ಈಗ ನಾವು ಹೇಳಲು ಹೊರಟಿರುವುದು ಮಾಲ್ಗುಡಿ ಡೇಸ್ ಧಾರವಾಹಿಯಲ್ಲಾ..!

in ಕನ್ನಡ ಮಾಹಿತಿ 86 views

ಮಾಲ್ಗುಡಿ ಡೇಸ್ ಈ ಹೆಸರು ಕೇಳುತ್ತಿರುವ ಹಾಗೆ ನಮಗೆ ಮೊದಲು ನೆನಪಾಗುವ ವ್ಯಕ್ತಿಯೇ ದಿವಂಗತ ಶ್ರೀ ಶಂಕರ್ ನಾಗ್ ಅವರು ಹೌದು ಆರ್.ಕೆ ನಾರಾಯಣ್ ಅವರ ಕೃತಿಯನ್ನು ಆದರಿಸಿ ಮಾಲ್ಗುಡಿ ಡೇಸ್ ಧಾರಾಹಿಯನ್ನು ನಿರ್ಮಾಣ ಮಾಡಿದ ಇವರು ಸುಂದರವಾಗಿ ಕ್ರಿಯಾತ್ಮಕವಾಗಿ ನಿರ್ಮಾಣ ಮಾಡಿ ಜನರ ಮನಸ್ಸನ್ನು ಗೆದ್ದಿದ್ದರು.
ಆದರೆ ಈಗ ನಾವು ಹೇಳಲು ಹೊರಟಿರುವುದು ಮಾಲ್ಗುಡಿ ಡೇಸ್ ಧಾರವಾಹಿಯಲ್ಲಾ ಇದು ಅದಕ್ಕೆ ಸಂಬಂಧ ಪಟ್ಟ ವಿಷಯ ಮತ್ತೆ ವಸ್ತು ಸಂಗ್ರಹಾಲಯ, ಶಂಕರ್ ನಾಗ್ ಅವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡಿರುವುದು ಶಿವಮೊಗ್ಗ ಜಿಲ್ಲೆಯಲ್ಲಿ ಈ ಧಾರಾವಾಹಿ ನಿರ್ಮಾಣಕ್ಕೆ ಪ್ರಮುಖವಾಗಿ ಬಳಸಿರುವುದು ಅರಸಾಳು ಎಂಬ ರೈಲ್ವೆ ನಿಲ್ದಾಣವನ್ನು ಹೌದು ಬ್ರಿಟಿಷರ ಆಳ್ವಿಕೆಯಲ್ಲಿ ಮರದ ದಿಮ್ಮಿಗಳನ್ನು ಸಾಗಿಸಲು ಈ ರೈಲ್ವೆ ನಿಲ್ದಾಣವನ್ನು ಬಳಸುತ್ತಿದ್ದರು ,ಈಗ ಇದರ ಪಕ್ಕದಲ್ಲಿಯೇ ಹೊಸ ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಗಿದೆ. ಶಂಕರ್ ನಾಗ್ ಅವರು ಈ ನಿಲ್ದಾಣವನ್ನು ಬಳಸಿ ಕೊಂಡಿರುವುದಕ್ಕೆ ಅವರ ಹಾಗೂ ಮಾಲ್ಗುಡಿ ಡೇಸ್ ಧಾರವಾಹಿಯ ನೆನಪಿಗಾಗಿ ಈ ರೈಲ್ವೆ ನಿಲ್ದಾಣವನ್ನು ಈಗ ಹೊಸದಾಗಿ ಮಾಲ್ಗುಡಿ ಮ್ಯೂಸಿಯಂ ಆಗಿ ಮಾರ್ಪಾಡು ಮಾಡಲಾಗಿದೆ.

Advertisement

Advertisement

ಹಳೆ ವಸ್ತುಗಳನ್ನೇ ಬಳಸಿ ಹೊಸ ರೂಪವನ್ನು ಕೊಟ್ಟು ವಿಭಿನ್ನ ವಿಶೇಷವಾದ ವಸ್ತು ಸಂಗ್ರಹಾಲವಾಗಿ ಮಾಡಲಾಗಿದೆ,ಮಾಲ್ಗುಡಿ ಡೇಸ್ ಧಾರವಾಹಿಯಲ್ಲಿ ಬಳಸಿದ ಎಲ್ಲಾ ವಸ್ತುಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ,ಅಷ್ಟೆ ಅಲ್ಲದೆ ಮಾಲ್ಗುಡಿ ಡೇಸ್ ನ ಸ್ವಾಮಿ ಮತ್ತು ಅವನ ಗೆಳೆಯರು, ಮಿಠಾಯಿವಾಲ, ಶಂಕರ್ ನಾಗ್ ಅವರ ಪ್ರತಿಮೆ,ಇನ್ನೂ ಇತ್ಯಾದಿ ಎಲ್ಲವನ್ನೂ ನಾವಿಲ್ಲಿ ಕಾಣಬಹುದಾಗಿದೆ. ವಿಶೇಷ ಏನೆಂದರೆ ಈ ಮ್ಯೂಸಿಯಂ ನ ನಿರ್ಮಾಣಕ್ಕೆ ಬರೀ ಕಚ್ಚಾ ವಸ್ತುಗಳನ್ನೇ ಬಳಸಲಾಗಿದೆ ,ಅದು ಅಲ್ಲದೆ ಒಂದು ರೈಲ್ವೆ ನಿಲ್ದಾಣವನ್ನು ಈ ರೀತಿಯಾಗಿ ಮಾರ್ಪಡಿಸಿರುವುದು ಇದುವರೆಗೂ ಎಲ್ಲು ಕಂಡು ಬರುವುದಿಲ್ಲ.

Advertisement

ಇದೊಂದು ವಿಭಿನ್ನ ಪ್ರಯತ್ನವೇ ಸರಿ ,ಇದಕ್ಕೆ ಕಾಲಿಡುತ್ತಿದ್ದಂತೆ ನಮ್ಮನ್ನು ನೇರವಾಗಿ ಮಾಲ್ಗುಡಿ ಎಂಬ ನಗರಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದು ಸುಳ್ಳಲ್ಲ ,ಈ ಮಾಲ್ಗುಡಿ ಡೇಸ್ ಅನ್ನು ನೋಡಲು ಅನೇಕ ಕಡೆಯಿಂದ ಜನರು ಆಗಮಿಸುತ್ತಿದ್ದಾರೆ. ಅಂದಹಾಗೆ ಇದು ಕಂಡು ಇರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಎಂಬ ಪಟ್ಟಣದ ಹತ್ತಿರ ಇದೆ, ರಿಪ್ಪನ್ ಪೇಟೆ ಇಂದ 5km ದೂರದಲ್ಲಿದೆ , ಶಿವಮೊಗ್ಗ ದಿಂದ ಹೊಸನಗರ ಹೋಗುವ ದಾರಿಯ ಮಧ್ಯದಲ್ಲಿ ಈ ಮಾಲ್ಗುಡಿ ಡೇಸ್ ಸಿಗುತ್ತದೆ .

Advertisement


ಅಷ್ಟೆ ಅಲ್ಲದೆ ಈ ರೈಲ್ವೆ ನಿಲ್ದಾಣದ ಅಕ್ಕ ಪಕ್ಕದಲ್ಲಿ ಅನೇಕ ಐತಿಹಾಸಿಕ ಸ್ಥಳಗಳು ಇವೆ ನೀವೇನಾದರೂ ಇಲ್ಲಿಗೆ ಬಂದರೆ ಅನೇಕ ಸ್ಥಳ ಗಳಿಗು ಹೋಗಬಹುದು ಅವುಗಳೆಂದರೆ ಇಲ್ಲಿಗೆ 10 ಕಿ ಮೀ ದೂರದಲ್ಲಿ ಗುಳಿ ಗುಳಿ ಶಂಕರ ಎಂಬ ಪುಣ್ಯ ಸ್ಥಳ ಇದೆ ಇಲ್ಲಿಗೆ ದೇಶದ ನಾನಾ ಕಡೆಯಿಂದ ಜನರು ಆಗಮಿಸುತ್ತಿದ್ದಾರೆ, ಹಾಗೆಯೇ ಹುಂಚದ ಜೈನ ಬಸದಿ ಮಠ , ಹೊಸನಗರದ ರಾಮಚಂದ್ರಾಪುರ ಮಠ, ಹೀಗೆ ಅನೇಕ ಸ್ಥಳಗಳು ಇವೆ.

ನೀವೇನಾದರೂ ಇಲ್ಲಿಗೆ ಬಂದರೆ ನಿಮ್ಮ ಎಲ್ಲಾ ತಲೆನೋವನ್ನು ಮರೆತು ಖುಷಿಯಾಗಿ ಇರುವುದು ಸತ್ಯ ಒಂದು ದಿನದ ಮಟ್ಟಿಗೆ ಹೊರಗಡೆ ಹೋಗಿ ಬರುವುದಾದರೆ ಈ ಸ್ಥಳಗಳು ಒಳ್ಳೆಯ ಆಯ್ಕೆ. ಮಾಲ್ಗುಡಿ ಡೇಸ್ ಮತ್ತೆ ಬಂದಿರುವುದು ಒಂದು ವಿಶೇಷವೆ ಆಗಿದೆ ಸಾದ್ಯವಾದರೆ ಒಮ್ಮೆ ಬೇಟಿ ಕೊಟ್ಟು ನೋಡಿ,ಆರ್ ಕೆ ನಾರಾಯಣ್ ಅವರ ಕೃತಿ, ಶಂಕರ್ ನಾಗ್ ಅವರ ಕಲ್ಪನೆ ಮತ್ತು ಸಾಮಾಜಿಕ ಸಂದೇಶ,ಹಾಗೆ ಕಚ್ಚಾವಸ್ತುಗಳು ಮರು ಬಳಕೆ ಹೇಗಿದೆ ಎಂದು.
– ಶರತ್ ಕುಮಾರ್ ಟಿ
ಸಾರಗಾನ ಜೆಡ್ಡು.

ಕೊಲ್ಲೂರು ಮೂಕಾಂಬಿಕಾ ದೇವಿ ಜ್ಯೋತಿಷ್ಯ ಕೇಂದ್ರ
ಶ್ರೀ ಕಾಳಿಮಾತಾ ದೇವಿ ಉಪಾಸಕರಾದ ಪಂಡಿತ್ ಶ್ರೀ ವಾಸುದೇವ ಗುರೂಜಿ ಅವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಶತ್ರು ಕಾಟ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಮಾಟ ಮಂತ್ರ ನಿವಾರಣೆ ಆರೋಗ್ಯ ಹಣಕಾಸು ಮದುವೆ ಸಂತಾನ ಪ್ರೇಮ ವಿವಾಹ ಮನೆಯಲ್ಲಿ ಅಶಾಂತಿ ಗಂಡ ಹೆಂಡತಿ ಕಲಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ 3 ದಿನದಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ. ph : 8970080017 ಇಂದೇ ಕರೆ ಮಾಡಿ.

Advertisement
Share this on...