ಸಾಗರದ ಮಲೆನಾಡಿನ ಮಡಿಲ ಮಾರಿಕಾಂಬ ಜಾತ್ರೆಯ ಕಂಪು ಇದೆ ಎಲ್ಲೇಲ್ಲಿಯೂ..

in ಕನ್ನಡ ಮಾಹಿತಿ 269 views

ನಮ್ಮ ಕರ್ನಾಟಕದ ಸಹ್ಯಾದ್ರಿ ತಪ್ಪಲಿನಲ್ಲಿ ಅತಿ ಹೆಚ್ಚು ಅಡಿಕೆ ಮತ್ತು ತೆಂಗಿನ ತೋಟಗಳ ನಡುವೆ ಕಂಗೊಳಿಸುವ ಜಿಲ್ಲೆಯೆ ಶಿವಮೊಗ್ಗ ಜಿಲ್ಲೆ. ಮಲೆನಾಡ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಈ ಜಿಲ್ಲೆಯು,ತನ್ನ ಪ್ರಾಕೃತಿಕ ಸೌಂದರ್ಯದಿಂದಾಗಿಯೆ ಎಂತಹವರನ್ನು ಕಣ್ಮನ ಸೆಳೆಯುತ್ತದೆ.  ಇಂತಹ ಜಿಲ್ಲೆಯ, ಕೆಳದಿ ಹಾಗೂ ಇಕ್ಕೇರಿ ಎಂಬ ಐತಿಹಾಸಿಕ ಸ್ಥಳಗಳ ನಡುವೆ ನೆಲೆನಿಂತ ಪ್ರಕೃತಿ ಸೌಂದರ್ಯದ ಸೊಬಗಿನ ತಾಣವೆ ಸಾಗರ. ಸಾಗರ ಇದು ಪ್ರಕೃತಿಯಲ್ಲಷ್ಟೆ ಅಲ್ಲದೆ ಧಾರ್ಮಿಕವಾಗಿಯೂ ತನ್ನ ಪ್ರಸಿದ್ದಿಯನ್ನು ಉಳಿಸಿಕೊಂಡು ಬೆಳಿಸಿಕೊಂಡು ಬಂದಿದೆ. ಈ ಪ್ರಸಿದ್ದಿಗೆ ಮುಖ್ಯವಾದ ಕಾರಣ ಮೂರು ವರ್ಷಗಳಿಗೊಮ್ಮೆ ನಡೆಯುವ ತಾಯಿ ಮಾರಿಕಾಂಬ ಜಾತ್ರಾ ಮಹೋತ್ಸವ. ಈ ಜಾತ್ರೆಯು ಅಂತ್ಯಂತ ರಮಣೀಯವಾಗಿ ಕಣ್ಮನ ಸೆಳೆಯುವಂತದ್ದು. ಈ ತಾಯಿಯು ಶಿರಸಿ ಮಾರಿಕಾಂಬೆಯ ಸಹೋದರಿಯೆಂದೆನಿಸಿಕೊಂಡಿದ್ದಾಳೆ. ಸಾಗರ ಪೂರ್ಣ ಭಾಗದ ಹೃದಯ ಬಾಗದಲ್ಲಿ ನೆಲೆ ನಿಂತಿರುವ ಸಾಗರ ಮಾರಿಕಾಂಬ ದೇವಿಯನ್ನು ಸ್ವತಃ ಆದಿ ಶಂಕರಾಚಾರ್ಯರೆ ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ಪ್ರತೀತಿ ಇದೆ. ಕರ್ನಾಟಕದ ಎರಡನೆ ಅತಿ ದೊಡ್ಡ ಜಾತ್ರೆ ಎಂದು ಹೆಗ್ಗಳಿಕೆ ಪಡೆದುಕೊಂಡಿದೆ.

Advertisement

Advertisement

ಈ ದೇಗುಲವನ್ನು ಕೆಳದಿ ರಾಜರಾದ,ಮತ್ತು ಸಾಗರದ ಮೂಲ ಪುರುಷರಾದ ಶಿವಪ್ಪನಾಯಕರು ಆರಾದಿಸಿ ಇಲ್ಲಿ ಚಿಕ್ಕ ಗುಡಿಯನ್ನು ಕಟ್ಟಿಸಿದ್ದಾರೆ.. ಮತ್ತು ಪೂಜೆ ಹಾಗೂ ಜಾತ್ರೆಗೆ ಅಣಿ ಮಾಡಿಕೊಟ್ಟಿದ್ದಾರೆ. ಈ ದೇಗುಲ ಎರಡು ಸಿಂಹಗಳು ಎಳೆಯುವ ರಥದಂತಿರುವುದು ಅಂತ್ಯಂತ ವಿಷೇಷದಾಯಕವಾಗಿದೆ. ದೇಗುಲದ ‌ಮೇಲೆ ದೇವಿಯ ಹಲವು ರೂಪಗಳನ್ನು ಕೆತ್ತನೆ ರೂಪದಲ್ಲಿ ಬಿಂಬಿಸಲಾಗಿದೆ. ಈ ಜಾತ್ರೆ 9 ದಿನಗಳು ನಡೆಯುತ್ತದೆ. ಜಾತ್ರೆಯಲ್ಲಿ ತಾಯಿಯ ವೈಭವವನ್ನು ನೋಡಲು ಎರಡು ಕಣ್ಣುಗಳು ಸಾಲದು.

Advertisement

ಹಿರಿಯರು ಹೇಳುವ ಪ್ರಕಾರ ತಾಯಿ ಮೊದಲನೆ ದಿನದಲ್ಲಿ ಸುಂದರ ಶಾಂತರೂಪದಲ್ಲಿದ್ದು ಇನ್ನೆಂಟು ದಿನಗಳಲ್ಲಿ ಕೋಪ ತುಂಬಿದ ಮುಖದಲ್ಲಿ ಅಲಂಕರಿಸಿರುತ್ತಾಳೆಂದು ಹೇಳುತ್ತಾರೆ. ಹಾಗೂ ಜಾತ್ರೆಗೆ ಬರುವ ಜನರಿಗೆ ಅವಳ ಅಧ್ಬುತ ರೂಪ ನೋಡಿದಾಗ,ತಾಯಿ ನಮ್ಮನ್ನು ಸದಾ ಅವಳ ಕಣ್ಣಿಂದ ನೋಡುತ್ತ ಹರಸಲೆಂದೆ ಇಲ್ಲಿ ನೆಲೆಸಿದ್ದಾಳೇನೊ ಎಂದು ಅನ್ನಿಸುವುದಂತು ಸತ್ಯ. ಜಾತ್ರೆಯ ಸಮಯದಲ್ಲಿ ಅಲ್ಲಿಯ ರಮಣೀಯ ವೈಭವವನ್ನು ನೋಡಿದರೆ,ಈ ಜಾತ್ರೆಯ ಸಡಗರ ಇಡೀ ಸಾಗರವನ್ನೇ ತನ್ನೆಡೆಗೆ ಸೆಳೆದುಕೊಂಡಿದೆಯೇನೋ ಎಂದೆನಿಸುತ್ತದೆ..

Advertisement

 

ಇನ್ನು ಈ ಜಾತ್ರೆಯ ವೈಭವವನ್ನು ನಮ್ಮ ಸರಳ ಮಾತುಗಳಲ್ಲಿ ಹೇಳುವುದಾದರೆ, ಅದರ ತಯಾರಿ ಹಲವು ದಿನಗಳ ಹಿಂದೆಯೆ ಶುರುವಾಗುತ್ತದೆ.ಎಲ್ಲರ ಅತ್ಯ್ತುತ್ತಮವಾದ ಕೆಲಸ, ತಾಳ್ಮೆಹಾಗೂ ಜಾಗ್ರತೆಯಿಂದ ಜಾತ್ರೆಯ ಮತ್ತು ದೇವಿಯ ಅಲಂಕಾರ ಸೊಬಗುಗೊಳ್ಳುತ್ತದೆ. ಜಾತ್ರೆಯ ಸಂಭ್ರಮವನ್ನು ವರ್ಣಿಸಿದಷ್ಟು ಅದು ತನ್ನ ವರ್ಣನೆಯನ್ನು ಹೆಚ್ಚಿಸಿಕೊಳ್ಳುತ್ತದೆ.

ಜಾತ್ರೆಗೆ ಯಾವ ದಾರಿಯಲ್ಲಾದರು ಹೋಗಬಹುದು ಎಂದೆನಿಸುವ ರಸ್ತೆಗಳು, ಸೂರ್ಯದೇವ ಬೆಳಗುವ ಮೊದಲೆ ತಾಯಿಯ ದರ್ಶನಕ್ಕಾಗಿ ಕಾಯುವ ಜನಗಳ ಸಾಲು, ತಾಯಿ ದರ್ಶನವಾದಾಗ ಆಗುವ ಸಂತೋಷ, ಆ ರಸ್ತೆಗಳ ಸಾಲು ಸಾಲು ಅಂಗಡಿಗಳಲ್ಲಿ ತುಂಬಿರುವ ತಿಂಡಿ ತಿನಿಸುಗಳು, ವಿಧ ವಿಧವಾದ ವಸ್ತುಗಳು, ತೊಟ್ಟಿಲು ಎಂದೆ ಪ್ರಸಿದ್ದಿಯಾದ ಎಲ್ಲರು ಕೂತು ಆಡುವಂತ ಆಟದ ಮಿಷನ್ಗಳು, ತಮ್ಮೆಲ್ಲ ಒತ್ತಡದ ಕೆಲಸದಲ್ಲು ಖುಷಿಯಾಗಿ ಬರುವ ಪರಿವಾರಗಳು, ಕಾಲೇಜ್ ಹಾಗೂ ಸ್ಕೂಲ್ ಮುಗಿಸಿ ಬರುವ ವಿದ್ಯಾರ್ಥಿಗಳು, ಆಕರ್ಷಕವಾಗಿ ಮನಸೆಳೆಯುವ ಹಲವಾರು ವಸ್ತುಗಳು, ರಸ್ತೆಯಲ್ಲಿ ಜಾಗವೇ ಇರದ ಹಾಗೆ ಕುತೂಹಲದಿಂದ ಒಡಾಡುವ ಅದೇ ಜನರು,ಕೆರೆಯ ನೀರಿನಲ್ಲಿ ಚಿಕ್ಕ ಚಿಕ್ಕ ಬೋಟ್ಗಳ ಮೂಲಕ ಕೂತು ಮನ ತಣಿಸಿಕೊಳ್ಳುವ ಜನರು,ಹಗಲಿನ ಸೂರ್ಯನ ಬಿಸಿ ಬಿಸಿಯ ಬೆಳಕು, ರಾತ್ರಿಯಲ್ಲಿ ತಂಪಾದ ಗಾಳಿಯ ಜೊತೆ ಹೊಳೆಯುವ ಲೈಟಿಂಗ್ಸ್ ಹೊಳಪು, ..ಇದನ್ನೆಲ್ಲ ನೋಡಿದರೆ,….. ಅಬ್ಬಾ..!!!  ಹೇಳಿದಷ್ಟು ಮುಗಿಯದ ಸೊಬಗು..ಕಣ್ಮನ ಕಂಗೊಳಿಸುವ ಮೆರುಗು..ಷ್ಟೆಲ್ಲ ವೈಭವ ಒಳಗೊಂಡ ತಾಯಿಗೆ ಕೋಟಿ ನಮನಗಳು.. ಮುಂಬರುವ ದಿನಗಳಲ್ಲಿ ನಾವೆಲ್ಲರೂ ಇನ್ನಷ್ಟು ತಾಯಿಯ ಕೃಪೆಗೆ ಪಾತ್ರರಾಗೋಣ..

– ಶರತ್ ಕುಮಾರ್ ಟಿ
ಸಾರಗನ ಜೆಡ್ಡು.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದು’ಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...