“ಕೊರೊನಾದಿಂದ ಸಂರಕ್ಷಿಸಿಕೊಳ್ಳಲು ಈ ಪಾನೀಯವನ್ನು ಕುಡಿಯುತ್ತೇನೆ”, ವಿಡಿಯೋ ಹಂಚಿಕೊಂಡ ಮಲೈಕಾ

in ಕನ್ನಡ ಮಾಹಿತಿ/ಮನರಂಜನೆ 60 views

ಕೊರೊನಾ ಸೋಂಕು ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದೆ. ಈ ಸೋಂಕಿನಿಂದ ತಪ್ಪಿಸಿಕೊಳ್ಳಲು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತಜ್ಞರು ಒತ್ತು ನೀಡುತ್ತಿದ್ದಾರೆ. ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಬೆಚ್ಚಗಿನ ನೀರನ್ನು ಕುಡಿಯಬೇಕು ಮತ್ತು ಕಷಾಯವನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ಪಿಎಂ ನರೇಂದ್ರ ಮೋದಿ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿ ಮಲೈಕಾ ಅರೋರಾ ಸಹ ಕೊರೊನಾದಿಂದ ಸಂರಕ್ಷಿಸಿಕೊಳ್ಳಲು ವಿಶೇಷ ರೆಸಿಪಿಯನ್ನು ಹಂಚಿಕೊಂಡಿದ್ದು, ನೀವು ಕೂಡ ಇದನ್ನು ಬಳಸುವ ಮೂಲಕ ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ಮಲೈಕಾ “ಇದು ಮೇಕ್ ಇನ್ ಇಂಡಿಯಾ ಹೋಮ್ ರೆಸಿಪಿ” ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಈ ವಿಧಾನವನ್ನು ನಮ್ಮ ಹಿರಿಯರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಿದ್ದರು. ನೆಲ್ಲಿಕಾಯಿ, ಆಪಲ್ ಸೈಡರ್ ವಿನೆಗರ್, ಸಾವಯವ ಅರಿಶಿನ, ಶುಂಠಿ ಮತ್ತು ಮೆಣಸಿನಕಾಯಿ ಸಹಾಯದಿಂದ ನೀವು ಈ ಮ್ಯಾಜಿಕ್ ಪಾನೀಯವನ್ನು ತಯಾರಿಸಬಹುದು ಎಂದು ಹೇಳಿದ್ದಾರೆ ಮಲೈಕಾ.

Advertisement

Advertisement

ಅಷ್ಟೇ ಅಲ್ಲ, ಈ ವಿಡಿಯೋ ಕ್ಲಿಪ್ನಲ್ಲಿ ಮಲೈಕಾ ನೆಲ್ಲಿಕಾಯಿ, ಶುಂಠಿ, ಅರಿಶಿನ ಮತ್ತು ಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಹಾಕುವುದನ್ನು ಕಾಣಬಹುದು. ಜೊತೆಗೆ ಸ್ವಲ್ಪ ಆಪಲ್ ವಿನೆಗರ್ ಮತ್ತು ನೀರನ್ನು ಕೂಡ ಸೇರಿಸುತ್ತಾರೆ. ಈ ಪಾನೀಯದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಮಲೈಕಾ ನೀರು ಕುಡಿಯುವ ಸರಿಯಾದ ಮಾರ್ಗವನ್ನು ಶೇರ್ ಮಾಡಿದ್ದಾರೆ. ನಿಧಾನವಾಗಿ ಕುಳಿತು ನೀರು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಿದ್ದಾರೆ.
ಮಲೈಕಾ ಅರೋರಾ ಲಾಕ್ ಡೌನ್ ನಂತರ ಬಿಡುವಿನ ವೇಳೆಯಲ್ಲಿ ನೆಟ್ಟಿಗರಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೊರೊನಾಗಳಿಂದ ತಪ್ಪಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

Advertisement

 

Advertisement
View this post on Instagram

 

This is a true blue make in India home remedy. Age old traditional tried and tested homemade immunity booster. Indian gooseberry (Aamla), fresh organic turmeric and ginger root with some Apple cider vinegar and a dash of peppercorns is all it takes to make this magic potion. For better results, ensure that yor ACV is with mother and in its purest form. Just blend these ingredients together and enjoy it’s health boosting properties. With all the immunity booster clutter suddenly available in the in the name of Covid 19, stick to this home made, quick and organic recipe for best results. #HomeRemedies #Malaika’sTrickOrTip #LoveYourGut #Malaika’sNuskha #HomeMadeWithLove

A post shared by Malaika Arora (@malaikaaroraofficial) on

ಅಷ್ಟೇ ಅಲ್ಲ, ಯೋಗ ಮತ್ತು ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ಕೊರೊನಾ ಗುಣಪಡಿಸಬಹುದು ಎಂದು ಮಲೈಕಾ ತಿಳಿಸಿದ್ದಾರೆ. ತನ್ನ ಸಮಕಾಲೀನರು ನಾಚಿಕೊಳ್ಳುವಂತೆ ಫಿಟ್ ನೆಸ್ ಕಾಪಾಡಿಕೊಂಡಿರುವ ಮಲೈಕಾ, ಗ್ಲಾಮರ್ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಟಫ್ ಕಾಂಪಿಟೇಶನ್ ಕೊಡುತ್ತಾ ಬಂದಿದ್ದಾರೆ. ವಯಸ್ಸು ನಲವತ್ತಾದರೂ ಕರ್ವಿ ಫಿಗರ್ ಹೊಂದಿರುವ ಮಲೈಕಾ ಆಗಾಗ್ಗೆ ತನಗಿಂತ ಚಿಕ್ಕವರಾದ ಗೆಳೆಯ ಅರ್ಜುನ್ ಕಪೂರ್ ಜೊತೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.

Advertisement
Share this on...