ನಟಿ ಮಾನ್ಯ ಇದೀಗ ವಿದೇಶದಲ್ಲಿ ಎಂತಾ ಕೆಲಸ ಮಾಡುತ್ತಿದ್ದಾರೆ ಗೊತ್ತಾ ? ವಿಡಿಯೋ ಇಲ್ಲಿದೆ ನೋಡಿ..

in ಮನರಂಜನೆ 166 views

ಸಿನಿಮಾ ಎಂಬ ಬಣ್ಣದ  ಲೋಕದಲ್ಲಿ ಅದೆಷ್ಟೋ ಕಲಾವಿದರು ನಕ್ಷತ್ರದಂತೆ ಹೊಳೆದು, ಆಕಾಶ ದೀಪದಂತೆ ಕಣ್ಮರೆಯಾಗುತ್ತಾರೆ. ರೀಲ್ ನಲ್ಲಿ ಕಾಣಿಸುವಂತಹ ಅವರ ಸುಖಕರ ಬಾಳು, ರಿಯಲ್ ಲೈಫ್ ನಲ್ಲಿ ದುಃಖದ ಸೆರೆಮಾಲೆಯಾಗಿರುತ್ತದೆ. ಈ ಪೈಕಿ ನಟಿಮಣಿಯರದ್ದೆ ಜಾಸ್ತಿ. ದಶಕಗಳ ಕಾಲ ಚಿತ್ರರಂಗವನ್ನು ಆಳಿ, ಯುವ ಪೀಳಿಗೆಗಳ ನಿದ್ದೇ ಗೆಡಿಸಿ. ಗಗನದೆತ್ತರ ಬೆಳೆದ ಅದೆಷ್ಟೋ ಸ್ಟಾರ್ ನಟಿಯರ ವೈವಾಹಿಕ ಜೀವನ ತೂತು ಮಡಿಕೆಯಂತೆ ಆಗಿಬಿಟ್ಟಿರುತ್ತದೆ. ಕೆಲವರು ವಿಚ್ಛೇದನ ಪಡೆದು ಗಂಡನ ಸಹವಾಸವೇ ಬೇಡ ಅಂತ ಒಂಟಿ ಜೀವನ ಸಾಗಿಸುತ್ತಿದ್ದರೆ, ಇನ್ನು ಕೆಲವರು ಮರು ವಿವಾಹವಾಗಿ ಸುಖಕರ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಸೋತು ಗೆದ್ದ ನಟಿ ಮಣಿಯರ ಪೈಕಿ ಮಾನ್ಯ ಕೂಡ ಒಬ್ಬರುತೆಲುಗು ಚಿತ್ರರಂಗದಲ್ಲಿ ತಮ್ಮ ನಟನಾ ವೃತ್ತಿ ಜೀವನವನ್ನು ಪ್ರಾರಂಭಿಸಿದ ಮಾನ್ಯ, ಕನ್ನಡ ಮಲಯಾಳಂ ತಮಿಳು ಚಲನಚಿತ್ರಗಳಲ್ಲಿ ನಟಿಸಿ ಖ್ಯಾತರಾಗಿದ್ದಾರೆ. 2000 ದಲ್ಲಿ, ಮಲಯಾಳಂ ನ ಖ್ಯಾತ ನಿರ್ದೇಶಕ ಲೋಹಿಥದಾಸ್ ಅವರು ಮಲಯಾಳಂ ಚಿತ್ರಗಳಿಗೆ ಪರಿಚಯಿಸಿದರು ಮತ್ತು ಹೆಚ್ಚಾಗಿ ಯಶಸ್ಸನ್ನು ಮಾತೃ ಭಾಷೆ ತೆಲುಗುಗಿಂತ ಮಲಯಾಳಂ ಮತ್ತು ಕನ್ನಡದಲ್ಲಿ ಕಂಡರು. ಇಂಗ್ಲೆಡ್ ನಲ್ಲಿ ವೈದ್ಯರಾಗಿದ್ದ ಪ್ರಹ್ಲಾದನ್ ಮತ್ತು ಆಂಧ್ರಪ್ರದೇಶ ಮೂಲದ ನಾಯ್ಡು ಕುಟುಂಬದಲ್ಲಿ ಪದ್ಮಿನಿ ದಂಪತಿಗೆ ಜನಿಸಿದರು.

Advertisement

Advertisement

ಇಂಗ್ಲೆಂಡ್ ನಲ್ಲಿ ಬೆಳೆದ ಮಾನ್ಯ, ತಮ್ಮ 9 ನೇ ವಯಸ್ಸಿನಲ್ಲಿ ದಕ್ಷಿಣ ಭಾರತಕ್ಕೆ ತೆರಳಿದರು ಮತ್ತು ಅವರಿಗೆ ಅಂಜನಾ ಎಂಬ ಸಹೋದರಿ ಕೂಡ ಇದ್ದಾಳೆ !ನಟಿ ಮಾನ್ಯ ತಮ್ಮ 14 ನೇ ವಯಸ್ಸಿನಲ್ಲಿ ಮಾಡಲಿಂಗ್ ವೃತ್ತಿಯನ್ನು ಪ್ರಾರಂಭಿಸಿದರು. ಇದಾದ ಕೆಲವೇ ವರ್ಷದಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು ಮತ್ತು ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಅಭಿನೇತ್ರಿ ಎಂದೆನಿಸಿಕೊಂಡಿದ್ದಾರೆ. ಇನ್ನು  ಗಣಿತ ಮತ್ತು ಅಂಕಿ ಅಂಶಗಳಲ್ಲಿ ದ್ವಿ ಪದವಿ ಪಡೆದಿದ್ದಾರೆ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಯನ್ನು ಮುಗಿಸಿದ್ದಾರೆ.

Advertisement

Advertisement

ಕನ್ನಡದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಜೊತೆ ಶಾಸ್ತ್ರಿ ಸಿನಿಮಾದಲ್ಲಿ ಅಭಿನಯಿಸಿ, ಯುವಕರ ಕ್ರಶ್ ಆಗಿದ್ದ ಮಾನ್ಯ, ಸಾಹಸಸಿಂಹ ವಿಷ್ಣುವರ್ದನ್ ಅವರ ಜೊತೆ ವರ್ಷ
ಸಿನಿಮಾದಲ್ಲಿ ಅಭಿನಯಿಸಿ ಸಿನಿ ಪಂಡಿತರಿಂದ ಪ್ರಶಂಸೆಯನ್ನು ಗಿಟ್ಟಿಸಿಕೊಂಡರು. ನಂತರ 31 ಮೇ 2008 ರಂದು ಸತ್ಯ ಪಟೇಲ್ ಅವರನ್ನು ವಿವಾಹವಾದ ಬಳಿಕ ಚಿತ್ರರಂಗದಿಂದ  ಕಣ್ಮರೆಯಾದರು. ಆದರೇ ಅದೇಕೋ ಏನೋ ಸಂಸಾರದಲ್ಲಿ ಕೆಲವು ಭಿನ್ನಾಭಿಪ್ರಾಯ ಹುಟ್ಟಿಕೊಂಡ ಕಾರಣ, ಸತ್ಯ ಅವರಿಗೆ ವಿವಾಹವಾದ ಕೆಲವೇ ಕೆಲವೇ ವರ್ಷದಲ್ಲಿ ವಿಚ್ಛೇಧನ ಪಡೆದರು. ನಂತರ 2013 ರಲ್ಲಿ ವಿಕಾಸ್ ಬಾಜ್ ಪೈ ಅವರೊಂದಿಗೆ ಮತ್ತೊಂದು ವಿವಾಹ ವಾದರು.. ವಿಶೇಷ ಏನೆಂದರೆ ಕಡಿಮೆ ಅವಧಿಯಲ್ಲಿ ಮಾನ್ಯ, ದಕ್ಷಿಣ ಭಾರತದ ಟಾಪ್ ನಟಿಯಾಗಿ ಮಿಂಚಿದ್ದರು. ಇದೀಗ ವಿದೇಶದಲ್ಲಿ ಎಂತಹ ಕೆಲಸ ಮಾಡುತ್ತಿದ್ದಾರೆ ತಿಳಿದುಕೊಳ್ಳಲು ಮುಂದೇ ಓದಿ..

 

ಸಿನಿಮಾದಿಂದ ಕಣ್ಮರೆಯಾದ ಮಾನ್ಯ ಮೊದಲ ಪತಿಯ ಜೊತೆ ವಿಚ್ಛೇದನ ಪಡೆದು, ವಿಕಾಸ್ ಅವರ ಜೊತೆ ಸುಖ ಜೀವನ ನಡೆಸುತ್ತಿದ್ದು, ಇವರಿಬ್ಬರಿಗೂ ಮೂರು ವರುಷದ ಮುದ್ದಾದ ಮಗಳಿದ್ದಾಳೆ ಮತ್ತು ಈಗ ಅಮೇರಿಕಾದಲ್ಲಿ ಪತಿಯೊಡನೆ ನೆಲೆಯೂರಿದ್ದಾರೆ. ಎಂಬಿಎ ಮಾಡಿದ್ದ ಮಾನ್ಯ, ಅಮೇರಿಕಾದ ಜಿ.ಪಿ ಮಾರ್ಗನ್ ಕಂಪನಿಯಲ್ಲಿ ಹೆಚ್ ಆರ್ ವಿಭಾಗದಲ್ಲಿ ಮ್ಯಾನೆಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ದಶಕದಲ್ಲಿ ಮಲಯಾಳಂ ಮತ್ತು ತಮಿಳಿನಲ್ಲಿ, ಹಾಟ್ ಪೇವರೇಟ್ ನಟಿಯಾಗಿ ಮಿಂಚಿದ್ದ ಮಾನ್ಯ, ಮೊದಲ ವೈವಾಹಿಕ ಜೀವನದಲ್ಲಿ ಬೇಸತ್ತು, ಇತ್ತ ಸಿನಿಮಾ ರಂಗವನ್ನು ತ್ಯಜಿಸಿ, ಮತ್ತೊಂದು ವಿವಾಹವನ್ನು ಆಗಿ ವಿದೇಶಲ್ಲಿ ಕೆಲಸವನ್ನು ನಿರ್ವಹಿಸುತ್ತ ಪತಿ ಮತ್ತು ಮಗಳೊಡನೆ ಸುಖ ಜೀವನ ನಡೆಸುತ್ತಿದ್ದಾರೆ!

Advertisement
Share this on...