ಮಂಡ್ಯ ರಮೇಶ್ ಅವರ ಜನ್ಮದಿನದಂದು ಅವರ ಬಗೆಗಿನ ಕೆಲವು ಇಂಟ್ರೆಸ್ಟಿಂಗ್ ವಿಷಯ ತಿಳಿಯೋಣ ಬನ್ನಿ !

in ಮನರಂಜನೆ/ಸಿನಿಮಾ 72 views

ಮಂಡ್ಯ ರಮೇಶ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ ? ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ಕಾಮಿಡಿ ಕಲಾವಿದ ಮತ್ತು ತಮ್ಮ ನಟನೆಯಿಂದಲೇ ಎಲ್ಲರನ್ನು ನಕ್ಕು ನಗಿಸುವ ಹಸನ್ಮುಖಿ  ಈ ಮಂಡ್ಯ ರಮೇಶ್ . ಕನ್ನಡ ಚಿತ್ರರಂಗಕ್ಕೆ ಇವರು ನೀಡಿರುವ ಕೊಡುಗೆಗಳು ಅಪಾರವಾದದ್ದು. ಇವರನ್ನು ಚಿತ್ರ ನಟ ಅನ್ನುವುದಕ್ಕಿಂತ ಒಬ್ಬ ಅದ್ಭುತವಾದ ರಂಗಭೂಮಿ ಕಲಾವಿದರು ಎಂದರೆ ತಪ್ಪಾಗುವುದಿಲ್ಲ. ಬಾಲ್ಯದಿಂದಲೇ ನಾಟಕಗಳ ಮೇಲೆ ಅಪಾರ ಒಲವನ್ನು ಮೂಡಿಸಿಕೊಂಡಿದ್ದ ಅವರು ನೀನಾಸಂ  ರಂಗಾಯಣದಲ್ಲಿ 1989 ರವರೆಗೆ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಈ ಅವಧಿ ಮುಗಿದ ಮೇಲೆ 1995 ರಲ್ಲಿ ಶಿವರಾಜ್ ಕುಮಾರ್ ಅವರ ಅಭಿನಯದ ಜನುಮದ ಜೋಡಿ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು, ಕನ್ನಡ ಚಿತ್ರರಂಗದಲ್ಲಿ ಅದ್ಬುತವಾದ ಹಾಸ್ಯ ನಟ ಎಂದು ಗುರುತಿಸಿಕೊಳ್ಳುತ್ತಾರೆ. ನಂತರ  2002ರಲ್ಲಿ ತಮ್ಮದೇ ಆದ ಸ್ವಂತ ನಟನಾ ಶಾಲೆಯನ್ನು ಮೈಸೂರಿನಲ್ಲಿ ಪ್ರಾರಂಭಿಸುವ ಮೂಲಕ ಅನೇಕ ಪ್ರತಿಭೆಗಳನ್ನು  ಸಿನಿಮಾ ರಂಗಕ್ಕೆ ಪರಿಚಯಿಸುವುದರ ಮೂಲಕ ನಟನ ಗುರುಗಳೂ ಸಹ ಆಗಿದ್ದಾರೆ.

Advertisement

Advertisement

ತಮ್ಮ ನಟನಾ ಶಾಲೆಯ ಮೂಲಕ ಕರ್ನಾಟಕದ ಅನೇಕ ಭಾಗಗಳಲ್ಲಿ ವರ್ಕ್ ಶಾಪ್ ನಡೆಸುವ ಮುಖೇನ ನಟನಾ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿರುವ ಅವರು ರಂಗವಲ್ಲಿ ಮತ್ತು ಕನವರಿಕೆ ಎಂಬ ಎರಡು ಪುಸ್ತಕವನ್ನು ಸಹ ಬರೆದಿದ್ದಾರೆ ಅದು ಮುಖ್ಯವಾಗಿ ಅವರ ನಟನಾ ರಂಗದ ಜೀವನ ಕುರಿತು. ನಟನೆ ಬಗ್ಗೆ ಮಂಡ್ಯ ರಮೇಶ್ ಅವರಿಗೆ ಇದ್ದಂಥ ಆಸಕ್ತಿ ಅಪರಿಮಿತ, ಪ್ರತಿಯೊಂದು ಪಾತ್ರಕ್ಕೂ ವಿಶೇಷವಾಗಿ ಜೀವ ತುಂಬುತ್ತಿದ್ದ ಅವರು, ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್, ರವಿಚಂದ್ರನ್ ಸೇರಿದಂತೆ ಅನೇಕ ದಿಗ್ಗಜ ನಟರೊಂದಿಗೆ ಅಭಿನಯಿಸಿ ಕನ್ನಡ ಚಿತ್ರ ರಸಿಕರ ಮನ ತಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಕನ್ನಡ ಚಿತ್ರರಂಗಕ್ಕೆ ಹೆಚ್ಚಾಗಿ ತಮ್ಮ ನಟನಾ ಶಾಲೆಯಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಂಡ್ಯ ರಮೇಶ್ ಅವರು ತಮ್ಮ ಬಾಲ್ಯವನ್ನು ಬೆಳ್ಳೂರು ಮತ್ತು ನಾಗಮಂಗಲದಲ್ಲಿ  ಕಳೆಯುತ್ತಾರೆ.

Advertisement

Advertisement

ಮಂಡ್ಯದಲ್ಲಿ ಹೆಚ್ಚು ಸಮಯ ಕಳೆದಿದ್ದರಿಂದ ಅವರಿಗೆ ಅವರ ಗುರುಗಳಾದ ಬಿ ವಿ ಕಾರಂತರು ಮೊದಲಿಗೆ ಮಂಡ್ಯ ರಮೇಶ್ ಎಂದು ನಾಮಕರಣ ಮಾಡಿ ಕರೆದಿದ್ದರಂತೆ. ಅಂದಿನಿಂದ ಇಂದಿನವರೆಗೂ ಮಂಡ್ಯ ರಮೇಶ್ ಎಂಬ ಹೆಸರು ಮುಂದುವರಿದುಕೊಂಡು ಬಂದಿದೆ. ಯಾರೇ ತಮ್ಮನ್ನು ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ ? ಎಂದು ಕೇಳಿದರೆ ನಾನು ಒಬ್ಬ ಕಲಾವಿದನಾಗುತ್ತೇನೆ ಎಂದು ಎಲ್ಲರಿಗೂ ಹೇಳುತ್ತಿದ್ದರಂತೆ.

ತಾವು ಶಾಲೆಯಲ್ಲಿ ಮೊದಲ ಬಾರಿಗೆ ಗಾಂಧಿಯ ಪಾತ್ರವನ್ನು ಮಾಡಿದ್ದು ಅಂದು ಒಬ್ಬರು ನನ್ನನ್ನು ನೋಡಿ ಕೇಕೆ ಹಾಕಿ ನಕ್ಕಿದ್ದರು ಅದನ್ನು ನಾನು ನನ್ನ ನಟನೆ ನೋಡಿ ಖುಷಿ ಪಟ್ಟು ಚಪ್ಪಾಳೆ ಹೊಡೆದರು ಎಂದುಕೊಂಡೆ ಎಂದು ತಿಳಿಸಿದರು. ಅವರೇ ಹೇಳುವ ಪ್ರಕಾರ ನಾನು ಇಂದಿಗೂ ಸಾಧಕನಲ್ಲ  ಸಾಧನೆ ಮಾಡುವುದು ಇನ್ನೂ ತುಂಬಾ ಇದೆ.  ನಾನು ಕಲಾವಿದನಾಗಲಿಲ್ಲ ಎಂದರೆ ಒಬ್ಬ ಪ್ರೈಮರಿ ಶಾಲೆಯ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕನಾಗುತ್ತಿದ್ದೆ  ಎಂದು ಹೇಳಿದ್ದಾರೆ. ಬರವಣಿಗೆಯಲ್ಲಿ ತುಂಬಾ ಆಸಕ್ತಿ  ಹೊಂದಿರುವ ಅವರು ಒಳ್ಳೆಯ ಪತ್ರಕರ್ತ ಕೂಡ ಆಗಬಹುದಿತ್ತು ಎಂದು ಹೇಳಿದ್ದಾರೆ. ಇಂದಿಗೂ ಕೂಡ ಮೈಸೂರಿನಲ್ಲಿ ಸ್ವಂತ ಮನೆಯನ್ನು ಮಂಡ್ಯ ರಮೇಶ್ ಹೊಂದಿಲ್ಲ ಬಾಡಿಗೆ ಮನೆಯಲ್ಲಿ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಅವರು ನನ್ನ ಸುತ್ತಮುತ್ತ ಯುವ ತಲೆಮಾರಿನ ಮೂವತ್ತು ಜನ ವಿದ್ಯಾರ್ಥಿಗಳು, ಮಕ್ಕಳು, ನನ್ನ  ನಟನಾ ಶಾಲೆಯಲ್ಲಿ ಮುಖವಾಡ ತಯಾರಿಸುವುದು ,ಪುಸ್ತಕಗಳನ್ನು  ಓದುವುದು, ಕಲೆ ಎಂಬ ಹೂವು ಇವರಲ್ಲಿ ಅರಳುತ್ತಿರುವುದು, ಅದನ್ನು ನೋಡಿದರೆ ನನಗೆ ಖುಷಿಯಾಗುತ್ತದೆ. ನನ್ನ ಬಡತನ,  ನೋವುಗಳನ್ನು,  ಮರೆಯಲು ಏಕೈಕ ಕಾರಣ  ಎಂದರೆ ಈ ಒಂದು ಅದ್ಭುತವಾದ ಕಲೆ,  ಹೀಗಾಗಿ ಸಿರಿತನದ ಬಗ್ಗೆ ನನಗೆ ಯಾವ ಆಸಕ್ತಿಯೂ ಇಲ್ಲ ಎಂದು ತಿಳಿಸಿದ್ದಾರೆ.. ಅಬ್ಬಾ ಎಂತಹ ಕಲಾವಿದ ಅಲ್ಲವೇ ?

ಸಿನಿಮಾದಲ್ಲಿ ಸೇವೆ ಮಾಡಿದಷ್ಟೇ ರಂಗಭೂಮಿಯಲ್ಲೂ ತಮ್ಮ ಹೆಸರು ಅಜರಾಮರವಾಗಿ ಉಳಿಯುವಷ್ಟು ಸೇವೆ ಮಾಡುತ್ತಿರುವ ಮಂಡ್ಯ ರಮೇಶ್ ಅವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದು ಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.

Advertisement
Share this on...