ಭೂಗತ ಲೋಕದ ‘ಆ’ ವ್ಯಕ್ತಿ ಬಗ್ಗೆ ಬರುತ್ತಿದೆ ಸಿನಿಮಾ…ಆದರೆ ಮುತ್ತಪ್ಪ ರೈ ಅಲ್ಲ..! ಪಕ್ಕಾ ಮಾಹಿತಿ ಇಲ್ಲಿದೆ ನೋಡಿ…

in ಸಿನಿಮಾ 77 views

ವಿಭಿನ್ನ ವ್ಯಕ್ತಿಗಳ, ಸೆಲಬ್ರಿಟಿಗಳ, ಕುಖ್ಯಾತಿ ಪಡೆದವರ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದು ಹೋಗಿವೆ. ರೌಡಿಗಳ ಬಗ್ಗೆಯೂ ಸಿನಿಮಾಗಳು ತಯಾರಾಗಿವೆ. ಇದೀಗ ಭೂಗತ ಲೋಕವನ್ನು ಆಳಿದ ಡಾನ್​​​ಗಳ ಬಯೋಪಿಕ್ ತಯಾರಾಗುತ್ತಿದೆ. ಇತ್ತೀಚೆಗಷ್ಟೇ ನಿಧನರಾದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ ಬಯೋಪಿಕ್​​​​​​ ಚಿತ್ರ ಬಾಲಿವುಡ್​​​​ನಲ್ಲಿ ಆರಂಭವಾಗಿತ್ತು. ರಾಮ್​​​ಗೋಪಾಲ್​ವರ್ಮಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಆದರೆ ಸ್ವತ: ಮುತ್ತಪ್ಪ ರೈ ಈ ಚಿತ್ರವನ್ನು ಮುಂದುವರೆಸುವುದು ಬೇಡ ಎಂದು ಹೇಳಿದ್ದರು. ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ಮುತ್ತಪ್ಪ ರೈ ಪಾತ್ರವನ್ನು ಮಾಡುತ್ತಿದ್ದರು. ಹಿಂದಿನ ವಿಚಾರಗಳು ಮರುಕಳಿಸುವುದು ಬೇಡ. ನಾನು ಎಲ್ಲವನ್ನೂ ಬಿಟ್ಟು ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ಈ ಸಿನಿಮಾ ಬಿಡುಗಡೆಯಾದರೆ ಮತ್ತೊಮ್ಮೆ ಹಳೆಯ ವಿಚಾರಗಳನ್ನು ಕೆದಕಿದಂತೆ ಆಗುತ್ತದೆ ಎಂದು ಮುತ್ತಪ್ಪ ರೈ ಅವರು ಈ ಚಿತ್ರವನ್ನು ಮುಂದುವರೆಸಲು ಅನುಮತಿ ನೀಡಲಿಲ್ಲ.

Advertisement

 

Advertisement

Advertisement

ಇದೀಗ ಮಂಗಳೂರಿನ ಡಾನ್​​​, 1992 ರಲ್ಲಿ ಹತ್ಯೆಯಾದ ಅಮರ್ ಆಳ್ವ ಬಯೋಪಿಕ್ ತಯಾರಾಗಲಿದೆ. ಈ ಮುನ್ನ ಅಮರ್ ಆಳ್ವ ಪಾತ್ರವನ್ನು ರಿಷಭ್ ಶೆಟ್ಟಿ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಆ ಪಾತ್ರವನ್ನು ಮಾಜಿ ಡಾನ್, ದಿವಂಗತ ಎಂ.ಪಿ. ಜಯರಾಜ್ ಪುತ್ರ ಅಜಿತ್ ಜಯರಾಜ್ ಮಾಡಲಿದ್ದಾರೆ ಎನ್ನಲಾಗಿದೆ. ಅಜಿತ್ ಜಯರಾಜ್ ಈಗಾಗಲೇ ತ್ರಾಟಕ, ಆ ದೃಶ್ಯ, ರೈಮ್ಸ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಮರ್ ಆಳ್ವ ಬಯೋಪಿಕ್ ಚಿತ್ರಕ್ಕೆ ‘ಒನ್ಸ್​ ಅಪಾನ್ ಎ ಟೈಮ್ ಇನ್ ಮಂಗಳೂರು’ ಎಂದು ಹೆಸರಿಡಲಾಗಿದ್ದು ಲೋಕೇಶ್ ಶೆಟ್ಟಿ ಎಂಬುವವರು ನಿರ್ಮಿಸಿ ನಿರ್ದೇಶಿಸಲಿದ್ದಾರೆ.

Advertisement

 

ಅಮರ್ ಆಳ್ವ ಮಂಗಳೂರಿನವರು. ಬಹಳ ಡೈನಾಮಿಕ್ ವ್ಯಕ್ತಿಯಾಗಿದ್ದ ಅಮರ್ ಆಳ್ವ ದಾವೂದ್ ಇಬ್ರಾಹಿಂ, ಆಯಿಲ್ ಕುಮಾರ್, ಜಯರಾಜ್​​, ಶರತ್​​​​ ಶೆಟ್ಟಿ , ಮುತ್ತಪ್ಪ ರೈ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಮುಂಬೈ ಭೂಗತ ಲೋಕದ ಜೊತೆಗೆ ಕೂಡಾ ಅವರು ಸಂಪರ್ಕದಲ್ಲಿದ್ದರು. 1992 ರಲ್ಲಿ ಮಂಗಳೂರಿನ ಚರ್ಚ್​ವೊಂದರ ಬಳಿ ಭೂಗತ ಜಗತ್ತಿನ ವ್ಯಕ್ತಿಗಳಿಂದಲೇ ಗುಂಡೇಟು ತಿಂದು ಹತ್ಯೆಯಾದರು. ಅಮರ್ ಆಳ್ವ ಭೂಗದ ಲೋಕದ ವ್ಯಕ್ತಿ ಎಂದು ಕುಖ್ಯಾತಿ ಪಡೆದಿದ್ದರೂ ಅವರು ಅನೇಕರಿಗೆ ಸಹಾಯ ಮಾಡಿದ್ದರು ಎಂದು ಅವರ ಬಗ್ಗೆ ಸಾಕಷ್ಟು ಜನರು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಇದೀಗ ಇವರ ಬಗ್ಗೆ ಸಿನಿಮಾ ತಯಾರಾಗಲಿದ್ದು ಲಾಕ್​​​ಡೌನ್ ನಂತರ ಸಿನಿಮಾ ಕೆಲಸಗಳು ಆರಂಭವಾಗಲಿದೆ.

Advertisement
Share this on...