ಸಿನಿಮಾ ಶೂಟಿಂಗ್ ಇಲ್ಲದೆ ಜೀವನ ನಡೆಸಲು ಈ ನಟಿ ಮಾಡುತ್ತಿರುವ ಕೆಲಸ ಏನು ಗೊತ್ತಾ..?

in ಮನರಂಜನೆ/ಸಿನಿಮಾ 173 views

ಕೆಲವರು ಕಷ್ಟಗಳು ಬಂದಾಗ ತುಂಬಾ ಕುಗ್ಗಿ ಹೋಗುತ್ತಾರೆ. ಕಷ್ಟಗಳ ಪರಿಸ್ಥಿತಿಯನ್ನು ಎದುರಿಸದೇ ಕಂಗಾಲಾಗಿ ಹೋಗಿ ಬಿಡುತ್ತಾರೆ. ಇನ್ನೂ ಕೆಲವರಂತು ಆ ದೇವರು ನಮಗೆ ಇಂತಹ ಕಷ್ಟ ಕೊಡಬೇಕಿತ್ತಾ ಎಂದು ತಲೆ ಮೇಲೆ ಕೈ ಹೊತ್ತು ಕುಳಿತು ಬಿಡುತ್ತಾರೆ. ಎಲ್ಲೋ ಕೆಲವರು ಮಾತ್ರ ಎಂತಹ ಕಷ್ಟದ ಪರಿಸ್ಥಿತಿ ಬಂದರೂ ಆ ಕಷ್ಟದಲ್ಲಿಯೇ ಒಂದು ಸಣ್ಣ ಬೆಳಕನ್ನು ಹುಡುಕುತ್ತಾರೆ. ಆ ಬೆಳಕಿನಲ್ಲಿಯೇ ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ.  ಈ ನಟಿಯೂ ಸಹ ಲಾಕ್ ಡೌನ್ ಕಾರಣದಿಂದಾಗಿ ಸಿನಿಮಾ ಶೂಟಿಂಗ್ ಇಲ್ಲದೆ ಸುಮ್ಮನೆ ಮನೆಯಲ್ಲಿ ಕುಳಿತು ಕೊಳ್ಳಬೇಕಾಯಿತು. ಜೀವನ ನಿರ್ವಹಣೆಗೆ ಹಣದ ಅವಶ್ಯಕತೆ ತುಂಬಾ ಇದ್ದುದರಿಂದ ಚಿಂತೆಯಾಗಿ ಏನಪ್ಪ ಮಾಡೋದು ಎನ್ನುವಂತಾಯಿತು. ಆದರೆ ಈ ನಟಿ ಸುಮ್ಮನೆ ಯೋಚಿಸುತ್ತಾ ಕೂರಲಿಲ್ಲ. ಬದಲಾಗಿ ಈಗಿನ ಪರಿಸ್ಥಿತಿಯಲ್ಲಿ ಜೀವನ ಮಾಡುವುದಕ್ಕಾಗಿ ಒಂದು ನಿರ್ಧಾರ ಮಾಡಿದರು. ಆ ನಿರ್ಧಾರ ಏನು..? ಆ ನಟಿ ಯಾರು ಗೊತ್ತಾ..?

Advertisement


ಮಲೆಯಾಳಂ ಚಿತ್ರರಂಗದಲ್ಲಿ ಸಣ್ಣ-ಪುಟ್ಟ ಪೋಷಕ ಪಾತ್ರಗಳಲ್ಲಿ ನಟಿಸುವ ನಟಿ ಮಂಜು. ರಂಗಭೂಮಿಯಲ್ಲಿ ಕಳೆದ 15 ವರ್ಷಗಳಿಂದ ತೊಡಗಿಸಿಕೊಂಡಿದ್ದ ಈ ನಟಿ ನಾಟಕಗಳಲ್ಲಿಯೂ ಸಹ ನಟಿಸುತ್ತಿದ್ದರು. ಆದರೆ ಈ ಲಾಕ್ ಡೌನ್ ನಿಂದ ನಾಟಕಗಳಲ್ಲಿಯೂ ಅಭಿನಯಿಸಲು ಸಾಧ್ಯವಾಗಲಿಲ್ಲ. ಇನ್ನೂ ಇದೇ ವೇಳೆಯಲ್ಲಿ ಮಂಜು ಜೀವನೋಪಾಯಕ್ಕಾಗಿ ಒಂದು ದಾರಿ ಕಂಡು ಕೊಂಡರು. ಸದ್ಯಕಂತು ಈ ಮಹಾಮಾರಿ ತೊಲಗುವ ಲಕ್ಷಣಗಳಿಲ್ಲ ಎಂದು ಅರಿತ ಮಂಜು ಆಟೋರಿಕ್ಷಾ ಚಾಲನೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

Advertisement

Advertisement

ಆಟೋ ರಿಕ್ಷಾದಿಂದ ದುಡಿದ ತನ್ನ ದುಡಿಮೆಯಿಂದ ಒಂದು ಭಾಗವನ್ನು ಬಡವರ ಸಹಾಯಕ್ಕಾಗಿಯೂ ಸಹ ವಿನಿಯೋಗಿಸುತ್ತಿದ್ದಾರೆ. ಕೇರಳ ಪೀಪಲ್ಸ್ ಆರ್ಟ್ಸ್ ಕ್ಲಬ್ ಮತ್ತು ಕೆಪಿಎಸ್ಸಿ ರಂಗಭೂಮಿ ಸಂಸ್ಥೆಗಳ ಸಹಾಯದಿಂದ ಆಟೋ ಖರೀದಿಸಿರುವ ಮಂಜು ಇತರ ಮಹಿಳೆಯರಿಗೆ ಆದರ್ಶ ಮಹಿಳೆಯಾಗಿದ್ದಾರೆ. ಇನ್ನು ಈ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈಗಿನ ಪರಿಸ್ಥಿತಿಯಲ್ಲಿ ಮಂಜುರವರಂತೆ ಇನ್ನೂ ಅಸಂಖ್ಯಾತ ಜನರು ಜೀವನ ನಿರ್ವಹಣೆ ಮಾಡಲು ಹೊಸ-ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿರುವುದು ಅಂತೂ ಸತ್ಯ. ನಟಿ ಮಂಜುರವರ ಆತ್ಮಸ್ಥೈರ್ಯ ಹಾಗೂ ಸ್ವಾಭಿಮಾನ ಇತರರಿಗೂ ಮಾದರಿಯಾಗುವಂತದ್ದು.

Advertisement

– ಸುಷ್ಮಿತಾ

Advertisement
Share this on...