು ಹಾಳಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಹೀಗಾಗಿ ಹಣದ ವ್ಯವಹಾರಗಳು ಸಂಬಂಧದಿಂದ ಮಾರುದ್ದ ದೂರವಿರಲಿ.

Advertisement


• ಸಮಯವನ್ನು ಮೀಸಲಿಡಿ
ಸಂಬಂಧಗಳಲ್ಲಿ ಮುಖ್ಯವಾಗಿ ಒಬ್ಬರನ್ನು ಇನ್ನೊಬ್ಬರು ಅರಿತುಕೊಂಡು ಬಾಳುವುದು ಮುಖ್ಯ. ಹೀಗಾಗಿ ತಮ್ಮ ಭಾವನೆಗಳನ್ನು ಸಮಯ ಸಿಕ್ಕಾಗ ಹಂಚಿಕೊಳ್ಳಿ. ಇಬ್ಬರು ದಿನಕ್ಕೆ ಅಥವಾ ಇಂತಿಷ್ಟು ಸಮಯವೆಂದೇ ಮೀಸಲಿಡಿ. ವಾರಕ್ಕೊಮ್ಮೆಯಾದರೂ ಸಂಗಾತಿಯೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಿನಿಮಾ, ಉದ್ಯಾವನ ಹೀಗೆ ಸಾಧ್ಯವಾದಷ್ಟು ಸಮಯವನ್ನು ಕೊಡಲು ಪ್ರಯತ್ನಿಸಿ. ಹೀಗೆ ಮಾಡಿದಾಗ ಪ್ರತಿಯೊಬ್ಬ ನಿಮ್ಮ ಸಂಗಾತಿ ಅಥವಾ ಸ್ನೇಹಿತನಿಗೆಸಂಬಂಧಕ್ಕೆ ಮಹತ್ವ ಕೊಡುತ್ತಾರೆ ಎನ್ನುವ ಖುಷಿ ನಿಮ್ಮ ಸಂಗಾತಿ ಅಥವಾ ಸ್ನೇಹಿತನಿಗೆ ಆಗುತ್ತದೆ. ಹೀಗಿದ್ದಾಗ ಸಂಬಂಧಗಳು ಅರ್ಥಪೂರ್ಣವಾಗಿರಲು ಸಾಧ್ಯ.

Advertisement

• ಭಾವನಾತ್ಮಕ ಹತೋಟಿಯಿರಲಿ
ನೀವು ನಿಮ್ಮ ಸಂಗಾತಿ ಅಥವಾ ಸ್ನೇಹಿತರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದು ಸಹಜ. ಆದರೆ ಒತ್ತಡದ ಕೆಲಸಕ್ಕೆ ಸಿಲುಕಿ ಸಂಗಾತಿಯೊಂದಿಗೆ ಅಥವಾ ಸ್ನೇಹಿತನೊಂದಿಗೆ ಅಹಿತಕರವಾಗಿ ವರ್ತಿಸುವುದು ಸೂಕ್ತವಲ್ಲ. ಹೀಗಿದ್ದಾಗ ನಿಮ್ಮ ಜೊತೆಗಿನ ವ್ಯಕ್ತಿಯ ನಡುವಿನ ಬಾಂಧವ್ಯ ಹಾಳಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸನ್ನಿವೇಶ ಯಾವುದೇ ತೆರೆನಾಗಿ ಇದ್ದರೂ ನಿಮ್ಮ ಮೇಲೆ ನಿಮಗೆ ಭಾವನಾತ್ಮಕ ಹತೋಟಿ ಅಗತ್ಯವಾಗಿರಬೇಕಾಗುತ್ತದೆ. ಇಂತಹ ಸಮಯದಲ್ಲಿ ಇಬ್ಬರಲ್ಲೂ ಪರಸ್ಪರ ಹೊಂದಾಣಿಕೆಯೂ ಸಂಬಂಧವನ್ನು ಉಳಿಸುವಲ್ಲಿ ಪ್ರಮುಖವಾದ ಪಾತ್ರವಹಿಸುತ್ತದೆ.

ಹೀಗಿದ್ದಾಗ ಪ್ರತಿಯೊಂದು ಸಂಬಂಧವೂ ಉತ್ತಮವಾಗಿ ಇರಲು ಸಾಧ್ಯ. ಈ ಅಂಶಗಳು ಎದುರಾಗುವ ಮನಸ್ತಾಪಗಳು ಮತ್ತು ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಉತ್ತಮ ಬಾಂಧವ್ಯ ಬೆಸೆಯಲು ಕಾರಣವಾಗುತ್ತದೆ.

ಸಾಯಿನಂದಾ ಚಿಟ್ಪಾಡಿ

Advertisement
Share this on...