ಅಮೆರಿಕದಲ್ಲಿ ಮಾನ್ಯ ನಾಯ್ಡು ಮಗಳಿಗೆ ಹೇಳಿಕೊಡುತ್ತಿರುವುದೇನು ..? ವಿಡಿಯೋ ನೋಡಿ

in ಕನ್ನಡ ಮಾಹಿತಿ/ಮನರಂಜನೆ 432 views

ಕರ್ನಾಟಕದಲ್ಲಿ ಹುಟ್ಟಿ, ಕನ್ನಡ ಚಿತ್ರರಂಗದಿಂದ ಕರಿಯರ್ ಆರಂಭಿಸಿ ಬೇರೆ ಭಾಷೆಯ ಸಿನಿಮಾಗಳಲ್ಲಿ ಹೆಸರು ಮಾಡಿದ ಎಷ್ಟೋ ನಟ-ನಟಿಯರು ಕನ್ನಡ ಮಾತನಾಡಲು ಹಿಂಜರಿಯುತ್ತಾರೆ. ಅದರಲ್ಲಿ ಕೆಲವೇ ಕೆಲವರು ಮಾತ್ರ ನಮ್ಮ ಭಾಷೆ, ನಮ್ಮ ರಾಜ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಬೇರೆ ಭಾಷೆಯಿಂದ ಬಂದು ಕನ್ನಡದಲ್ಲಿ ಹೆಸರು ಮಾಡಿದ ಕೆಲವು ನಟಿಯರು ಕನ್ನಡದ ಬಗ್ಗೆ ಬಹಳ ಹೆಮ್ಮೆ, ಗೌರವ ಇರಿಸಿಕೊಂಡಿರುತ್ತಾರೆ. ಅಂತವರಲ್ಲಿ ಮಾನ್ಯ ನಾಯ್ಡು ಕೂಡಾ ಒಬ್ಬರು. ಮಾನ್ಯ ತಮ್ಮ ಮಗಳಿಗೂ ಕೂಡಾ ಕನ್ನಡ ಹೇಳಿಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಮಾನ್ಯ ಹುಟ್ಟಿ, ಬೆಳೆದದ್ದೇ ಇಂಗ್ಲೆಂಡ್​​ನಲ್ಲಿ. 9 ನೇ ವರ್ಷಕ್ಕೆ ಅಪ್ಪ ಅಮ್ಮನೊಂದಿಗೆ ಭಾರತಕ್ಕೆ ಬಂದ ಮಾನ್ಯ ಕೆಲವೊಂದು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದರು.

Advertisement

Advertisement

ತೆಲುಗು, ಮಲಯಾಳಂ, ತಮಿಳು ಸಿನಿಮಾಗಳ ಜೊತೆಗೆ ಮಾನ್ಯ ಕನ್ನಡಕ್ಕೂ ಬಂದರು. ಸಾಹಸಸಿಂಹ ಡಾ. ವಿಷ್ಣುವರ್ಧನ್​​ ಅವರೊಂದಿಗೆ ‘ವರ್ಷ’ ಸಿನಿಮಾದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ ಮಾನ್ಯ ನಂತರ ಶಂಭು, ಶಾಸ್ತ್ರಿ, ಬೆಳ್ಳಿ ಬೆಟ್ಟ, ಅಂಬಿ, ಈ ಪ್ರೀತಿ ಒಂಥರಾ ಸಿನಿಮಾಗಳಲ್ಲಿ ನಟಿಸಿದರು. ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಚಿತ್ರರಂಗಕ್ಕೆ ಗುಡ್​ ಬೈ ಹೇಳಿದ ಮಾನ್ಯ ನಾಯ್ಡು ಮದುವೆಯಾಗಿ ನ್ಯೂಯಾರ್ಕಿನಲ್ಲಿ ನೆಲೆಸಿದ್ಧಾರೆ. ಮಾನ್ಯ ನಾಯ್ಡು ಈಗ ಪತಿ ವಿಕಾಸ್ ಬಾಜ್ಪೈ ಹಾಗೂ ಮಗಳು ಓಮಿಷ್ಕಾ ಜೊತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

Advertisement

Advertisement

‘ವರ್ಷ’ ಚಿತ್ರದ ‘ವಾಸಂತಿ ವಾಸಂತಿ ನನ್ನೆದೆ ತೋಟಕೆ ಬರ್ತಿಯಾ’ ಎಂಬ ಹಾಡು ಇಂದಿಗೂ ಬಹಳ ಫೇಮಸ್​​. ಮಾನ್ಯ ಈ ಹಾಡನ್ನು ಹಾಡಿದ್ಧಾರೆ. ಸ್ವಲ್ಪವೂ ತಪ್ಪಿಲ್ಲದಂತೆ ಬಹಳ ರಾಗಬದ್ಧವಾಗಿ ಮಾನ್ಯ ಈ ಹಾಡನ್ನು ಮಗಳಿಗೆ ಹಾಡಿದ್ಧಾರೆ. ಅಲ್ಲದೆ “ನನ್ನ ಹೆಸರು ಓಮಿಷ್ಕಾ, ಎಲ್ಲರಿಗೂ ನಮಸ್ಕಾರ” ಎಂದು ಹೇಳುವಂತೆ ಮಗಳಿಗೆ ಹೇಳಿಕೊಟ್ಟಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಹಂಚಿಕೊಂಡಿರುವ ಮಾನ್ಯ ನಾಯ್ಡು, ಕನ್ನಡಕ್ಕೆ ತಮ್ಮನ್ನು ಪರಿಚಯಿಸಿದ ನಿರ್ದೇಶಕ ಎಸ್. ನಾರಾಯಣ್ ಹಾಗೂ ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್​​ಗೆ ಧನ್ಯವಾದ ಅರ್ಪಿಸಿದ್ದಾರೆ

‘ನನಗೆ ಈ ಹಾಡು ಹಾಡಲು ಬಹಳ ಇಷ್ಟ. ಮೊದಲ ಕನ್ನಡ ಸಿನಿಮಾದಲ್ಲಿ ವಿಷ್ಣುವರ್ಧನ್ ಸರ್ ಜೊತೆ ನಟಿಸಲು ಅವಕಾಶ ದೊರೆತಿದ್ದು ನನ್ನ ಅದೃಷ್ಟ’ ಎಂದು ಕೂಡಾ ಮಾನ್ಯ ಬರೆದುಕೊಂಡಿದ್ದಾರೆ. ತಮ್ಮ ವಿಡಿಯೋವನ್ನು ರಮೇಶ್ ಅರವಿಂದ್, ಶ್ವೇತಾ ಚೆಂಗಪ್ಪ ಹಾಗೂ ಅನು ಮುಖರ್ಜಿಗೆ ಟ್ಯಾಗ್ ಮಾಡಿದ್ಧಾರೆ.

Advertisement
Share this on...