ಕನಸಿನ ರಾಣಿಯ ಮಗಳು ಹೇಗಿದ್ದಾರೆ.. ಏನು ಮಾಡುತ್ತಿದ್ದಾರೆ ಗೊತ್ತಾ?

in ಮನರಂಜನೆ 233 views

ಸತತವಾಗಿ ದಶಕಗಳ ಕಾಲ ಚಂದನವನದಲ್ಲಿ ತಮ್ಮ ಅಮೋಘ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವವರು ಕನಸಿನ ರಾಣಿ ಮಾಲಾಶ್ರೀ ಅವರು. ಮಾಲಾಶ್ರೀ ಅವರ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಸಾಕು ಚಿತ್ರದಲ್ಲಿ ನಾಯಕ ಯಾರು ಎಂದು ಕೂಡ ನೋಡದೆ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದ್ದರು. ಅಂತಹ ದೊಡ್ಡ ಕ್ರೇಜ್ ಅನ್ನು ಸೃಷ್ಟಿ ಮಾಡಿದ್ದವರು ಮಾಲಾಶ್ರೀ ಅವರು. ಅಭಿಮಾನಿಗಳಿಗೆ ಬೆಳ್ಳಿತೆರೆಯ ಮೇಲೆ ತಮ್ಮ ಕನಸಿನರಾಣಿಯನ್ನು ನೋಡುವುದೆ ಒಂದು ರೀತಿ ಆನಂದ, ತಮ್ಮ ಕೆಲಸ ಕಾರ್ಯಗಳನೆಲ್ಲಾ ಬಿಟ್ಟು ಸಿನಿಮಾ ನೋಡಲು ಮುಗಿ ಬೀಳುತ್ತಿದ್ದರು.ಇದೀಗ ಮಾಲಾಶ್ರೀ ಅವರು ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕರಾದ ರಾಮು ಅವರನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ ಎರಡು ಮುದ್ದಾದ ಮಕ್ಕಳಿವೆ. ಗಂಡು ಮಗುವಿನ ಹೆಸರು ಅರ್ಯನ್ ಆದರೆ ಹೆಣ್ಣು ಮಗುವಿನ ಹೆಸರು ಅನನ್ಯ. ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿರುವ ಮಾಲಾಶ್ರೀ ಅವರು ಸುಖವಾಗಿದ್ದಾರೆ.

Advertisement

 

Advertisement

Advertisement

ಇನ್ನು ಮಾಲಾಶ್ರೀ ಅವರನ್ನು ನೋಡಲು ಹೇಗಿದ್ದಾರೆ ಎಂದರೆ ನಿಜವಾಗಲು ನೀವು ನಂಬಲು ಸಾಧ್ಯವಿಲ್ಲ. ತನ್ನ ತಾಯಿಯಂತೆಯೇ ಅನನ್ಯ ಕೂಡ ದೊಡ್ಡ ನಟಿಯಾಗುವ ಎಲ್ಲಾ ರೀತಿಯ ಲಕ್ಷಣಗಳು ಕಾಣುತ್ತಿವೆ. ಕನಸಿನ ರಾಣಿಯ ಮಗಳು ನೋಡಲು ತನ್ನ ಅಮ್ಮನಂತೆಯೇ ಬಹಳ ಸುಂದರವಾಗಿದ್ದು, ಇದೀಗ ಬಿಶಪ್ ಕಾಟನ್ ಎಂಬ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಇನ್ನು ತನ್ನ ಅಮ್ಮನಂತೆಯೇ ದೊಡ್ಡ ಸ್ಟಾರ್ ನಟಿಯಾಗಬೇಕು ಎಂಬ ಕನಸನ್ನು ಕಾಣುತ್ತಿರುವ ಅನನ್ಯ ಅವರು ಇತ್ತೀಚಿಗೆ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

 

ಒಟ್ಟಾರೆ ಒಂದು ಕಾಲದಲ್ಲಿ ಸುಂದರವಾದ ನಯನ, ಸೇಬಿನ ಕೆನ್ನೆ, ಮೋನಾಲಿಸ ನನ್ನೇ ನಾಚಿಸುವಂತಹ ನಗು,ಬಿಂಕ ವಯ್ಯಾರದಿಂದ ಯುವಕರ ಕನಸಿನ ರಾಣಿಯಾಗಿ ಮೆರೆದಿದ್ದ ಮಾಲಾಶ್ರೀ ಅವರು, ಇದೀಗ ತಮ್ಮ ಮಗಳನ್ನು ಕೂಡ ಸಿನಿಮಾರಂಗಕ್ಕೆ ಕಳುಹಿಸುತ್ತಿದ್ದು, ಅನನ್ಯ ತನ್ನ ತಾಯಿಯಂತೆಯೇ ಡ್ರೀಮ್ ಗರ್ಲ್ ಆಗುತ್ತಾರಾ ಕಾದು ನೋಡಬೇಕಿದೆ.

Advertisement
Share this on...