ಒಂದೇ ದಿನ ಕನ್ನಡದ ಟಾಪ್ ನಟಿಯರ ಮೇಲೆ ಕಿಡಿಗೇಡಿಗಳ ಕಣ್ಣು !

in ಮನರಂಜನೆ 72 views

ಮಹಾಮಾರಿ ಕೊರೋನಾದಿಂದಾಗಿ ಇಡೀ ದೇಶವೆ ಲಾಕ್ ಡೌನ್ ಆಗಿದ್ದು, ಇದರಿಂದಾಗಿ ಸಿನಿಮಾರಂಗದ ಚಟುವಟಿಕೆಗಳೆಲ್ಲ ನಿಂತು ಹೋಗಿದೆ. ಆದ ಕಾರಣ ಸಿನಿಮಾ ತಾರೆಯರು ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳಲು ಸದಾ ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿದ್ದಾರೆ. ಬಣ್ಣ ಬಣ್ಣದ ಪೋಸ್ಟ್ ಗಳನ್ನು ಮಾಡುತ್ತಾ, ತಮ್ಮ ಖಾತೆಯಲ್ಲಿ ಲೈವ್‌ ಬಂದು ಅಭಿಮಾನಗಳ ಜೊತೆ ಮಾತನಾಡುತ್ತಿದ್ದಾರೆ.ಇದರಿಂದ ಅವರಿಗೆ ಸಮಯ ಕಳೆದಂತೆಯೂ ಆಗುತ್ತದೆ. ಇನ್ನು ಇತ್ತೀಚಿಗೆ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಪ್ರಾರಂಭವಾಗಿದ್ದು, ಈಗಾಗಲೆ ಕೆಲವರು ತಮ್ಮ ಸಿನಿ ವೃತ್ತಿಗೆ ಹಿಂತಿರುಗಿದ್ದಾರೆ.

Advertisement

 

Advertisement

Advertisement

ಸಿನಿಮಾ ತಾರೆಯರ ಪ್ರಚಾರಕ್ಕೆ ಸೋಶಿಯಲ್ ಮೀಡಿಯಾ ದೊಡ್ಡ ವೇದಿಕೆ. ಇದೇ ಕಾರಣಕ್ಕಾಗಿ ಸ್ಟಾರ್ ಗಳು ಫೇಸ್‌ಬುಕ್‌, ಟ್ವಿಟರ್ , ಇನ್ಸ್ಟಾಗ್ರಾಮ್ ಗಳಲ್ಲಿ ಸದಾ ನಿರತರಾಗಿರುತ್ತಾರೆ. ಇನ್ನು ಸೆಲೆಬ್ರೆಟಿಗಳ ಖಾತೆಗಳ ಮೇಲೆ ಕಿಡಿಗೇಡಿಗಳ ಕಣ್ಣು ಬೀಳುತ್ತದೆ. ತಾರೆಯರ ಖಾತೆಗಳನ್ನು ಹ್ಯಾಕ್ ಮಾಡಿ ಅದರಲ್ಲಿ ಅಸಭ್ಯ ಚಿತ್ರ ಹಾಗು ವಿಚಿತ್ರ ವಿಡಿಯೋ ಪೊಸ್ಟ್ ಮಾಡಿ ಅಟ್ಟಹಾಸ ಮೆರೆಯುತ್ತಾರೆ. ಅಲ್ಲದೇ ಹ್ಯಾಕ್ ಮಾಡಿದ ಖಾತೆಯಿಂದ ಪ್ರಸಿದ್ಧ ವ್ಯಕ್ತಿಗಳಿಗೆ ಸಂದೇಶ ಕಳುಹಿಸಿ ಕೆಟ್ಟ ಪ್ರಚೋದನೆ ಬರುವಂತೆ ಮಾಡುತ್ತಾರೆ.ಹ್ಯಾಕ್ ಮಾಡುವುದರಲ್ಲಿಯೇ ಪರಿಣತರಾದ ಸಾಕಷ್ಟು ಮಂದಿ ಇದ್ದಾರೆ. ಹೀಗೆ ಇಂತಹ ದುಷ್ಕರ್ಮಿಗಳು ಒಂದೇ ದಿನ ಕನ್ನಡದ ಇಬ್ಬರು ನಟಿಯರ ಇನ್‌ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ.

Advertisement

 

ಕನ್ನಡ ಚಿತ್ರರಂಗದ ಟಗರು ಪುಟ್ಟಿ, ಕೆಂಡ ಸಂಪಿಗೆಯ ದುಂಡು ಮಲ್ಲಿಗೆ,ಪಡ್ಡೆ ಹುಡುಗರ ಹಾಟ್ ಫೇವರೇಟ್ ಎಂದೇ ಕರೆಸಿಕೊಳ್ಳುವ ಮಾನ್ವಿತಾ ಹರೀಶ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಇದೆ ಶನಿವಾರ ಹ್ಯಾಕ್ ಮಾಡಲಾಗಿದ್ದು, ಜೊತೆಗೆ ಫೇಸ್‌ಬುಕ್‌ ಖಾತೆಯನ್ನು ಕೂಡ ಹ್ಯಾಕ್ ಮಾದಲಾಗಿದೆ. ಈ ರೀತಿಯಾದ ಮಾಹಿತಿಯನ್ನು ಸ್ವತಃ ಮಾನ್ವಿತಾ ಅವರೇ ತಿಳಿಸಿದ್ದಾರೆ.

 

‘ನನ್ನ ಖಾತೆಯಿಂದ ಬಂದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ನನ್ನ ಪ್ರೊಫೈಲ್ ಹ್ಯಾಕ್ ಆಗಿದೆ’ ಎಂದು ಮಾನ್ವಿತಾ ತಿಳಿಸಿದ್ದಾರೆ. ‘ಫೇಸ್‌ಬುಕ್ ಖಾತೆಯ ಲಿಂಕ್‌ಅನ್ನು ಬಹಳ ಕಷ್ಟಪಟ್ಟು ಸರಿಪಡಿಸಿದ್ದೇನೆ. ನನ್ನ ಪ್ರೊಫೈಲಿಂದ ಬಂದ ಯಾವುದೇ ಲಿಂಕ್‌ ಮೇಲೆ ಕ್ಲಿಕ್ ಮಾಡಬೇಡಿ’ ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ. ಅವರ ಇನ್‌ಸ್ಟಾಗ್ರಾಂ ಖಾತೆ ಬೇರೆ ಭಾಷೆಯಲ್ಲಿ ಪ್ರಕಟವಾಗುತ್ತಿತ್ತು. ಅದರ ಮೇಲೆ ಹ್ಯಾಕರ್ಸ್ ಅಲರ್ಟ್ ಎಂಬ ಸಂದೇಶ ಕೂಡ ಬಂದಿತ್ತು. ಈ ಖಾತೆಗಳನ್ನು ಸರಿಪಡಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

 

ಇನ್ನು ಕರ್ನಾಟಕದ ಕ್ರಶ್, ಮುಗುಳು ನಗೆಯ ಮುಗುತಿ ಸುಂದರಿ , ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಅವರ ಖಾತೆ ಕೂಡ ಶನಿವಾರ ಹ್ಯಾಕ್ ಆಗಿದ್ದು, ರಾತ್ರಿ ಅದನ್ನು ಸರಿ ಪಡಿಸಿರುವುದಾಗಿ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ.’ಕೆಲವು ಸಮಯದ ಹಿಂದೆ ನನ್ನ ಅಕೌಂಟ್ ಹ್ಯಾಕ್ ಆಗಿದೆ. ಹೀಗಾಗಿ ನನ್ನ ಖಾತೆಯಿಂದ ಬರುವ ಯಾವುದೇ ಲಿಂಕ್‌ಅನ್ನು ಓಪನ್ ಮಾಡಬೇಡಿ ‘ಎಂದು ಆಶಿಕಾ ಮನವಿ ಮಾಡಿದ್ದಾರೆ.

 

ಸೋಶಿಯಲ್ ಮೀಡಿಯಾದಲ್ಲಿ ಪರಿಣಿತರಾಗಿರುವರ ಸಹಾಯದಿಂದ ತಮ್ಮ ಖಾತೆಯನ್ನು ಸರಿಪಡಿಸಿಕೊಂಡಿರುವ ಆಶಿಕಾ, ತಮ್ಮ ಖಾತೆಯಿಂದ ಕಾಪಿ ರೈಟ್ ಉಲ್ಲಂಘನೆಯಾಗಿದೆ. ಸೂಕ್ತ ಪ್ರತಿಕ್ರಿಯೆ ನೀಡದೆ ಇದ್ದರೆ 24 ಗಂಟೆಯೊಳಗೆ ಖಾತೆ ನಿಷ್ಕ್ರಿಯವಾಗಲಿದೆ ಎಂಬ ಎಚ್ಚರಿಕೆಯನ್ನು ಅವರು ಶೇರ್ ಮಾಡಿದ್ದಾರೆ.

Advertisement
Share this on...