ಮಾಲಾಶ್ರೀ ಅವರ ಈ ಸಿನಿಮಾ ನೋಡಿ ಟಾಲಿವುಡ್ ಬೆಚ್ಚಿಬಿದ್ದಿದ್ದು ಯಾಕೆ ಗೊತ್ತಾ ?

in ಮನರಂಜನೆ/ಸಿನಿಮಾ 110 views

ಟಾಲಿವುಡ್ ಸಿನಿ ಲೋಕವೇ ಹಾಗೆ, ಅದ್ದೊಂದು ಅದ್ಧೂರಿ ವೆಚ್ಚದ ಸಿನಿಮಾಗಳ ಲೋಕ. ಈ ಸಿನಿ ಲೋಕದಲ್ಲಿ ಹೊಡೆದಾಟ ಮತ್ತು ಸಾಹಸಗಳ ಸನ್ನಿವೇಶಗಳು ಸರ್ವೇ ಸಾಮಾನ್ಯವಾಗಿರುತ್ತದೆ. ಸಾಹಸ ಸನ್ನಿವೇಶಗಳಗನ್ನು ಚಿತ್ರಿಸಲು ಲಕ್ಷಗಟ್ಟಲೆ ವೆಚ್ಚ ಮಾಡುವುದು ಈ ಟಾಲಿವುಡ್ ನಲ್ಲಿ ಸಹಜ. ಆಕ್ಷನ್ ದೃಶ್ಯಗಳಲ್ಲಿ ಅಪರೂಪದ ಮತ್ತು ಮೈನವಿರೇಳಿಸುವ ಸ್ಟಂಟ್‌ಗಳನ್ನು ಮಾಡುವುದರಲ್ಲಿ ಸದಾ ಮುಂದಿರುತ್ತಾರೆ. ಆದರೆ ಈ ದುಬಾರಿ ದುನಿಯಾ ಕೂಡ ನಮ್ಮ ಕನ್ನಡದ ಒಂದು ಚಿತ್ರ ನೋಡಿ ಬೆರಗಾಗಿಬಿಟ್ಟಿದ್ದರು. ಆ ಸಿನಿಮಾ ಮತ್ಯಾವುದು ಅಲ್ಲ ಕನಸಿನ ರಾಣಿ ಮಾಲಾಶ್ರೀ ಅವರ ಅಭಿನಯದ ‘ದುರ್ಗಿ’ ಸಿನಿಮಾ. ಇನ್ನು ತೆಲುಗು ಸಿನಿಮಾಗಳಿಗೆ ರೌಡಿಸಂ, ಹೋರಾಟದ ಕಥೆ ಸೂಕ್ತವಾಗಿತ್ತು. ಆದರೆ ಆ ಮಾತನ್ನ ನಟಿ ಮಾಲಾಶ್ರೀ ತಮ್ಮದಾಗಿಸಿಕೊಂಡಿದ್ದರು. ಒಂದು ಕಾಲದಲ್ಲಿ ಪ್ರೇಮಕಥೆಯ ಸಿನಿಮಾಗಳಿಂದ ಜನರ ಮನಸು ಗೆದ್ದಿದ್ದ ಮಾಲಾಶ್ರೀ, ತಾವು ಆಕ್ಷನ್ ಪ್ರಧಾನ ಪಾತ್ರಗಳನ್ನೂ ನಿಭಾಯಿಸಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದರು. ಅಷ್ಟೇ ಅಲ್ಲ, ತಮ್ಮ ಹೆಸರಿನ ಮೂಲಕವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಷ್ಟು ಸಾಮರ್ಥ್ಯ ಹೊಂದಿದ್ದ ಕೆಲವೇ ನಾಯಕಿಯರಲ್ಲಿ ಮಾಲಾಶ್ರಿ ಅವರು ಕೂಡ ಒಬ್ಬರು.

Advertisement

 

Advertisement


ಸಾಕಷ್ಟು ವರ್ಷಗಳ ಬ್ರೇಕ್ ನ ಬಳಿಕ ನಟಿ ಮಾಲಾಶ್ರೀ ನಟಿಸಿದ್ದ ಚಿತ್ರವೇ ‘ದುರ್ಗಿ’. ಈ ಸಿನಿಮಾ 2004ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಸ್ವಂತ ತಂಗಿಯನ್ನು ಕೊಂದ ರಾಜಕಾರಣಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಮಹಿಳಾ ರೌಡಿಯಾಗಿ ಮಾಲಾಶ್ರೀ ಕಾಣಿಸಿಕೊಂಡಿದ್ದರು. ಸಿನಿಮಾದ ಆರಂಭದಲ್ಲಿನ ಹೊಡೆದಾಟದ ದೃಶ್ಯ ಮೈನವಿರೇಳಿಸುವಂತಿತ್ತು. ಸಿನಿಮಾದಲ್ಲಿ ಅವರ ಇಂಟ್ರೊಡಕ್ಷನ್ ಕೂಡ ಸಾಹಸ ದೃಶ್ಯದ ಮೂಲಕ ಕೂಡಿತ್ತು. ಇನ್ನು ತೆಲುಗು ಮಂದಿಯನ್ನ ಬೆಚ್ಚಿ ಬೀಳಿಸಿದ್ದು, ಬಸ್ ನಿಲ್ದಾಣದಲ್ಲಿ ನಡೆಯುವ ಹೊಡೆದಾಟದ ಆ ಸನ್ನಿವೇಶ. ಆ ರೀತಿಯಾದಂತಹ ರೋಮಾಂಚನಕಾರಿ ಸಾಹಸ ದೃಶ್ಯವನ್ನು ಮಾಡಿಸಿದ್ದು ಥ್ರಿಲ್ಲರ್ ಮಂಜು ಅವರು.ಇನ್ನು ಈ ಸಿನಿಮಾ ಬಿಡುಗಡೆಯಾಗಿ ಶತದಿನೋತ್ಸವವನ್ನು ಬಾರಿಸಿ ಮಾಲಾಶ್ರೀ ಅವರಿಗೆ ಒಳ್ಳೆಯ ಕಮ್ಬ್ಯಾಕ್ ತಂದುಕೊಟ್ಟಿತು.

Advertisement


ಮಾಲಾಶ್ರೀ ಅವರನ್ನು ನೋಡಲೆಂದೆ ಚಿತ್ರಮಂದಿರಕ್ಕೆ ಅದೆಷ್ಟೋ ಜನ  ಬಂದಿದ್ದವರು, ಅವರ ಸಾಹಸ ದೃಶ್ಯಗಳನ್ನು ಕಂಡು ಫಿದಾ ಆಗಿಬಿಟ್ಟಿದ್ದರು. ಈ ಸಿನಿಮಾ ನೋಡಿದ ತೆಲುಗು ಮಂದಿ, ಇದು ತಮ್ಮ ನೆಲದ ಚಿತ್ರಗಳಿಗೆ ಹೊಂದಿಕೊಳ್ಳುತ್ತದೆ ಎಂದು ನಿರ್ಮಾಪಕರು ರೀಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದರು. ಆಶ್ಚರ್ಯಕರ ಸಂಗತಿ ಏನೆಂದರೆ ಕನ್ನಡದಲ್ಲಿ ಮಾಲಾಶ್ರೀ ನಟಿಸಿದ್ದ ದುರ್ಗಿ ಪಾತ್ರವನ್ನು ತೆಲುಗಿನಲ್ಲಿ ಖ್ಯಾತ ನಟ ಜೂ. ಎನ್‌ಟಿಆರ್ ಅಭಿನಯಿಸಿದರು. ಲೇಡಿ ರೌಡಿಯಾಗಿದ್ದ ಕನ್ನಡ ಚಿತ್ರದ ಪಾತ್ರವನ್ನು ತೆಲುಗಿನಲ್ಲಿ ಹೀರೋಗೆ ಬದಲಿಸಲಾಗಿತ್ತು.ಕನ್ನಡದ ದುರ್ಗಿ ತೆಲುಗಿನಲ್ಲಿ ‘ನರಸಿಂಹುಡು’ ಆಗಿತು. ಆದರೆ ಈ ಸಿನಿಮಾ ತೆಲುಗು ನೆಲದಲ್ಲಿ ಸೋತು ಹೋಯಿತು. ಲೇಡಿ ರೌಡಿಯ ಪಾತ್ರಕ್ಕೆ ಖದರ್ ನೀಡಿದ ಮಾಲಾಶ್ರೀ ಅವರ ಪಾತ್ರವನ್ನು ಜೂ. ಎನ್‌ಟಿಆರ್ ಅವರಿಂದ ಸಾಧ್ಯವಾಗಿರಲಿಲ್ಲ.

Advertisement

ಆ ಸಮಯದಲ್ಲಿ ಅರ್ಮುಗಮ್ ಖ್ಯಾತಿಯಾ ರವಿಶಂಕರ್ ಅವರು ನಟರಾಗಿ, ಕಂಠದಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು.ಇನ್ನು ವಿಶೇಷಕರ ಸಂಗತಿ ಏನೆಂದರೆ ಅವರು ನಿರ್ದೇಶಕರೂ ಆಗಿದ್ದರು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ.bಇನ್ನು ಇದೇ ಮೊಟ್ಟ ಮೊದಲ ಬಾರಿಗೆ ರವಿಶಂಕರ್ ಅವರು ನಿರ್ದೇಶಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ಇದೇ ‘ದುರ್ಗಿ’ ಸಿನಿಮಾದ ಮೂಲಕ. ಇನ್ನು ಅವರು ನಿರ್ದೇಶಿಸಿದ್ದು ಇದೊಂದೇ ಸಿನಿಮಾವನ್ನು ಮಾತ್ರ. ಈ ಚಿತ್ರಕ್ಕೆ ‘ಕೋಟಿ’ ನಿರ್ಮಾಪಕ ರಾಮು ಬಂಡವಾಳ ಹೂಡಿದ್ದರು.


ಆದರೆ ಬೇಸರದ ಸಂಗತಿ ಏನೆಂದರೆ ಈ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಿದಾಗ ಅವರಿಗೆ ನಿರ್ದೇಶನದ ಅವಕಾಶ ಸಿಗಲಿಲ್ಲ. ಜೂ. ಎನ್‌ಟಿಆರ್, ಅಮಿಶಾ ಪಟೇಲ್ ಮತ್ತು ಸಮೀರಾ ರೆಡ್ಡಿ ನಟಿಸಿದ್ದ ಈ ಚಿತ್ರವನ್ನು ಬಿ. ಗೋಪಾಲ್ ಎಂಬುವವರು ನಿರ್ದೇಶಿಸಿದ್ದರು. ಆದ ಕಾರಣ ನಿರ್ದೇಶಕ ರವಿಶಂಕರ್ ಅವರಿಗೆ ಸಹಾಯಕ ನಿರ್ದೇಶಕರನ್ನಾಗಿ ಮಾಡಲಾಯಿತು.ಈ ವಿಚಾರವನ್ನುರವಿಶಂಕರ್ ಬೇಸರದಿಂದ ಹೇಳಿಕೊಂಡಿದ್ದರು.ಇನ್ನು ಈ ಕನ್ನಡದ ದುರ್ಗಿ ಚಿತ್ರ ಹಿಂದಿಗೆ ‘ಮೈ ಹೂಂ ದುರ್ಗಾ’ ಮತ್ತು ಮಲಯಾಳಂಗೆ ‘ಭಸ್ಮಾಸುರನ್’ ಎಂಬ ಹೆಸರಿನಲ್ಲಿ ಡಬ್ ಆಗಿತ್ತು. ಬಹುತಾರಾಗಣದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು. ಕನ್ನಡದಲ್ಲಿ ನಾಯಕಿ ಮುಖ್ಯಪಾತ್ರದಲ್ಲಿ ನಟಿಸಿದ್ದ ಚಿತ್ರದ ತೆಲುಗಿನ ರೀಮೇಕ್‌ನಲ್ಲಿ ಹೀರೋ ನಟಿಸಿದ್ದು ಚಿತ್ರರಂಗದ ವಿಶೇಷ..

Advertisement
Share this on...